ಮಕ್ಕಳಿಗೆ ಮಾರ್ಗದರ್ಶನ ಅಗತ್ಯ

ಹಿರಿಯೂರು.ಜು.20-ಇಂದಿನ ಮಕ್ಕಳಿಗೆ ಮಾರ್ಗದರ್ಶನದ ಕೊರತೆ ಇದ್ದು ಅದನ್ನು ನಿವಾರಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದು ಜೆ.ಸಿ ರಾಜಶೇಖರ್ ಹೇಳಿದರು. ನಗರದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಈ ಮಾಸ ಮಾತುಕತೆ 1ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಹೆಚ್ಚಿದ್ದು ನಿಮ್ಮೆಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ಸತತ ಅಧ್ಯಯನ ಶ್ರದ್ಧೆ ಅಚಲ ವಿಶ್ವಾಸ ಇರಬೇಕೆಂದು ಹೇಳಿದರು. ಎಲ್ಲರಲ್ಲೂ ವಿಶೇಷ ಶಕ್ತಿ ಸಾಮರ್ಥ್ಯವಿದೆ ಅದನ್ನು ವಿಶ್ಲೇಷಣೆ ಮಾಡಿಕೊಂಡು ತಮ್ಮ ಗುರಿಯತ್ತ ಮುನ್ನುಗ್ಗಬೇಕೆಂದರು. ಕಾರ್ಯಕ್ರಮದಲ್ಲಿ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ವಿ ಬಸವರಾಜ್,    ಅಧ್ಯಕ್ಷತೆ ವಹಿಸಿದ್ದರು ಪ್ರಾಚಾರ್ಯರಾದ ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವರಾಜ ಎಂ, ಅರುಣಾಕುಮಾರಿ, ರವಿಕುಮಾರ್, ನಾಗೇಶ್, ಗಿರೀಶ್  ಉಪಸ್ಥಿತರಿದ್ದರು.