ಮಕ್ಕಳಿಗೆ ವಿದ್ಯೆಯ ಜೊತೆ ಸಂಸ್ಕಾರ ನೀಡುವುದು ಅಗತ್ಯ : ತೇಗಲತಿಪ್ಪಿ

ಕಲಬುರಗಿ,ನ.24:ಮಕ್ಕಳಿಗೆ ನಾವು ಕೇವಲ ಶಿಕ್ಷಣ ನೀಡಿದರೆ ಸಾಲದು. ಅದರ ಜೊತೆಗೆ ಉತ್ತಮವಾದ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ನೀಡಬೇಕು. ಇದರಿಂದ ಅವರು ಮುಂದೆ ತಮ್ಮ ಜೀವನದಲ್ಲಿ ಉನ್ನತವಾದ ಸಾಧನೆ ಮಾಡಲು ಮತ್ತು ದೇಶಕ್ಕೆ ಅಮೂಲ್ಯವಾದ ಸಂಪತ್ತಾಗಲು ಸಾಧ್ಯವಾಗುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾರ್ಮಿಕವಾಗಿ ನುಡಿದರು.
ಶಿಕ್ಷಣ ಪಡೆಯುವದರ ಜೊತೆ ವಿವಿಧ ಸ್ಪರ್ಧೆ, ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುವ ಯುವ ಪ್ರತಿಭೆ ಸಾಯಿಪ್ರಸಾದ ಎಸ್.ವಂಟಿ ಅವರ 17ನೇ ಜನ್ಮದಿನದ ಪ್ರಯುಕ್ತ ನಗರದ ಜಗತ್ ಬಡಾವಣೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಸಂಜೆ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಸತ್ಕರಿಸಿ ಅವರು ಮಾತನಾಡುತ್ತಿದ್ದರು.
ಗುವಿವಿಯ ಸಿಂಡಿಕೇಟ್ ಮಾಜಿ ಸದಸ್ಯ ಸುನೀಲಕುಮಾರ ವಂಟಿ ಮಾತನಾಡಿ, ಬಾಲ್ಯದಲ್ಲಿಯೇ ಅನೇಕ ಮಕ್ಕಳಿಂದು ಬಾಲಾಪರಾಧಿಗಳಾಗುತ್ತಿದ್ದಾರೆ. ಅವರಿಗೆ ಸೂಕ್ತ ಸಂಸ್ಕಾರದ ಕೊರತೆಯ ಪ್ರತಿಫಲವಾಗಿದೆ. ಪಾಲಕ-ಪೋಷಕ ವರ್ಗದವರು ಒಂದು ವೇಳೆ ಶಿಕ್ಷಣ ನೀಡುವಲ್ಲಿ ಎಡವಿದರೆ ಗಂಭೀರ ಸಮಸ್ಯೆಯಾಗದು. ಆದರೆ ಸಂಸ್ಕಾರ ನೀಡಲು ವಿಫಲರಾದರೆ ಭಯೋತ್ಪಾದಕರು, ಸಮಾಜಘಾತುಕರಾಗಿ ಮಾರ್ಪಟ್ಟರೆ ಅವರು ನಿಮ್ಮ ಕುಟುಂಬ ಮತ್ತು ಸಮಾಜಕ್ಕೆ ದೊಡ್ಡ ಕಂಟಕಪ್ರಾಯವಾಗುತ್ತಾರೆ. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕಾದದ್ದು ಪ್ರಸ್ತುತ ದಿನಗಳಲ್ಲಿ ತುಂಬಾ ಅಗತ್ಯವಾಗಿದೆ ಎಂದರು.
ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಸಂಗಮೇಶ್ವರ ಸರಡಗಿ, ನೀಲಕಂಠಯ್ಯ ಹಿರೇಮಠ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಹೆಳವರ ಯಾಳಗಿ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ಮಲ್ಲಿನಾಥ ಮುನ್ನಳ್ಳಿ, ಸೋಮೇಶ ಡಿಗ್ಗಿ, ಬಾಲಕೃಷ್ಣ ಕುಲಕರ್ಣಿ, ಬಸವರಾಜ ನಾಟಿಕಾರ, ಜಯಶ್ರೀ ಎಸ್.ವಂಟಿ, ಸುಜಯ್ ಎಸ್.ವಂಟಿ, ಅನೀಲಕುಮಾರ ಎಂಟಮನಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.