ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ಶಾಲೆಯಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ

ಬಸವಕಲ್ಯಾಣ:ನ.17: ದೇಶದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದು ಹದಿಮೂರು ವರ್ಷಗಳು ಆದರೂ ಇನ್ನು ಅದೇಷ್ಟು ಲೆಕ್ಕವಿಲ್ಲದಷ್ಟು ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ, ಇನ್ನೂ ಅದೇಷ್ಟು ಮಕ್ಕಳು ನಮ್ಮ ದೇಶದಲ್ಲಿ ಶಾಲೆಯ ಮುಖವನ್ನೆ ನೋಡಿಲ್ಲದಿರುವುದು ವಿಪರ್ಯಾಸವಾಗಿದೆ ಎಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಜಿಲ್ಲಾ ಸಂಯೋಜಕ ನಾಗರಾಜ ಶೀಲವಂತ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಮಕ್ಕಳ ಹಕ್ಕು ಗುಂಪುಗಳ ಒಕ್ಕೂಟದ ವತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿ ವರ್ಷವು ಮಕ್ಕಳ ದಿನಾಚರಣೆ ಮಾಡುತ್ತಿದ್ದೆವೆ, ಆದರೆ ಮಕ್ಕಳಿಗೆ ಸಿಗಬೇಕಾದ ಮೂಲ ಭೂತ ಸೌಲಭ್ಯಗಳು ಇನ್ನೂ ಸಿಗುತ್ತಿಲ್ಲ, ಇನ್ನೂ ಅನೇಕ ಮಕ್ಕಳು ಶಾಲೆ ಬಿಟ್ಟು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಮಕ್ಕಳು ಕೆಲಸ ಮಾಡುವದನ್ನ ತಪ್ಪಿಸಿ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದರ ಮೂಲಕ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ ಆಗುವಂತೆ ಮಾಡಬೇಕು ಎಂದರು.

ನವೆಂಬರ್ 20ಕ್ಕೆ ವಿಶ್ವ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೆ ಬಂದು 30 ವರ್ಷಗಳು ಆಗುತ್ತವೆ ಮತ್ತು ನಮ್ಮ ದೇಶ ಸಹಿ ಮಾಡಿ 28 ವರ್ಷಗಳು ಆಗುತ್ತವೆ. ನಮ್ಮ ದೇಶವು ಈ ಒಂದು ಒಡಂಬಡಿಕೆ ಸಹಿ ಮಾಡುವಾಗ ಕೊಟ್ಟ ಮಾತಿನಂತೆ 30 ವರ್ಷ ಆಗುತ್ತಿದ್ದರೂ ನಮ್ಮ ದೇಶದ ಮಕ್ಕಳ ಪರಿಸ್ಥಿತಿ ಯಾವರೀತಿಯಲ್ಲಿ ಇದೆ ಎನ್ನುವುದನ್ನು ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದರು.

6ರಿಂದ 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ಸಿಗಬೇಕು ಮತ್ತು ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಯಲ್ಲಿ ಇರಬೇಕು ಮತ್ತು ಶಾಲೆಯಲ್ಲಿನ ಮೂಲಭೂತ ಸೌಲಭ್ಯಗಳಾದ ಶಿಕ್ಷಕರು, ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಗ್ರಂಥಾಲಯ, ತರಗತಿ ಕೋಣೆಗಳು, ದೈಹಿಕ ಹಿಂಸೆ ನಿಷೇಧ ಹೀಗೆ ನಾನ ರೀತಿಯ ಸೌ¯ಭ್ಯಗಳು ಒದಗಿಸಿಕೋಡಬೇಕು ಎಂದು ಪತ್ರಿಕಾಗೋಷೀಯಲ್ಲಿ ಭಾಗವಹಿಸಿದ ಮಕ್ಕಳ ಹಕ್ಕುಗಳ ಒಕ್ಕೂಟದ ಮಕ್ಕಳು ಆಗ್ರಹಿಸಿದರು.


ಮಕ್ಕಳ ಸಮಗೃ ಅಭಿವೃದ್ದಿಗೆ ಸರಕಾರ ಬದ್ದವಾಗಿ ತಮ್ಮ ಕರ್ತವ್ಯÀ ನಿರ್ವಹಿಸಬೇಕು. ಸಾರಿಗೆ ಸೌಲಭ್ಯ ಕಲಿಸುವ ಜೊತೆಗೆ ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಬೇಕು ಜೊತೆಗೆ ಶಾಲೆಗಳ ಸುತ್ತಲೂ ಮಧ್ಯ ಮಾರಾಟ ನಿಷೇಧ ಮಾಡಿ ಕ್ರಮ ಜರುಗಿಸಲು ಸಂಬಂಧಪಟ್ಟ ಅಕಾರಿಗಳಿಗೆ ನಿರ್ದೇಶನ ನೀಡಬೇಕು

ತುಳಸೀರಾಮ ಕಿಣ್ಣಿವಾಡಿ ವಿದ್ಯಾರ್ಥಿ

ಸರಕಾರ ಉಚಿತ ಶಿಕ್ಷಣ ಕಡ್ಡಾಯ ಮಾಡಬೇಕು, ಉಚಿತ ಶಿಕ್ಷಣ ಜಾರಿಗೊಳಿಸಲಾಗಿದೆ ಆದರೆ ಅದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸಿಗುತ್ತಿಲ್ಲ ಶಾಲೆಗಳಲ್ಲಿನ ಕುಂದು ಕೊರತೆ ಆಲಿಸಿ ವಿಷಯವಾರು ಶಿಕ್ಷಕರ ನೇಮಕ, ಶೌಚಾಲಯ, ಆಟದ ಮೈದಾನ ನಿರ್ಮಿಸಿಕೊಡಬೇಕು

ಸುಜಾತಾ ಪರ್ತಾಪೂರ ವಿದ್ಯಾರ್ಥಿನಿ

ಶಾಲೆಗೆ ಆಗಮಿಸುವ ಮಕ್ಕಳು ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ ಶಾಲೆಯಿಂದ ಹೊರಗುಳಿಯುವ ಮಕ್ಕಳು ಕೂಡಾ ಶಾಲೆಗೆ ಕರೆತರಲು ಸಂಬಂತರು ಮುಂದಾಗಬೇಕು ಇಂತಹ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಬೇಕು ಆದರೆ ಕೆಲ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಹೀಗಾಗಿ ಅಂತಹ ಮಕ್ಕಳಿಗೆ ಈ ದಿನದ ಮಹತ್ವ ಗೊತ್ತಾಗುತ್ತಿಲ್ಲ

ಅಂಜಲಿ ಧನ್ನೂರಾ (ಕೆ) ವಿದ್ಯಾರ್ಥಿನಿ

ಪರ್ತಾಪೂರ ಗ್ರಾಮದ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರಿಗೆ ಪಠ ಮಾಡುವ ವೇಳೆಯಲ್ಲಿಯೇ ಪುಂಡರ ಹಾವಳಿ ಹೆಚ್ಚಾಗಿ ಅವರು ಹೊರಗಿನಿಂದ ನಮ್ಮ ಮೇಲೆ ಕಲ್ಲು ತೂರುತ್ತಾರೆ. ಇದನ್ನು ನಿಲ್ಲಬೇಕು ಸಂಬಂತರು ಅಂತಹವರ ವಿರುದ್ದ ಕ್ರಮ ಜರುಗಿಸಲು ಮುಂದಾಗಬೇಕು

ಸುಧೀರ ಪರ್ತಾಪೂರ ವಿದ್ಯಾರ್ಥಿ

ಮಕ್ಕಳಿಗೆ ಬದುಕಲು ಮೂಲಭೂತ ಹಕ್ಕುಗಳು ಸಿಗಬೇಕು, ಸರಕಾರ ಶಿಕ್ಷಣದ ವಿಕಾಸ ಮಾಡಬೇಕು ಹಾಗೂ ಅಭಿವೃದ್ದಿಗೆ ಆದ್ಯತೆ ನೀಡಬೇಕು ಶಾಲೆಯಲ್ಲಿರುವ ಹಾಗೂ ಹೊರಗುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಸರಕಾರ ಯೋಜನೆ ರೂಪಿಸಬೇಕು ಅಲ್ಲದೆ ಗ್ರಾಪಂನಲ್ಲಿ ನಡೆಯುವ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಕಲ್ಪಿಸಿಕೊಡಬೇಕು

ಭವಾನಿ ಅತಲಾಪೂರ ವಿದ್ಯಾರ್ಥಿನಿ

ಶಾಲೆಯಲ್ಲಿ ಶೌಲಾಚಯ ನಿರ್ಮಿಸಿಕೊಡಬೇಕು ಶುದ್ದ ಕುಡಿಯುವ ನೀರು ಪೊರೈಸಲು ಮುಂದಾಗಬೇಕು ಮತ್ತು ಅಡುಗೆ ಕೋಣೆ ಇಲ್ಲದೇ ಪಾಠ ಮಾಡುವ ಶಾಲೆಯಲ್ಲಿಯೇ ಅಡುಗೆ ನಿರ್ಮಿಸುತ್ತಿರುವುದರಿಂದ ಬಯಲು ಪ್ರದೇಶದಲ್ಲಿ ಪಾಠ ಕೇಳುವ ಪ್ರಮೇದ ನಮ್ಮದಾಗಿದೆ. ನಮ್ಮ ಶಾಲೆಗೆ ಬೇಕಾದ ಸೌಲಭ್ಯಗಳು ಕಲ್ಪಿಸಲು ಸರಕಾರ ಮುಂದಾಗಬೇಕು

ವೈಶಾಲಿ ಪರ್ತಾಪೂರ ತಾಂಡಾದ ವಿದ್ಯಾರ್ಥಿನಿ

ನಗರದ ವಿವಿಧೆಡೆ ಹೋಟೆಲ್, ಗ್ಯಾರೇಜ್‍ಗಳಲ್ಲಿ ಮಕ್ಕಳು ಕೆಲಸ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ಹೋಟೆಲ್, ಗ್ಯಾರೇಜ್ ಮಾಲೀಕರ ಸಭೆ ಕರೆದು ಯಾವುದೇ ಕಾರಣಕ್ಕೂ ಮಕ್ಕಳಿಗೆ ಕೆಲಸಕ್ಕೆ ಇಟ್ಟುಕೊಳ್ಳಬಾರದು ಎಂದು ಸಲಹೆ ನೀಡಲಾಗುವದು ಹಾಗೂ ನಮ್ಮಲ್ಲಿ ಯಾವುದೇ ಕಾರಣಕ್ಕೂ 18 ವರ್ಷದ ಒಳಗಿನ ಮಕ್ಕಳಿಗೆ ಕೆಲಸ ನೀಡಲಾಗುವದಿಲ್ಲ ಎಂಬ ನಾಮ ಫಲಕ ಅಳವಡಿಸಬೇಕು ಇಷ್ಟಾದರೂ ತಪ್ಪು ಕಂಡುಬಂದಲ್ಲಿ ಅಕಾರಿಗಳು ಮುಲಾಜಿಲ್ಲದೇ ಕ್ರಮ ಜರುಗಿಸಿದರೆ ಇಂತಹ ಪ್ರಕರಣಗಳು ತಡೆಗಟ್ಟಲು ಸಾಧ್ಯ

ನಾಗರಾಜ ಶೀಲವಂತ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಜಿಲ್ಲಾ ಸಂಯೋಜಕ