ಮಕ್ಕಳಿಗೆ ಶಾಲೆಯಿಂದ ಸಂಸ್ಕಾರ:ಸಿದ್ಧಲಿಂಗೇಶ್ವರ ಸ್ವಾಮಿ

ಚಿತ್ತಾಪುರ,ಫೆ.24-ನಗರದ ಹೃದಯದ ಭಾಗದಲ್ಲಿರುವ ವಿಶ್ವಕರ್ಮ ಶಿಕ್ಷಣ ಸಂಸ್ಥೆ ಸಂಚಾಲಿತ ದೇವಾನಂದ ಹಿರಿಯ ಪ್ರಾಥಮಿಕ ಶಾಲೆಯು ಶುಕ್ರವಾರ ಸಂಜೆ ಹಮ್ಮಿಕೊಂಡ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡುತ್ತಾ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ, ಸಂಸ್ಕøತಿ ಸಿಕ್ಕಾಗ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರೊಂದಿಗೆ ಶಾಲೆಯಲ್ಲಿ ಪೂರ್ಣ ಸಂಸ್ಕಾರ ನೀಡುವುದು ಅಗತ್ಯ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರಾದÀ ಡಾ.ಚಾಮರಾಜ ಕಮ್ಮಾರ ಹಾವೇರಿ ಅವರು ಮಾತನಾಡುತ್ತ ಇಂದು ಪ್ರಶಸ್ತಿಗಳು ವ್ಯಾಪಾರಿಕಣಕಗೊಳ್ಳುತ್ತಿವೆ. ಆದರೆ ಯೋಗ್ಯತೆ ಇರುವ ವ್ಯಕ್ತಿಗಳನ್ನು ಗುರುತಿಸಿ ದೇವಾನಾಂಮ ಪ್ರಿಯ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ. ಸರ್ಕಾರ ಮತ್ತು ಸಮಾಜ ಗಮನಸೆಳೆಯುವಂತಹ ಕೆಲಸ ಸಂಸ್ಥೆ ಮಾಡುತ್ತಿದೆ ಎಂದರು.
ಡಾ.ಚಾಮರಾಜ ಕಮ್ಮಾರ, ಶಿವು ಬಳಿಚಕ್ರ, ಕು.ಪ್ರೀತಮ ಜಿ, ನಾಗಣ್ಯ ವಿ.ಬಡೀಗೆರ, ಸಿದ್ದರಾಮ ಸರಸಂಬಿ,ವಿದ್ಯಾರೆಡ್ಡಿ, ಎಂ ಸಂಜೀವ ದೇವಾನಾಂಪ್ರೀಯ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ವೀರೇಂದ್ರ ಇನಾಮದಾರ ಅಧ್ಯಕ್ಷತೆವಹಿಸಿದ್ದರು. ಪುರಸಭೆ ಅಧ್ಯಕ್ಷ ನಾಗು ಸಾಹುಕಾರ ಬಂಕಲಗಿ, ಸದಸ್ಯ ಶಾಮರಾವ ಮೇದಾರ, ಸಿ ಆರ್ ಸಿ ಕವಿತಾ ದೊಡ್ಡಮನಿ, ಪತ್ರಕರ್ತ ನಾರಾಯಣ ಎಂ ಜೋಶಿ, ಬಸವರಾಜ ಶಿರವಾಳ, ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
ಶಶಿಕಲಾ ವೈಜಾಪುರ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ ಶಿರವಾಳ ನಿರೂಪಿಸಿ ವಂದಿಸಿದರು. ಪೆÇೀಷಕರು ಮತ್ತು ನಗರದ ಸಾರ್ವಜನಿಕರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಿಸಿದರು.