ಮಕ್ಕಳಿಗೆ ಮಾರುಕಟ್ಟೆಯಲ್ಲಿ ಬರುತ್ತಿರುವ ಬಣ್ಣದ ಆಟಿಕೆಗಳು ಎಷ್ಟು ಸುರಕ್ಷಿತ

ಚಿತ್ರದುರ್ಗ. ಆ.೪; ಮಾರುಕಟ್ಟೆಯಲ್ಲಿ ಬರುತ್ತಿರುವ ಬಣ್ಣಬಣ್ಣದ ಆಟದ ಸಾಮಾನುಗಳು, ಮಕ್ಕಳಿಗೆ ಎಷ್ಟರಮಟ್ಟಿಗೆ ಸುರಕ್ಷಿತ ಎಂಬುದರ ಬಗ್ಗೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿಯವರು ತಿಳಿಸಿದ್ದಾರೆ.ಬಹಳಷ್ಟು ಮಕ್ಕಳನ್ನು ಸೆಳೆಯಲು, ಬಣ್ಣಬಣ್ಣದ ಬಲೂನ್‌ಗಳು, ಆಟದ ಸಾಮಗ್ರಿಗಳು, ಮುಖವಾಡಗಳು, ಮುಖಗವಚಗಳು, ಟೋಪಿಗಳು, ವಾಹನಗಳು, ಗೊಂಬೆಗಳು, ತೊಟ್ಟಿಲುಗಳು, ಬಟ್ಟೆಗಳು ಸಹ ದೊರೆಯಲು ಶುರುವಾಗಿವೆ, ಆದರೆ ಇವುಗಳು ಎಷ್ಟರಮಟ್ಟಿಗೆ ಆರೋಗ್ಯಪೂರ್ಣವಾದ ಬಣ್ಣವನ್ನು ಲೇಪಿಸಲಾಗಿದೆ, ಅದರಿಂದ ಮಕ್ಕಳ ಶರೀರದ ಮೇಲೆ ಆಗುವ ಅನಾಹುತಗಳೇನು ಎಂಬುದರ ಬಗ್ಗೆ ಸರಿಯಾದ ಸಂಶೋಧನೆ ಮಾಡಿ, ಅವುಗಳನ್ನು ಜನರಿಗೆ ತಲುಪಿಸುವ ಕೆಲಸಗಳು ಸÀರಿಯಾಗಿ ಆಗಿಲ್ಲ. ಹಾಗಾಗಿ ಜನರು ತಪುö್ಪ ತಪ್ಪಾದ, ಅನಾರೋಗ್ಯ ಪೂರ್ಣವಾದಂತ, ಅಪಾಯಕಾರಿ ಆಟಿಕೆಗಳನ್ನು ಮಕ್ಕಳಿಗೆ ಕೊಡಿಸುತ್ತಿರುವುದನ್ನು ನಾವು ರಸ್ತೆ ಬದಿಗಳಲ್ಲಿ ನೋಡಬಹುದು ಎಂದಿದ್ದಾರೆ.ಆಟದ ಸಾಮಾಗ್ರಿಗಳಿಗೆ ಅತಿಹೆಚ್ಚು ಕಣ್ಣು ಕೋರೈಸುವಂತಹ ಬಣ್ಣಗಳನ್ನು, ಬಳಿದಿರುವುದರಿಂದ, ಅದು ಮಕ್ಕಳ ಕಣ್ಣಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ, ಬಣ್ಣಬಣ್ಣದ ಬಲೂನುಗಳನ್ನು ಮಗು ಬಾಯಲ್ಲಿ ಕಚ್ಚಿ ಹಿಡಿಯುವುದರಿಂದ, ಮಗುವಿಗೆ ಆ ರಾಸಾಯನಿಕವು ದೇಹವನ್ನು ಸೇರುವ ಸಂಭವ ಇರುತ್ತದೆ. ಹಾಗೂ ಕೆಲವು ಬಲೂನುಗಳು ಡಬ್ಬೆಂದು ಸಿಡಿದು, ಮಕ್ಕಳಿಗೆ ಅನಾಹುತ ಮಾಡುವ ಸಂಭವವಿದೆ, ಸಿಡಿದ ಬಲೂನ ಚೂರುಗಳನ್ನು ಮಕ್ಕಳು ನುಂಗಿ, ಜೀವಕ್ಕೆ ಅಪಾಯ ತಂದುಕೊಳ್ಳುತ್ತವೆ. ಆಂತಹ ಆಟದ ಸಾಮನುಗಳನ್ನ ಪೋಷಕರು, ದೊಡ್ಡವರು, ಹಿರಿಯರು ಇರುವಾಗ, ಅವರ ಮುಂದೆಯೇ ನಿಂತು, ಜಾಗ್ರತೆಯಿಂದ ನೋಡಿಕೊಳ್ಳಬೇಕಾದ್ದು ಕರ್ತವ್ಯವಾಗಿದೆ ಎಂದಿದ್ದಾರೆ.ಕೆಲವು ಮಕ್ಕಳ ಆಟಿಕೆಗಳು ಅತಿ ಹೆಚ್ಚು ಶಬ್ದ ಮಾಡುವ ವಸ್ತುಗಳಾಗಿರುವುದರಿಂದ, ಅವು ಮಕ್ಕಳ ಕಿವಿಗೆ ತೊಂದರೆಯನ್ನುAಟು ಮಾಡುತ್ತವೆ, ಹಾಗಾಗಿ ಕಡಿಮೆ ಶಬ್ದ ಮಾಡುವಂಥ ಆಟದ ಸಾಮಾನುಗಳನ್ನ ಮಕ್ಕಳಿಗೆ ನೀಡಬೇಕಾಗಿದೆ ಹಾಗೂ ಚೂಪಾದ, ಮೊನಚುಳ್ಳಂಥ, ಬಹಳಷ್ಟು ಬ್ಯಾಟರಿ ಇರುವಂತಹ ಆಟದ ಸಾಮಾನುಗಳು ಬೇಡ. ಚೀನಾದಿಂದ ಬಂದAತ ಬಹಳಷ್ಟು ಆಟದ ಸಾಮಾನುಗಳು, ಬೇಗ ಮುರಿದು ಪುಡಿಪುಡಿಯಾಗುವ ಸಂಭವ ಇರುತ್ತದೆ. ಅಂತಹ ತುಣುಕುಗಳನ್ನ ಮಕ್ಕಳು ನುಂಗಿ, ಜೀವಕ್ಕೆ ಅಪಾಯ ಮಾಡಿಕೊಳ್ಳುವ ಸಂಭವವಿರುತ್ತದೆ ಎಂದಿದ್ದಾರೆ.