
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ 8 :- ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆ ಸಂಸ್ಕಾರವಂತರನ್ನಾಗಿಸಿ ಎಂದು ಉಜ್ಜಿನಿ ಸದ್ಧರ್ಮ ಪೀಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿ ಪಾಲಕ ಪೋಷಕರಿಗೆ ಕಿವಿ ಮಾತು ಹೇಳಿದರು.
ಅವರು ಸಮೀಪದ ಬಯಲುತುಂಬರಗುದ್ದಿ ಗ್ರಾಮದಲ್ಲಿ ಗುರುವಾರ ನಡೆದ ಉಜ್ಜಿನಿ ಪೀಠದ ಗ್ರಾಮದ ಲಿಂಗೈಕ್ಯ ಜಗದ್ಗುರು ಚನ್ನವೃಷಭ ಸ್ವಾಮಿಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ
ದೇಶ ಕಟ್ಟುವಲ್ಲಿ ಹಾಗೂ ಸಂರಕ್ಷಿಸುವಲ್ಲಿ ತಾಯಿಯ ಪಾತ್ರ ಹಿರಿದಾಗಿದೆ. ನೂರು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸಬೇಕು ಅಲ್ಲದೆ ಪ್ರತಿಯೊಬ್ಬರೂ ತಾಯಿಗೆ ಗೌರವಕೊಡಬೇಕು ಎಂದು ಶ್ರೀಗಳು ತಿಳಿಸಿದರು. ಮತ್ತು ಬಯಲುತುಂಬರಗುದ್ದಿ ಗ್ರಾಮವೂ ಪೀಠಕ್ಕೆ 107 ನೇ ಜಗದ್ಗರುಗಳನ್ನು ನೀಡಿದ ಕೀರ್ತಿ ಹೊಂದಿದ್ದು, ಶ್ರೀ ಪೀಠಕ್ಕೆ ಗ್ರಾಮದ ಕೊಡುಗೆ ಅಪಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಚ್.ಎಂ.ವೀರಭದ್ರಯ್ಯ ಸ್ವಾಮಿ, ಎಂ.ಬಸವರಾಜ, ಪಿ.ವಿ.ರುದ್ರೇಶ್, ಜಿ.ಬಸವರಾಜ್, ಪಿ.ವೀರೇಶ್ ಇತರರಿದ್ದರು.
One attachment • Scanned by Gmail