
ಕೆಂಭಾವಿ:ಫೆ.27: ಮಕ್ಕಳಿಗೆ ಮನೆಯಿಂದಲೇ ಮೊದಲು ಸಂಸ್ಕಾರ ಸಂಸ್ಕøತಿ ಭಿತ್ತುವ ಕೆಲಸವಾಗಲಿ ಕೇವಲ ಅಂಕಗಳಿಗಾಗಿ ಮಕ್ಕಳಿಗೆ ಓದಿಸಬೇಡಿ ಓದಿನ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡಿ ವಿದೇಶಿ ಸಂಸ್ಕøತಿಯ ಅನುಕರಣೆ ಬೇಡ ಎಂದು ಯಡ್ರಾಮಿಯ ವಿರಕ್ತ ಮಠದ ಪೂಜ್ಯರಾದ ಶ್ರೀ ಮ.ನಿ.ಪ್ರ.ಸಿದ್ದಲಿಂಗ ಸ್ವಾಮಿಗಳು ಹೇಳಿದರು.
ಪಟ್ಟಣದ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆಯ ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು .ಮಕ್ಕಳನ್ನು ಕೇವಲ ಪಠ್ಯದ ವಿಷಯಗಳಿಗೆ ಸಿಮೀತವಾಗದೆ ಪಠ್ಯೇತರ ಚುಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರಿಪಿಸುವುದು ಪಾಲಕರ ಕರ್ತವ್ಯವಾಗಿದೆ,ಉನ್ನತ ಪದವಿಗಳನ್ನು ಪಡೆದು ವಿದೇಶಗಳಲ್ಲಿ ದುಡಿಯುವದಕಿಂತ ತಾಯಿ ತಾಯ್ನಾಡ ಸೇವೆ ಮಾಡುವುದು ಶ್ರೇಷ್ಠ ಎಂದು ಹೇಳಿದರು. ಸಂಸ್ಥೆಯ ವತಿಯಿಂದ ಕಾಯಕ ನಿಷ್ಠೆಗೊಂದು ಸಲಾಂ ಎಂಬ ಧ್ಯೇಯವನ್ನುಯಿಟ್ಟುಕೊಂಡು 108 ವಾಹನ ಚಾಲಕರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಂಭಾವಿ ಹೀರೆಮಠದ ಪೂಜ್ಯರಾದ ಷ.ಬ್ರ ಚನ್ನಬಸವ ಶಿವಾಚಾರ್ಯರು ದಿವ್ಯ ಸಾನಿಧ್ಯವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಮೂರ್ತಿ ಶ್ರೀ ರುದ್ರಮುನಿ ಸ್ವಾಮಿ ಹೀರೆಮಠ ಮಾಲಹಳ್ಳಿ ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಗಿರೀಶ ಕುಲಕರ್ಣಿ,ಡಾ.ಎ.ಜಿ.ಹೀರೆಮಠ,ಡಾ.ಕಿರಣ ಆರ್.ಜಕರೆಡ್ಡಿ,ಕೆಂಭಾವಿ ವಲಯ ಸಿ.ಆರ್.ಪಿ.ಈರಯ್ಯಸ್ವಾಮಿ ಹೀರೆಮಠ,ಶಿವಪ್ಪ ಕಂಬಾರ ಸೇರಿದಂತೆ ಸಂಸ್ಥೆಯ ಅಧ್ಯಕ್ಷರಾದ ಶರಣಗೌಡ ಎಸ್ ಮಾಲಿಪಾಟೀಲ ವೇದಿಕೆಯ ಮೇಲಿದ್ದರು.
ಬಸವರಾಜ ಅವಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಸಿ.ಬಿ.ಹೂವಿನಳ್ಳಿ ಸ್ವಾಗತಿಸಿದರು,ಸಂಸ್ಥೆಯ ವಾರ್ಷಿಕ ವರದಿಯನ್ನು ಶ್ರೀಮತಿ ಎನ್ ಎಸ್. ಮಾಲಿಪಾಟೀಲ್ ಮಂಡಿಸಿದರು .ಶಿಕ್ಷಕರಾದ ಸುರೇಶ ಕಲ್ಲದೇವನಹಳ್ಳಿ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು ನಂತರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.