ಮಕ್ಕಳಿಗೆ ಶಿಕ್ಷಣ ನೀಡಿ ಚಂದ್ರಶೇಖರ ನಾಯಕ

ಸಿಂಧನೂರು.ನ.5- ಸರ್ಕಾರದ ಸಹಾಯ ಸೌಲಭ್ಯ ಪಡೆದುಕೊಂಡು ವಾಲ್ಮೀಕಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕ ವಾಗಿ‌ ಮುಂದೆ ಬರಬೇಕು ಎಂದು ಸಿಪಿಐ ಜಿ.ಚಂದ್ರಶೇಖರ ನಾಯಕ ಹೇಳಿದರು.
ನಗರದ ಸರ್ಕೂಟ್ ಹೌಸ್ ನಲ್ಲಿ ತಾಲೂಕ ವಾಲ್ಮೀಕಿ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಾಲ್ಮೀಕಿ ಸಮಾಜ ಇತರ ಸಮಾಜಗಳೊಂದಿಗೆ ಪ್ರೀತಿ ,ವಿಶ್ವಾಸಗಳಿಸಿಕಿಂಡು ಸಹೋದರತ್ವದಿಂದ ಬದುಕಬೇಕು ಎಂದರು.
ಸರ್ಕಾರದಿಂದ ಸಮಾಜಕ್ಕೆ ಸಾಕಷ್ಟು ಸೌಲಭ್ಯಗಳಿದ್ದು ಸಮಾಜದ ಮುಖಂಡರು ಒಕ್ಕಟ್ಟಾಗಿ ಸೌಲಭ್ಯಗಳನ್ನು ಪಡೆದು ಕೊಳ್ಳಬೇಕು. ಎಷ್ಟೆ ಕಷ್ಟ ಇದ್ದರೂ ಸಹ ಮಕ್ಕಳಿಗೆ ಶಿಕ್ಷಣ ಕಲಿಸಿ ವಿದ್ಯಾವಂತರನ್ನಾಗಿ ಮಾಡಿದರೆ ಉನ್ನತ ಹುದ್ದೆಗಳನ್ನು ಪಡೆದುಕೊಂಡಂತಹ ಮಕ್ಕಳು ಮುಂದೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾರೆ.ತಾಲ್ಲೂಕಿನಲ್ಲಿ ಸಮಾಜ ಮುಖಂಡರು ಹಾಗೂ ಯುವಕರು ಉತ್ತಮ ರೀತಿಯಲ್ಲಿ ಕೆಲಸ ಮಾಡಿ ನಿಮ್ಮ ಕೆಲಸ ಕಾರ್ಯಗಳಿಗೆ ನಾನು ಸಹಾಯ ಸಹಕಾರ ಮಾಡುತ್ತೆನೆ ಇತರ ಸಮಾಜದ ಮುಖಂಡರ ಸಹಾಯ ಸ್ಪೂರ್ತಿ ಪಡೆದುಕೊಂಡು ಇತರ ಸಮಾಜದಂತೆ ಮುಂದೆ ಬರಬೇಕೆಂದು ಸಮಾಜದ ಮುಖಂಡರಿಗೆ ಸಿಪಿಐ ಜಿ.ಚಂದ್ರಶೇಖರ ನಾಯಕ ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ ,ಉಪಾಧ್ಯಕ್ಷರಾದ ಮುರ್ತುಜಾ ಹುಸೇನ್, ಕರ್ನಾಟಕ ಪ.ಪಂಗಡದ ನೌಕರರ ಒಕ್ಕೂಟದ ಅಧ್ಯಕ್ಷರಾದ ವೆಂಕಟೇಶ ನಾಯಕ ಕೆ ಇ ಬಿ ,ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷರಾದ ನರೇಂದ್ರ ನಾಯಕ, ಪರಿಶಿಷ್ಟ ಪಂಗಡದ ಇಲಾಖೆ ಅಧಿಕಾರಿ ‌ಶಿವಮಾನಪ್ಪ ,ಆನಂದಪ್ಪ ಮೇಸ್ತ್ರೀ ಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಮಾಜದ ಮುಖಂಡರಾದ ವಿರುಪಾಕ್ಷಪ್ಪ ನಾಯಕ ,ಕರೇಗೌಡ ಕುರುಕುಂದಿ,ಬಸವರಾಜ ಬೆಳ್ಳಿಗನೂರು,ಆರ್.ವೆಂಕಟೇಶ ನಾಯಕ, ಶ್ರೀನಿವಾಸ ನಾಯಕ ವಕೀಲ, ಕನಕಪ್ಪ ನಾಯಕ, ಡಾ.ಬಸವರಾಜ ನಾಯಕ, ಓಬಣ್ಣ ನಾಯಕ, ರವಿ ನಾಯಕ, ಡಾ.ಬಸವರಾಜ ವಾಲೇಕಾರ,ವೆಂಕೋಬ ಕಣ್ಣೂರು,ವಾಲ್ಮೀಕಿ ಸಮಾಜದ ನಗರ ಘಟಕದ ಅಧ್ಯಕ್ಷರಾದ ಶುಖರಾಜ ನಾಯಕ,ಶಿವ ಲಿಂಗಪ್ಪ, ಮಲ್ಲೇಶ ,ಪಂಪಾಪತಿ, ಮಹಾದೇವ ನಾಯಕ ಸೇರಿದಂತೆ ಇತರರು ಸನ್ಮಾನ ಕಾರ್ಯಕ್ರಮ ದಲ್ಲಿ ಹಾಜರಿದ್ದರು.