
(ಸಂಜೆವಾಣಿ ವಾರ್ತೆ)
ವಿಜಯಪೂರ:ಆ.28:ನಮ್ಮ ಮಕ್ಕಳಿಗೆ ಸತ್ಯವಾದ ಇತಿಹಾಸ ಹೇಳುತಾ ಇದೀವ? ಎಷ್ಟು ಕ್ರಾಂತಿಕಾರಿ ಸ್ವಾತಂತ್ರ್ಯ ಪರಿಚಯ ಬೇಡ , ಹೋರಾಟಗಾರರ ಹೆಸರುಗಳು ನಮಗೆ ಗೊತ್ತು ಹೇಳಿ? ಎಂದು ಮಂಜುನಾಥ ಜುನಗೊಂಡ ಸಭಿಕರನ್ನುದ್ದೇಶಿಸಿ ಪ್ರಶ್ನಿಸಿದರು.
ರವಿವಾರ ನಗರ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಆಯೋಜನ “ಸ್ವರಾಜ್ಯ ಉಪನ್ಯಾಸ – ಕವಿಗೋಷ್ಠಿ -ಸನ್ಮಾನ’ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ಕುರಿತಾಗಿ ಮಂಜುನಾಥ ಜುನಗೊಂಡ “ಭಾರತ ದೇಶವನ್ನು ಕೊಳ್ಳೆಹೊಡೆದವರನ್ನು ವರ್ಣರಂಜಿತವಾಗಿ ಪಠ್ಯದಲ್ಲಿ ಹೇಳಲಾಗಿದೆ.ಆದರೆ, ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದಂತಹ ಅನೇಕಾದಿ ಕ್ರಾಂತಿಕಾರಿ ಹೋರಾಟಗಾರನ್ನು ಕಡೆಗಣಿಸಲಾಗಿದೆ. ಅಲೆಕ್ಸಾಂಡರನ್ನು ಗ್ರೇಟ್ ಎಂದು ಕರೆಯುತ್ತೇವೆ, ನಮ್ಮದೇ ಅಶೋಕ ಚಕ್ರವರ್ತಿಗಳಿಗೆ , ಘಜ್ನಿ ಮಹಮ್ಮದ ದಾಳಿಯನ್ನು ತಡೆಗಟ್ಟಿ ಸೋಲಿಸದ ಪೃಥ್ವಿರಾಜ್ ಚೌವ್ಹಾಣರನ್ನು ಗ್ರೇಟ್ ಶಬ್ದದಿಂದ ಪ್ರಯೋಗಿಸುವುದಿಲ್ಲ ಯಾಕೆ? ತಮ್ಮ ಜೀವ – ಜೀವನವನ್ನು ದೇಶಸೇವೆಗೆ , ಸ್ವಾತಂತ್ರ್ಯಕ್ಕಾಗಿ ಧಾರೆ ಎರೆದ ವೀರ ಸಾವರ್ಕರ್ ಹೆಸರು ಹೇಳಿದರೆ ಸಂಘಿ , ಹಿಂದುತ್ವ ಎಂದು ದೂರಲಾಗುತ್ತದೆ. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಲಾಗುವ ಸದ್ಯದ ಗೌರವವಿದು. ಗಾಂಧಿವಾದಿಗಳು ಅಥವಾ ಅಹಿಂಸಾವಾದಿಗಳು ಕ್ರಾಂತಿಕ್ರಾರಗಳನ್ನು ಉಗ್ರಗಾಮಿಗಳೆಂದು ಕರೆದರು. ಮಹಾತ್ಮಗಾಂಧಿ ಸಹ ಭಗತ್ ಸಿಂಗರನ್ನು “ದಾರಿ ತಪ್ಪಿದ ಮಗ” ಎಂದು ಕರೆದಿದ್ದಾರೆ. ಗಾಂಧಿಜೀಯು ಭಗತ್ ಸಿಂಗರನ್ನು ಗಲ್ಲು ಶಿಕ್ಷೆಯಿಂದ ಕಾಪಾಡಬಹುದಾಗಿತ್ತು ಗಾಂಧಿಜೀ ಮನಸ್ಸುಮಾಡಲಿಲ್ಲ. ಚಂದ್ರಶೇಖರ್ ಆಜಾದ್ , ಸುಭಾಶ ಚಂದ್ರ ಭೋಸ್ ಸೇರಿದಂತೆ ಕಾಂತ್ರಿಕಾರಿಗಳ ಕುರಿತು ಗಾಂಧಿಜೀ ಇದೇ ನಿಲುವು ತಾಳಿದ್ದರು. ಭಾರದ ಸ್ವಾತಂತ್ರ ಹೋರಾಟದಲ್ಲಿ ಸುಭಾಶ ಚಂದ್ರ ಭೋಸ್ ಪಾತ್ರ ಜೊತೆಗೆ ವೀರ ಸಾವರ್ಕರ್,ಮದನ್ ಲಾಲ್ ಡಿಂಗ್ರಾ. ಸುಖದೇವ್ , ರಾಜ ಗುರು , ನೀರಾ ಆರ್ಯ ಸೇರಿದಂತೆ ಅನೇಕಾದಿ ಕಾಂತ್ರಿಕಾರಿಗಳ ತ್ಯಾಗ ಬಲಿದಾನಗಳಿಗೆ ಒಲಿದಿದೆ. ದುರಾದೃಷ್ಠವಷಾತ್ ಇಂದು, ಮಕ್ಕಳಿಗೆ ಪಠ್ಯದ ಮೂಲಕ ಕೆಲವೇ ವ್ಯಕ್ತಿಗಳಿಂದ ಸ್ವಾತಂತ್ತ್ಯ ಸಿಕ್ಕಿರುವುದು ಎಂದು ಹೇಳಲಾಗುತ್ತಿದೆ. ಕೊನೆಪಕ್ಷ ಮನೆಯಲ್ಲಾದರೂ ನಾವು ಮಕ್ಕಳಿಗೆ ಸತ್ಯವಾದ ಇತಿಹಾಸ ತಿಳಬೇಕು ಎಂದು ಹೇಳಿದರು.
ಅಭಾಸಾಪ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ “ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಷ್ಟ್ರ , ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ನಾಟಕ ,ಪುಸ್ತಕ , ಗೋಷ್ಠಿಗಳ ಮೂಲಕ ಸಾಹಿತ್ಯ ಚಿಂತನೆ ,ರಾಷ್ಟ್ರಭಕ್ತಿ ಮೂಡಿಸುವ ಕೆಲಸ ಮಾಡುತ್ತಿದೆ. ಕಳೆದ ಎರಡು ವರ್ಷಗ ಹಿಂದೆ ಅಭಾಸಾಪಸ ವಿಜಯಪುರ ಜಿಲ್ಲಾ ಸಮಿತಿ ಜಾರಿಗೆ ಬಂದಿದ್ದು ಅನೇಕ ಸಾಹಿತ್ಯಕ ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಮುಂದೆ ಇನ್ನೂ ಹೆಚ್ಚಿನ ಸಾಹಿತ್ಯ ಚಟುವಟಿಕೆಗಳನ್ನು ಜಿಲ್ಲೆಯ ಅಭಾಸಾಪ ಮಾಡಲಿದೆ’ ಎಂದು ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮದ್ರಾಸ್ ರೆಜುಮಂಟ್‍ನ ಸೈನಿಕರಾದ ನಾಗೇಶ ಕುಲಕರ್ಣಿಯವರನ್ನು ಸನ್ಮಾನಿಸಲಾಯಿತು. ಜೊತೆಗೆ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ ಸ್ವರಾಜ್ಯ ಕವಿಗೋಷ್ಠಿಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚಿನ ಕವಿಗಳು ತಮ್ಮ ಸ್ವ-ರಚಿತವಾದ ಕವನ ವಾಚನ ಮಾಡಿದರು. ಕಾರ್ಯಕ್ರಮ ನಿರುಪಣೆ ಮಯೂರ ಸಜ್ಜನ, ಪ್ರಾಸ್ತಾವಿಕ ಶ್ರೀರಂಗ ಕುಲಕರ್ಣಿ , ಸ್ವಾಗತ ಪರಿಚಯ ರಾಹುಲ್ ಮರಳಿ , ಶಾಂತಿ ಮಂತ್ರ ಬಲವಂತ ಕುಲಕರ್ಣಿ ನಿರ್ವಹಿಸಿದರು.ಮಯೂರ ತಿಳಗೂಳಕರ, ಶ್ರೀರಂಗ ಪುರಾಣಿಕ, ನವೀನ ಲೋಣಿ , ಮಂಜುನಾಥ ಜನವಾಡ, ಸುನೀಲದತ್ತ ಸರಾಫ್ , ವಿಜಯ ಕಲಕೆರಿ , ವಿಶ್ವನಾಥ ಕುಲಕರ್ಣಿ ಉಪಸ್ಥಿತರಿದ್ದರು.