ಮಕ್ಕಳಿಗೆ ಸಮಸ್ಯೆಯಾದರೆ 1098 ಸಂಖ್ಯೆಗೆ ಕರೆ ಮಾಡುತ್ತೇವೆಂದು ಶಪಥ ಮಾಡಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್

ಯಾದಗಿರಿ; ಜು, 23;ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನೆಯ ಸಂದರ್ಭದಲ್ಲಿ ಮಕ್ಕಳಿಗೆ ಸಮಸ್ಯೆಯಾದರೆ 1098 ಸಂಖ್ಯೆಗೆ ಕರೆ ಮಾಡುತ್ತೇವೆ ಎಂದು ಧ್ಯೇಯವಾಕ್ಯದೊಂದಿಗೆ ಶಪಥ ಮಾಡುವಂತೆ ರೂಢಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ನಿರ್ದೇಶಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಚೈಲ್ಡ್ ಲೈನ್ ಸಲಹಾ ಮಂಡಳಿ ಸಭೆಯಲ್ಲಿ, ಆರ್.ಟಿ.ಇ ಕಾಯ್ದೆ, ಪೆÇೀಕ್ಸೋ ಕಾಯ್ದೆ, ಬಾಲನ್ಯಾಯ ಕಾಯ್ದೆಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು.
1098 ಸಹಾಯವಾಣಿಯು ಸಂಕಷ್ಟದಲ್ಲಿರುವ ಮಕ್ಕಳ ಪಾಲಿನ ಸಂಜೀವಿನಿಯಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಹಾಗಾಗಿ ಮಕ್ಕಳನ್ನು ಯಾವುದೇ ಕಾರ್ಮಿಕರನ್ನಾಗಿ ಮಾಡದೇ ರಕ್ಷಿಸಿ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗದಂತೆ ಶ್ರಮಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಮಕ್ಕಳನ್ನು ಆಟೋ, ಟ್ಯಾಕ್ಸಿ ಇತ್ಯಾದಿ ವಾಹನಗಳಲ್ಲಿ ಕೂಲಿ ಕೆಲಸಕ್ಕಾಗಿ ಸಾಗಿಸುತ್ತಿರುವದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು
ಯಾದಗಿರಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನ/ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ, ನಗರ ಮತ್ತು ಗ್ರಾಮಾಂತರಗಳಿಗೆ ಸಂಚರಿಸುವ ಬಸ್ ಮತ್ತು ನಿಲ್ದಾಣಗಳಲ್ಲಿ , ಸಾರ್ವಜನಿಕ ಸ್ಥಳಗಳಲ್ಲಿ, ಜಿಲ್ಲೆಯ ಎಲ್ಲಾ ವಸತಿ ನಿಲಯಗಳಲ್ಲಿ ಮಕ್ಕಳ ಸಹಾಯವಾಣಿ -1098* ಗೋಡೆಬರಹ ಮತ್ತು ಜಾಹಿರಾತು ಫಲಕ, ಸ್ಟಿಕ್ಕರ್ ಮತ್ತು ಪೆÇೀಸ್ಟರ್ ಅಂಟಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್ ಗಳನ್ನು ವಿತರಿಸಲು ಬರುವಂತಹ ಸಮಾಜ ಸೇವಕರಿಗೆ , ಜನಪ್ರತಿನಿಧಿಗಳಿಗೆ ಅವುಗಳ ಮೇಲೆ ಮಕ್ಕಳ ಸಹಾಯವಾಣಿಯ ಲೋಗೋ ಹಾಕುವಂತೆಯೂ ಸಲಹೆ ನೀಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮಕ್ಕಳ ಸಹಾಯವಾಣಿ ಸೇವೆ : 1098 : ಇದು ರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ , ಬಾಲ್ಯ ವಿವಾಹ, ಬಾಲಕಾರ್ಮಿಕರು, ಭಿಕ್ಷಾಟನೆ, ಮಕ್ಕಳ ಮಾರಾಟ, ಕಾಣೆಯಾದ ಮಕ್ಕಳು, ನಿರ್ಗತಿಕ ಮಕ್ಕಳು, ಬೀದಿ ಮಕ್ಕಳು, ವಲಸೆ ಮಕ್ಕಳು, ವಿಕಲ ಚೇತನ ಮಕ್ಕಳು, ಮಾದಕ ವಸ್ತುಗಳ ವ್ಯಸನಿ ಮಕ್ಕಳು, ಹಿಂಸೆ ಮತ್ತು ದೌರ್ಜನ್ಯಕ್ಕೆ ಒಳಗಾದ 18 ವರ್ಷ ದೊಳಗಿನ ಸಂಕಷ್ಟದಲ್ಲಿ ಸಿಲುಕಿರುವ /ರಕ್ಷಣೆ ಮತ್ತು ಪೆÇೀಷಣೆಗೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸಲು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂಖ್ಯೆಯು ಉಚಿತ ದೂರವಾಣಿಯಾಗಿದ್ದು ಮಕ್ಕಳಾಗಲಿ ಅಥವಾ ಸಾರ್ವಜನಿಕರಾಗಲಿ ಕರೆಮಾಡುವ ಮೂಲಕ ತುರ್ತು ನೆರವು ಅಗತ್ಯವಿರುವ, ಮಕ್ಕಳಿಗೆ ರಕ್ಷಣೆಯನ್ನು ಒದಗಿಸಬಹುದಾಗಿದೆ.
ಬಾಲ್ಯ ವಿವಾಹ ಕಾನೂನು ಅಪರಾಧ ಕಾನೂನು ಉಲ್ಲಂಘಿಸಿದರೆ ಶಿಕ್ಷೆಯಾಗತ್ತದೆ.ಬಾಲ್ಯ ವಿವಾಹ ಜರಗುವ ಜಿಲ್ಲೆಯ ಎಲ್ಲಾ ದೇವಸ್ಥಾನ, ಕಲ್ಯಾಣ ಮಂಟಪಗಳಲ್ಲಿ ಆಯೋಜಕರಿಗೆ ಬಾಲ್ಯವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ನಾಮಫಲಕ ಹಾಕುವಂತೆ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣಾ ಸಮಿತಿ ರಚಿಸಿ, ಕಡ್ಡಾಯವಾಗಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳು ಜರುಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಸಂಕಷ್ಟದಲ್ಲಿರುವ ಮಕ್ಕಳ ವೈದ್ಯಕೀಯ ತಪಾಸಣೆಗೆ ಮತ್ತು ಚಿಕಿತ್ಸೆಗೆ ಹಾಗೂ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಒದಗಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಗೆ ಸೆಪ್ಟೆಂಬರ್ 2021 ರಿಂದ ಜೂನ್ 2022 ರ ವರೆಗೆ ಒಟ್ಟು 703 ಪ್ರಕರಣಗಳು ದಾಖಲಾಗಿವೆ, ಆರೋಗ್ಯ ಸಹಾಯ ಕೋರಿ 70, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಹಾಯ ಕೋರಿ 120, ಬಾಲ್ಯ ವಿವಾಹಕ್ಕೆ 167 ಪ್ರಕರಣ ದಾಖಲಾಗಿದ್ದು ಇವುಗಳಲ್ಲಿ 15 ಸುಳ್ಳು ಮಾಹಿತಿ ಕರೆಗಳು, 19 ಪ್ರಕರಣ 18 ವರ್ಷ ಮೇಲ್ಪಟ್ಟಿರುವ ದೂರುಗಳು, 1 ಬಾಲ್ಯ ವಿವಾಹ ನಡೆದಿದ್ದು ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಸಭೆಗೆ ಮಾಹಿತಿ ನೀಡಿದರು.
ಅತೀ ಹೆಚ್ಚಾಗಿ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಹಿನ್ನಲೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ವಾಟ್ಸಪ್ ಸ್ಟೇಟಸ್ ಗಳಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಲೋಗೊ, ಸ್ಟಿಕ್ಕರ್ ಜಾಹೀರಾತು, ಇನ್ನಿತರ ವಿಡಿಯೋಗಳನ್ನು ಇಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರಭಾಕರ್ ಕವಿತಾಳ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಹಣಮಂತ್ರಾಯ ಕರಡಿ,ಮಹಿಳಾ ಮತ್ತು ಮಕ್ಕಳ ಇಲಾಖೆ ಜಿಲ್ಲಾ ನಿರೂಪಣೆ ಅಧಿಕಾರಿ ಗುರುಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್, ಮಕ್ಕಳ ಸಹಾಯವಾಣಿ ನಿರ್ದೇಶಕ ಫಾ.ಪ್ರವೀಣ್ ಕೆ ಜೆ, ಯಾದಗಿರಿ ಸಹಾಯವಾಣಿ ಸಂಯೋಜಕ ಶರಬಯ್ಯ ಎಸ್ ಕಲಾಲ್, ಕ್ರೀಮ್ ಯೋಜನೆ ಸಂಯೋಜಕ ಶರಣಪ್ಪ ಸಿ ಅಮಾರಪುರ, ಡಿಡಿಪಿಯು ಚನ್ನಬಸಪ್ಪ ಕೂಳಗೇರಿ,ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ವಿಭಾಗೀಯ ಸಾರಿಗೆ ಅಧಿಕಾರಿ ರಮೇಶ ಪಾಟೀಲ ಹಾಗೂ ಇನ್ನಿತರು ಉಪಸ್ಥಿತರಿದ್ದರು.