ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಅಗತ್ಯ

ಕೋಲಾರ,ಆ.೧- “ಧರ್ಮೋ ರಕ್ಷತಿ ರಕ್ಷಿತಃ” ಅಂದರೆ ಯಾರು ಧರ್ಮವನ್ನು ರಕ್ಷಿಸುತ್ತಾರೋ, ಯಾರೂ ಧರ್ಮದಿಂದ ಬದುಕುವರೂ, ಅವರನ್ನು ಧರ್ಮವು ಅದೇ ರೀತಿ ರಕ್ಷಿಸುತ್ತದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಕೆ.ವಿ.ಶಂಕರಪ್ಪ ತಿಳಿಸಿದರು,
ನಗರದ ಸ್ಕೌಟ್ ಭವನದಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಗಾಂಡ್ಲಹಳ್ಳಿಯ ಚೌಡಮ್ಮ ಹಿರಣ್ಯಗೌಡ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ ವತಿಯಿಂದ ದಿ.ಕೆ.ಹಿರಣ್ಯಗೌಡರವರ ೧೬ನೇ ವರ್ಷದ ನೆನಪಿನಾರ್ಥವಾಗಿ ಪ್ರತಿವರ್ಷದಂತೆ ಈ ವರ್ಷವು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯೆಯನ್ನು ನಾವು ಗೌರವಿಸಿದರೆ ಅದೆ ರೀತಿ ವಿದ್ಯೆಯು ಜೀವನದಲ್ಲಿ ನಮ್ಮ ಗೌರವನ್ನು ಕಾಪಾಡುತ್ತದೆ. ಯಾವೂದೇ ವ್ಯಕ್ತಿಯಾಗಲಿ ತನ್ನ ವೃತ್ತಿಯ ಜೂತೆಗೆ ಪ್ರವೃತ್ತಿಯನ್ನು ಅಳವಡಿಸಿ ಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗ ಬೇಕು, ಇಂದು ಶಿಕ್ಷಣದಲ್ಲಿ ಬಹಳಷ್ಟು ಬದಲಾವಣೆಗಳಾಗಿ ಹಲವಾರು ಅವಿಷ್ಕಾರಗಳ ಸಾಧನೆಗಳಾಗಿದೆ. ಅದೇ ರೀತಿ ನಾವುಗಳು ಸಹ ಅಧುನಿಕ ತಂತ್ರಜ್ಞಾನಕ್ಕೆ ಹೊಂದಿ ಕೊಂಡು ಬದಲಾಗ ಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು,
ಶಿಕ್ಷಣದಲ್ಲಿಂದು ವಿಫಲವಾದ ಅವಕಾಶಗಳಿದ್ದು ಅದರ ಹಿಂದೆ ನಾವು ಹೋಗ ಬೇಕಾಗಿದೆ. ಶಿಕ್ಷಣದಲ್ಲಿ ಗುರಿಯ ಸಾಧನೆ ಮಾಡಿದರೆ ಸಾಲದು, ಶಿಕ್ಷಣದ ಜೂತೆಗೆ ಸಂಸ್ಕೃತಿ ,ಸಂಸ್ಕಾರ, ಮಾನವೀಯತೆಯನ್ನು ಮಕ್ಕಳ ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಅರ್ಥಪೂರ್ಣವಾದ ಶಿಕ್ಷಣವನ್ನು ಕೊಡಿಸುವ ಕಡೆ ಪೋಷಕರು ಗಮನ ಹರಿಸಬೇಕಾಗಿದೆ ಎಂದು ಕಿವಿ ಮಾತು ಹೇಳಿದರು,
ಭಗವಂತ ಮೊದಲು ಪ್ರಕೃತಿಯ ಸೃಷ್ಟಿಸಿದ ನಂತರವೇ ಮಾನವನನ್ನು ಸೃಷ್ಟಿಸಿದ ಪ್ರಕೃತಿ ಮಾನವನಿಗಾಗಿ ಏನೆಲ್ಲಾ ಧಾರೆ ಎರೆಯುತ್ತಿದೆ ಅದರೆ ನಾವು ಪ್ರಕೃತಿಗೆ ಏನನ್ನು ನೀಡುತ್ತಿದ್ದೇವೆ, ನಮ್ಮ ಕೊಡುಗೆ ಏನೆಂಬುವುದು ಆತ್ಮವಲೋಕನ ಮಾಡಿ ಕೊಳ್ಳ ಬೇಕು, ಪ್ರಕೃತಿಯಿಂದ ಎಲ್ಲವನ್ನು ಪಡೆದು ಕೊಳ್ಳುತ್ತಿರುವ ನಾವು ಯಾವೂದೇ ಸ್ವಾರ್ಥತೆ ಇಲ್ಲದಂತ ಪ್ರಕೃತಿಯನ್ನು ರಕ್ಷಿಸಲು ಪ್ರಥಮ ಅದ್ಯತೆ ನೀಡುವಂತಾಗ ಬೇಕೆಂದರು,