ಮಕ್ಕಳಿಗೆ ಮಾನಸಿಕ ಸದೃಢತೆ ಬೆಳಸಿ

ಕೆ.ಆರ್.ಪುರ,ಜ.೨೯- ಪಾಲಕರು ತಮ್ಮ ಮಕ್ಕಳಿಗೆ ಉತ್ತಮವಾದ ಹವ್ಯಾಸಗಳನ್ನು ಬೆಳೆಸುವ ಮೂಲಕ ಮಕ್ಕಳಲ್ಲಿ ಮಾನಸಿಕ ದೃಢತೆಯನ್ನು ಬೆಳೆಸಬೇಕು ಎಂದು ರಾಜ್ಯ ಖೋ-ಖೋ ಅಸೋಸಿಯೇಷನ್ ಅಧ್ಯಕ್ಷ ಲೋಕೇಶ್ವರ ಅವರು ಹೇಳಿದರು.
ಕೆ.ಆರ್.ಪುರ ಕ್ಷೇತ್ರದ ಎ.ನಾರಾಯಣಪುರದ ಕ್ಯಾಪಿಟಲ್ ಪಬ್ಲಿಕ್ ಶಾಲೆಯ ಸ್ಪಾರ್ಕ್ಸ್- ೨೦೨೪ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಶಾರೀರಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಉತ್ತಮವಾದ ಆಹಾರ ಪದ್ಧತಿಯನ್ನು ಬೆಳೆಸಬೇಕು. ನಮ್ಮ ಸಮಾಜಕ್ಕೆ ಉತ್ತಮವಾದ ಪ್ರಜೆಗಳನ್ನು ನೀಡುವುದು ಸಂಸ್ಥೆಗಳ ಉದ್ದೇಶವಾಗಬೇಕು ಎಂದರು.
ಚಿಂತಕಿ ಸುಧಾ ಬರಗೂರು ಮಾತನಾಡಿ, ನಾವು ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಹೊಂದಿರಬೇಕು. ನಾವು ಶ್ರಮ ಪಟ್ಟರೆ ನಮ್ಮ ಜೀವನ ಉತ್ತಮವಾಗುತ್ತದೆ. ನಮಗೆ ಆತ್ಮ ಸ್ಥೈರ್ಯ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದೆ ಸುಧಾ ಬರಗೂರು, ಶಾಲೆಯ ಅಧ್ಯಕ್ಷ ರಮೇಶ್,ನಿರ್ದೇಶಕಿ ಸುಶ್ಮಾ,ಪ್ರಾಂಶುಪಾಲರಾದ ಪ್ರಿಯವಾಸುದೇವನ್ ಇದ್ದರು.