ಮಕ್ಕಳಿಗೆ ಭಾರತೀಯ ಸೈನಿಕರ ಚಲನಚಿತ್ರ ತುಣುಕು ವೀಡಿಯೋ ಪ್ರದರ್ಶನ

ಅರಕೇರಾ.ಸೆ.೨೦- ಚಳಿ, ಗಾಳಿ, ಮಳೆ ಯಾವುದನ್ನು ಲೆಕ್ಕಿಸದೇ ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನೆ ಪಣಕ್ಕಿಡುವ ಸೈನಿಕರು ನಿಜವಾದ ಹಿರೋಗಳು ಎಂದು ಮುಖ್ಯಶಿಕ್ಷಕ ಜಲೀಲ್ ಹೇಳಿದರು.
ಪಟ್ಟಣದ ಶ್ರೀ ಎ.ವೆಂಕಟೇಶ ನಾಯಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಭಾರತೀಯ ಸೈನಿಕರ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ದೇಶದ ಆಸ್ತಿ, ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಸೈನಿಕರು ತಮ್ಮ ತ್ಯಾಗದ ಫಲವಾಗಿ ನಾವು ರಕ್ಷಣೆಯಿಂದ ಇದ್ದೇವೆ. ಭೂಸೇನೆ, ವಾಯುಸೇನೆ, ನೌಕಾ ಸೇನಾ ಪಡೆಗಳ ಕಾರ್ಯ ಚಟುವಟಿಕೆಗಳ ಚಿತ್ರದ ತುಣುಕುಗಳನ್ನು ವೀಡಿಯೋ ಮೂಲಕ ತೋರಿಸುವುದರಿಂದ ಮಕ್ಕಳ ಮೇಲೆ ದೇಶಪ್ರೇಮ ಬೀರಲಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮೌನ, ಶಿಕ್ಷಕಿಯರಾದ ಶ್ರೀದೇವಿ, ಶೇಖ್ ಫೈಜಾನ, ಶೇಖ್ ಗೋಹರ್ ಜಹಾನ್, ಮರಿಯಮ್ಮ, ಉಮಾದೇವಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.