ಮಕ್ಕಳಿಗೆ ಶಿಕ್ಷಣ ನೀಡಿದೇಶದ ಆಸ್ತಿಯನ್ನಾಗಿ ಮಾಡುವುದು ಪಾಲಕರ ಆದ್ಯಕರ್ತವ್ಯ

ದೇವದುರ್ಗ.ನ.೯-ಶೈಕ್ಷಣಿಕವಾಗಿತಾಲೂಕು ಹಿಂದುಳಿದಿದೆ ಎನ್ನುವ ಹಣೆಪಟ್ಟಿಯನ್ನುಕಿತ್ತಿ ಹಾಕಲು ಎಲ್ಲಾ ಪಾಲಕರುತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನುದೇಶದ ಆಸ್ತಿಯನ್ನಾಗಿ ಮಾಡಬೇಕುಎಂದುಗೂಗಲ್ ಪಂಚಾಯತಅಭಿವೃದ್ಧಿಅಧಿಕಾರಿ ಶರಣು ಪಾಟೀಲ್ ಹೇರೂರು ಹೇಳಿದರು.
ಅವರುಇತ್ತೀಚೆಗೆತಾಲೂಕಿನಚಂದನಕೇರಿಯಲ್ಲಿ ದೀಪಾವಳಿ ಹಬ್ಬದ ಅಂಗನವಾಗಿ ಆಯೋಜಿಸಲಾಗಿದ್ದ ದೀಪೋತ್ಸವಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿಉನ್ನತ ವ್ಯಾಸಂಗ ಮಾಡಿ, ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮಹನೀಯರುತುಂಬಾಜನರಿದ್ದಾರೆಆದಾಗ್ಯುತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ ಎನ್ನುವ ಪಟ್ಟವನ್ನು ಹೊಂದಿದೆಅದಕ್ಕಾಗಿಎಲ್ಲಾ ಪಾಲಕರುತಮ್ಮ ಮಕ್ಕಳಿಗೆ ಉನ್ನತ ವಿದ್ಯಾಬ್ಯಾಸವನ್ನುಒದಗಿಸಬೇಕುಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆಕಾಪಾಡುವುದು ಸಮಾಜ ಪ್ರತಿ ನಾಗರಿಕನಜವಾಬ್ದಾರಿಯಾಗಿದೆ. ಇಂದಿನ ಮಕ್ಕಳೆ ಮುಂದಿನ ಪ್ರಜ್ಞಾವಂತ ನಾಗರಿಕರಾಗುತ್ತಾರೆ.ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಶಿಕ್ಷಣದ ಮಹತ್ವವನ್ನು ಮತ್ತುಅದರಜವಾಬ್ದಾರಿಯ ಬಗ್ಗೆ ನಾಗರಿಕರಿಗೆಜಾಗೃತಿ ಮೂಡಿಸಲು ಅನೂಕುಲವಾಗುತ್ತದೆಎಂದುಅವರು ಹೇಳಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮುದಾಯದಅಧ್ಯಕ್ಷರಾಮಣ್ಣ ನಾಯಕ ಮಾತನಾಡಿಐತಿಹಾಸಿ ಹಿನ್ನಲೆಯನ್ನು ಹೊಂದಿರುವಚಂದನಕೇರಿಗ್ರಾಮದಲ್ಲಿ ಮೊದಲ ಬಾರಿಕಾರ್ಯಕ್ರಮವನ್ನು ದೀಪಾವಳಿ ಹಬ್ಬದ ದಿನದಂದೆಆಯೋಜನೆ ಮಾಡುವ ಮುಖೇನ ಮಕ್ಕಳ ಭವಿಷಕ್ಕೆ ಬೇಳಕಾಗುವ ರೀತಿಯಲ್ಲಿ ಕಾರ್ಯಕ್ರಮಗಳು ಜರುಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪುರಾತನಆಂಜನೇಯದೇವಸ್ಥಾನದಜೀರ್ಣೋದ್ಧಾರಕ್ಕಾಗಿ ಶಾಸಕ ಹಾಗೂ ಕರ್ನಾಟಕರಾಜ್ಯರಸ್ತೆಅಭಿವೃದ್ಧಿ ನಿಗಮದಅಧ್ಯಕ್ಷ ಕೆ.ಶಿವನಗೌಡ ನಾಯಕಅವರು ೨೦ ಲಕ್ಷಅನುದಾನವನ್ನು ನೀಡಿದ್ದು ಮುಂಗಡವಾಗಿ ೨ ಲಕ್ಷ ರೂಪಾಯಿಗಳನ್ನು ಪುರಸಭೆ ಸದಸ್ಯ ನಾಗರಾಜ ಗೋಗಿ ಗ್ರಾಮಸ್ಥರಿಗೆ ನೀಡಿದರು.ಕರಿಯಪ್ಪ ಪೂಜಾರಿ, ರಾಮಣ್ಣ ಪೂಜಾರಿಕಾರ್ಯಕ್ರಮದ ದಿವ್ಯಾ ಸಾನಿದ್ಯ ವಹಿಸಿದ್ದರು.
ಈ ಸಂದರ್ಭದಲ್ಲಿಬಸವರಾಜಪ್ಪಗೌಡ, ಮಲ್ಲಯ್ಯದೇಸಾಯಿ, ಭೀಮ್‌ಆರ್ಮಿಯತಾಲೂಕಅಧ್ಯಕ್ಷ ವಿಶ್ವನಾಥ ಬಲ್ಲಿದ್, ಯುವ ಕವಿ ಮತ್ತು ಹಾಡುಗಾರರವಿ ರಾಯಚೂರುಕರ್, ಗೊಟ್ರಾಯ, ಕೊಂಡೆ ಮಲ್ಲಪ್ಪ, ಉಮಾರಡ್ಡಿ ಮಾ.ಪಾ., ಕರ್ನಾಟಕರಕ್ಷಣಾ ಸೇನೆ ಗೌರವಅಧ್ಯಕ್ಷಜಯರಾಜ ಮಡಿವಾಳ, ಕಸಾಪ ಮಾಜಿಅಧ್ಯಕ್ಷ ಎಚ್.ಶಿವರಾಜ, ಮಲ್ಲು ಬಾಗೂರು, ಲಕ್ಷ್ಮಣ ಕಾಳೇ, ಜಿಲಾ ಸಮಾಜಕಲ್ಯಾಣಇಲಾಖೆಯ ಪ್ರದಸಮಲ್ಲಯ್ಯಅಕ್ಕರಕಿ, ಚಂದನಕೇರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಯರಾದ ಶ್ರೀದೇವಿ, ಅಂಗನವಾಡಿಕಾರ್ಯಕರ್ತೆಮಂಜುಳಾ ಪರಶುರಾಮ ಸೇರಿದಂತೆಇತರರುಇದ್ದರು.