ಮಕ್ಕಳಿಗೆ ಶಿಕ್ಷಣದ ಜತೆ ಕ್ರೀಡಾ ಚಟುವಟಿಕೆಯೂ ಅಗತ್ಯ

ಚಿಕ್ಕಬಳ್ಳಾಪುರ,ಸೆ.೪-ಪ್ರತಿಯೊಬ್ಬ ವಿದ್ಯಾರ್ಥಿಯು ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಯಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಹ ತೊಡಗಿಕೊಂಡಲ್ಲಿ ಅವರಲ್ಲಿ ದೇಹಧಾರಿತ ಮತ್ತು ಮನೋಬಲ ಹೆಚ್ಚಾಗುತ್ತದೆ ಎಂದು ಜೈ ಫೌಂಡೇಶನ್ ಮತ್ತು ಮೂಕಾಂಬಿಕಾ ಎಂಟರ್ಪ್ರೈಸಸ್ ಅಧ್ಯಕ್ಷ ಜಯಕುಮಾರ್ ತಿಳಿಸಿದರು.
ಅವರು ನಗರದ ೧೫ನೇ ವಾರ್ಡ್ ಭಾರತಿ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಹೋಬಳಿ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಖೋಖೊ, ಕಬ್ಬಡಿ ಪಂದ್ಯವಳ್ಳಿಯಲ್ಲಿ ವಿಜೇತರಾದ ಕ್ರಿಡಾ ಪಟ್ಟುಗಳಿಗೆ ಮುಖ್ಯ ಅತಥಿಯಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಹಾಗೂ ಸರ್ಟಿಫಿಕೇಟ್ಗಳನ್ನು ವಿತರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ತಮ್ಮ ಸೇವಾ ಸಂಸ್ಥೆ ವತಿಯಿಂದ ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಆ ಶಾಲೆಗಳ ಉನ್ನತಿಕರಣಕ್ಕೆ ಕೈಲಾದ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರ ಬಾಲು, ಜೈ ಫೌಂಡೇಶನ್ ವ್ಯವಸ್ಥಾಪಕರಾದ ಮುಬಾರಕ್, ಮಣಿ ಹಾಗೂ ಭಾರತಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರು,ಹಾಗೂ ಶಾಲಾ ಶಿಕ್ಷಕ ವೃಂದದವರು ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಹಾಗೂ ಹಿತವಚನಗಳನ್ನು ಹೇಳಿದ ಜೈ ಫೌಂಡೇಶನ್ ಅಧ್ಯಕ್ಷ ಜಯಕುಮಾರ್ ರವರನ್ನು ಮೈಸೂರು ಪೇಟ
ತೋರಿಸಿ ವಿದ್ಯಾ ಸಂಸ್ಥೆಯ ವತಿಯಿಂದ ಸಿಬ್ಬಂದಿ ವರ್ಗ ಸನ್ಮಾನಿಸಿದರು.