ಮಕ್ಕಳಿಗೆ ಶಿಕ್ಷಣದಲ್ಲಿ ಸಾಂಸ್ಕೃತಿಕ ಚಟುವಟಿಕೆ ಅಗತ್ಯ

ಚಿತ್ರದುರ್ಗ. ಅ.೨೮; ಅನುಕರಣಶೀಲ ತಲೆಮಾರನ್ನು ನಿರ್ಮಿಸುವ ಮೂಲಕ ಯಾವುದೇ ನಾಡು ರಾಷ್ಟçವಾಗಲಾರದು, ಮಕ್ಕಳಿಗೆ ಶಿಕ್ಷಣದಲ್ಲಿ ಗಾಯನ, ನೃತ್ಯ, ಚಿತ್ರಕಲೆ, ಸಾಂಸ್ಕೃತಿಕ ಚಟುವಟಿಕೆಗಳ ಮುಖಾಂತರ ಅವರ ಅಗತ್ಯಗಳನ್ನ ಪೂರೈಸಬಹುದು. ಪರಿಸರದ ಚಿಂತನೆ, ಭಾಷಾ ಕೌಶಲ್ಯ, ರೋಗಗಳ ಬಗ್ಗೆ ಜಾಗೃತಿ ಎಲ್ಲವನ್ನ ಸಾಂಸ್ಕೃತಿಕ ಚಡುವಟಿಕೆಗಳಿಂದ ಮಕ್ಕಳಲ್ಲಿ ಮೂಡಿಸಬಹುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು. ಅವರು ನಗರದ ಸೀಬಾರ ಮತ್ತು ಗುತ್ತಿನಾಡಿನ ವಿಶ್ವಮಾನವ ವಸತಿ ಶಾಲೆ ಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ “ಸಾಂಸ್ಕೃತಿಕ ಚಡುವಟಿಕೆಗಳ ಮೂಲಕ ಶಿಕ್ಷಣ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂಗ್ಲಿಷ್ ಮಾಧ್ಯಮ ನಮ್ಮ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಅಡ್ಡಿಯಾಗುತ್ತದೆ. ಇಂಗ್ಲಿಷ್ ಭಾಷೆಯಿಲ್ಲದೆ ನಾವು ಬದುಕಲಾರೆವು ಎಂದು ಭಾವಿಸುವುದು ನಮ್ಮ ಮಾನಸಿಕ ದಾಸ್ಯದ ಸಂಕೇತ, ಮಗುವಿನ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾದ ಮಾತೃಭಾಷೆಯನ್ನು ಬಿಟ್ಟು ಬೇರೊಂದು ಭಾಷೆಯನ್ನು ಅವರ ತಲೆ ಮೇಲೆ ಹೇರುವುದು ಮಾತೃಭೂಮಿಯ ವಿರುದ್ಧ ನಾವು ಎಸಗುವ ಪಾಪವಾಗುತ್ತದೆ ಎಂದರು. ಪರಭಾಷೆಯ ಮೂಲಕ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಬೆಂಡುಮಾಡಿದೆ, ಅವರ ನರಗಳನ್ನು ದುರ್ಬಲಗೊಳಿಸಿದೆ, ಅವರನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡಿದೆ, ನಾನಿಂದು ಸರ್ವಾಧಿಕಾರಿಯಾಗಿದ್ದರೆ ಪರಭಾಷೆಯ ಮೂಲಕದ ಶಿಕ್ಷಣವನ್ನು ರದ್ದುಗೊಳಿಸುತ್ತಿದ್ದೆ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ ಎಂದರು.ಮಾತೃ ಭಾಷೆಯನ್ನು ಒಂದೇ ಸಮನೆ ನಿರ್ಲಕ್ಷಿಸಿಕೊಂಡು ಬಂದಿರುವುದಕ್ಕಾಗಿ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ ಇದರಿಂದಾಗಿ ರಾಷ್ಟç ಅಪಾರ ನಷ್ಟವನ್ನು ಅನುಭವಿಸುತ್ತಿವೆ. ಈ ಸಂಕಟದಿAದ ರಾಷ್ಟçವನ್ನು ಪಾರುಮಾಡುವುದು ಶಿಕ್ಷಿತ ವರ್ಗದವರ ಪ್ರಥಮ ಕರ್ತವ್ಯವಾಗಬೇಕು. ಮಾತೃ ಭಾಷೆಯನ್ನು ಕಡೆಗಣಿಸಿದರೆ ನಮ್ಮ ಸಂಸ್ಕöÈತಿ ಮತ್ತು ಪರಂಪರೆಯನ್ನು ನಾವು ಅರ್ಥಮಾಡಿಕೊಳ್ಳಲಾರೆವು. ಮಾತೃ ಭಾಷೆಯ ಮೂಲಕವೇ ವ್ಯವಹಾರ, ಸ್ವಂತ ಕಾಲುಗಳಿಂದ ನಡೆದಂತೆ ಬೆಂಡು ಕಟ್ಟಿಕೊಂಡು ಈಜಿಗೆ ಹೊರಟಂತೆ, ವಿದೇಶಿ ಭಾಷೆ ಮೂಲಕ ವ್ಯವಹಾರ ಮರಗಾಲುಗಳನ್ನು ಕಟ್ಟಿಕೊಂಡು ನಡೆದಂತೆ ಮತ್ತು ಬೆನ್ನಿಗೆ ಕಲ್ಲು ಕಟ್ಟಿಕೊಂಡು ನೀರಿಗೆ ಬಿದ್ದಂತೆ. ವಿದೇಶಿ ಭಾಷೆಯ ಬಳಕೆಯಿಂದ ಬುದ್ದಿ ಮೊಂಡಾಗುತ್ತದೆ ಭಾವದ ಸೆಲೆ ಬತ್ತುತ್ತದೆ ಅಷ್ಟೇ ಅಲ್ಲ ಅದು ಸಾಮಾನ್ಯ ಜನತೆಯನ್ನು ಅಜ್ಞಾನಕ್ಕೂ ಗುರಿ ಮಾಡುತ್ತದೆ ಎಂದು ರಾಷ್ಟçಕವಿ ಕುವೆಂಪುರವರು ಹೇಳಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಎಚ್.ಎಸ್. ರಚನಾ ಮತ್ತು ಎಚ್.ಎಸ್. ಪ್ರೇರಣಾ ಕರೋನಾ ಗೀತೆ, ಹೆಲ್ಮೆಟ್‌ಜಾಗೃತಿ, ಬಾರಿಸು ಕನ್ನಡ ಡಿಂಡಿಮ, ಸೊಳ್ಳೆ ಬಗ್ಗೆ, ಸಾಕ್ಷರತೆ ಬಗ್ಗೆ ನಲಿಯೋಣ ಬಾ ಕಲಿಯೋಣ ಎಂಬ ಕನ್ನಡ ಗೀತೆಗಳನ್ನು ಹಾಡಿ ಮಕ್ಕಳಿಗೆ ಕೋಲಾಟಗಳನ್ನ ಆಡಿಸಿ ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ವಿಶ್ವಮಾನವ ವಸತಿ ಶಾಲೆಯ ಕಾರ್ಯದರ್ಶಿ ನೀಲಕಂಠ ದೇವರು, ರೋ. ವೆಂಕಟೇಶ ಶೆಟ್ಟರು, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.