ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಿದ ಶಾಸಕ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 28 :- ವೈದ್ಯ ಸ್ನೇಹಿತ ಮಿತ್ರರು ಚುನಾವಣೆಗಾಗಿ ನೀಡಿದ ಹಣದಲ್ಲಿ 12ಲಕ್ಷ ಹಣ ಉಳಿದಿದ್ದು ಅದನ್ನು ಸ್ನೇಹಿತರಿಗೆ ವಾಪಸ್ಸು ಕೊಡಲು ಹೋದಾಗ ಅದನ್ನು ಕ್ಷೇತ್ರದ ನಿಕೃಷ್ಟ ಬದುಕಿನ ಜನತೆಗೆ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕೆ ಬಳಸಿಕೊಳ್ಳುವಂತೆ ತಿಳಿಸಿದ್ದರಿಂದ ಅದನ್ನು ತಂದೆ ಎನ್ ಟಿ ಬೊಮ್ಮಣ್ಣ ಹೆಸರಿನಲ್ಲಿ ಮಕ್ಕಳಿಗೆ ಸ್ಕಾಲರ್ ಶಿಪ್ ಹಾಗೂ ದೇವದಾಸಿ  ವಿಮುಕ್ತ ಮಹಿಳಾ ಸಂಘಕ್ಕೆ ನೀಡುವುದಾಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು. 
ನಂತರ ಮಾತನಾಡುತ್ತ ನಮ್ಮ ತಂದೆ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಹೆಸರಿನಲ್ಲಿ ಪ್ರತಿವರ್ಷ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ನಮ್ಮ ಕುಟುಂಬದಿಂದ ವೈಯಕ್ತಿಕವಾಗಿ  ಸ್ಕಾಲರ್ ಶಿಪ್  ನೀಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರೋತ್ಸಾಹ ಧನ ವಿತರಿಸಿದ ಅವರು ನಾನು ಎಲ್ಲರಿಗೂ ಶಾಸಕನಾಗಿದ್ದು, ಯಾರಿಗೂ ತಾರತಮ್ಯ ಮಾಡುವುದಿಲ್ಲ. ಚುನಾವಣೆಯಲ್ಲಿ ಯಾರಿಗೆ ಎಷ್ಟೆಷ್ಟು ಮತಗಳು ಲಭಿಸಿರುವ  ಫಲಿತಾಂಶದ ವರದಿ ನನ್ನ ಕೈ ಸೇರಿದ್ದು, ಅದನ್ನು ನಾನು ನೋಡುವುದಿಲ್ಲ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಫಲಿತಾಂಶದ ವಿವರ ಇರುವ ಪೇಪರ್ ಗಳನ್ನು ಸಾರ್ವಜನಿಕರೆದುರೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹರಿದು ಹಾಕಿದರು.
 ಕ್ಷೇತ್ರದಲ್ಲಿ ಪಕ್ಷ, ಜಾತಿ ಭೇದ ಇಲ್ಲದೆ ನಾನು ಅಧಿಕಾರ ನಡೆಸುವೆ. ನನಗೆ ವೋಟ್ ಹಾಕಿದವರು, ಹಾಕದಿದ್ದವರೂ ನಮ್ಮವರೇ. ಯಾವುದೇ ಸಂಕೋಚವಿಲ್ಲದೆ ಉತ್ತಮ ಕೆಲಸಗಳಿಗೆ ನನಗೆ ತಿಳಿಸಿ ಎಂದರಲ್ಲದೆ, ವೈದ್ಯ ಸ್ನೇಹಿತರು ಕೊಟ್ಟಿದ್ದ ಹಣದಲ್ಲಿ ಸ್ವಲ್ಪ ಖರ್ಚಾಗಿಲ್ಲ. ಅದನ್ನು ಶಿಕ್ಷಣದ ಪ್ರೋತ್ಸಾಹ, ಸಮಾಜ ಸೇವೆ ಹಾಗೂ ವಿಮುಕ್ತ ದೇವದಾಸಿಯರ ಸಂಘ ಸೇರಿ ಇತರೆ ಕಾರ್ಯಕ್ಕೆ 10 ಲಕ್ಷ ರೂ. ನೀಡುವುದಾಗಿ ತಿಳಿಸಿದರು.
 ಈ ಸಂದರ್ಭದಲ್ಲಿ ಮುಖಂಡರಾದ ನಾಗರಕಟ್ಟೆ ರಾಜೇಂದ್ರ ಪ್ರಸಾದ್, ನಾಗಮಣಿ ಜಿಂಕಲ್, ಉದಯಜನ್ನು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸಿದ್ದನಗೌಡ, ಕುಮಾರಗೌಡ, ಮುಖಂಡರಾದ ನರಸಿಂಹನಗಿರಿ ವೆಂಕಟೇಶ್, ಬಣವಿಕಲ್ಲು ಎರಿಸ್ವಾಮಿ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಕಾವಲಿ ಶಿವಪ್ಪನಾಯಕ, ವಕೀಲ ಡಿ.ಎಚ್.ದುರುಗೇಶ್, ಗುಡೇಕೋಟೆ ವಿಶಾಲಾಕ್ಷಿ,ಕಾನಮಡುಗು ನಿವೃತ್ತ ಎಂಜಿನಿಯರ್ ಶರಣಪ್ಪ, ಮೆಡಿಕಲ್ ಮಂಜುನಾಥ,  ಎನ್.ಪಿ.ಮಂಜುನಾಥ, ಗುಡೇಕೋಟೆ ಬಷೀರ್, ಗೋವಿಂದಪ್ಪ, ಹುಡೇಂ ಪಾಪನಾಯಕ, ನಿವೃತ್ತ ಡಿವೈಎಸ್ ಪಿ ಓಂಕಾರ ನಾಯ್ಕ, ಎ.ಚನ್ನಬಸಪ್ಪ, ಮಾದಿಹಳ್ಳಿ ನಜೀರ್, ಮರುಳಸಿದ್ದಪ್ಪ, ಸಿ.ಎಸ್.ಪುರ ಬಸವರಾಜ ಇತರರಿದ್ದರು.