ನಂಜನಗೂಡು: ಮಾ.24:- ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳು ಅಧಿಕವಾಗ ಬೇಕು ಇಲ್ಲಿಂದಲೇ ನಾವು ಬಡ ಮಕ್ಕಳಿಗೆ ಶಿಕ್ಷಣದಲ್ಲಿ ಶ್ರದ್ಧೆ ಮತ್ತು ಆಸಕ್ತಿಯನ್ನು ಬೆಳೆಸಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಪಟ್ಟಣದ 3 ದಿಕ್ಕಿನಲ್ಲಿ 45 ಲಕ್ಪ ರೂ ಗಳಲ್ಲಿ ಪ್ರವೇಶ ದ್ವಾರಗಳ ಸ್ವಾಗತ ಕಮಾನುಗಳು, 26 ಲಕ್ಷ ರೂಗಳ ವೆಚ್ಚದಲ್ಲಿ ನೀಲಕಂಠ ಮತ್ತು ಹಳ್ಳದ ಕೇರಿ ಬಡಾವಣೆಯಲ್ಲಿ ಅಂಗವಾಡಿ ಕೇಂದ್ರ, ವಿದ್ಯಾನಗರದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಸಿಗ್ನಲ್ ಲೈಟ್ ಗಳ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು.
ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ತೆರೆಯ ಬೇಕು ನಾವು ಕೇವಲ ಅಂಗನವಾಡಿ ಕೇಂದ್ರಗಳನ್ನು ತೆರೆದರೆ ಸಾಲದು ಸರ್ಕಾರ ಅಂಗನವಾಡಿಗೆ ಬರುವ ಬಡ ಮಕ್ಕಳಿಗೆ ಬೇಕಾದಷ್ಟು ಪೌಷ್ಟಿಕಾಂಶ ಇರುವ ಆಹಾರಗಳನ್ನು ನೀಡಬೇಕು ಮಕ್ಕಳಿಗೆ ನಾವು ಇಲ್ಲಿಂದಲೇ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕು ಇಲ್ಲಿ ನಾವು ಸೋತರೆ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಆಸಕ್ತಿ ಹೋಗುತ್ತದೆ ನಾವು ಯಾವುದೇ ಕಾರಣಕ್ಕೂ ಅಂಗನವಾಡಿಯಲ್ಲಿ ಸೋಲಬಾರದು ಅವರಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮವಾದ ಆಹಾರ ಪದಾರ್ಥಗಳನ್ನು ನೀಡಬೇಕು. ಹಿರಿಯ ಅಧಿಕಾರಿಗಳು ಅಂಗನವಾಡಿಯಲ್ಲಿ ಅಕ್ರಮ ದಾಸ್ತಾನುಗಳ ಕಳ್ಳತನ ಗಮನಕ್ಕೆ ತಂದಿದ್ದಾರೆ ಅವರಿಗೆ ಕಠಿಣವಾದ ಶಿಕ್ಷೆ ನೀಡಲಾಗುವುದು ಬಡ ಮಕ್ಕಳಿಗೆ ನೀಡುವ ದಾಸ್ತಾನುಗಳನ್ನು ಕಳ್ಳತನ ಮಾಡುವುದು ನಾಚಿಕೆಗೇಡಿನ ಸಂಗತಿ ಅಂತವರನ್ನು ಕ್ಷಮಿಸುವುದಿಲ್ಲ ಎಂದರು
ನಗರಸಭೆ ಅಧ್ಯಕ್ಷರಾದ ಮಹದೇವಸ್ವಾಮಿ, ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷರಾದ ಮಾದೇವಪ್ಪ, ನಗರಸಭೆ ಉಪಾಧ್ಯಕ್ಷರಾದ ನಾಗಮಣಿ ಶಂಕ್ರಪ್ಪ, ಪುರಸಭೆ ಸದಸ್ಯರುಗಳಾದ ಮಹದೇವ್ ಪ್ರಸಾದ್ ಮತ್ತು ಗೀರಿಶ್, ಬಿಜೆಪಿ ಮುಖಂಡರಾದ ಶಂಕ್ರಪ್ಪ, ಬಾಳೆ ಮಂಡಿ ಕುಮಾರ್, ಶ್ರೀಕಂಠು, ಎ ಇ ಇ ಶ್ರೀನಿವಾಸ್,ಸಿ ಡಿ ಪಿ ಒ ಕವಿತ, ಇನ್ನು ಮುಂತಾದವರು ಹಾಜರಿದ್ದರು.