ಮಕ್ಕಳಿಗೆ ಬಿಸಿಯೂಟ ಆಹಾರ ಧಾನ್ಯ ವಿತರಣೆ


ಬಾದಾಮಿ,ಮೇ.4:ತಾಲೂಕಿನ ಕಬ್ಬಲಗೇರಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲೆಯ ಮಕ್ಕಳಿಗೆ ಅಕ್ಷರದಾಸೋಹ ಯೋಜನೆಯಡಿ ಬಿಸಿಯೂಟದ ಅಕ್ಕಿ ಮತ್ತು ಗೋದಿ ವಿತರಣೆ ಮಾಡಲಾಯಿತು. ಸರಕಾರದ ನಿರ್ದೇಶನದಂತೆ 1 ರಿಂದ 8 ನೇ ತರಗತಿಯ ಮಕ್ಕಳಿಗೆ ಅಕ್ಕಿ, ಗೋದಿಯನ್ನು ವಿತರಿಸಲಾಯಿತು. ರಾಜ್ಯ ಪ್ರಶಸ್ತಿ ವಿಜೇತ ಶಾಲೆಯ ಮುಖ್ಯಶಿಕ್ಷಕ ವಾಯ್. ಎಫ್. ಷರೀಫ್ ಮಾತನಾಡಿ ಈ ಸಲದ ರೇಷನ್ ಹಂಚಿಕೆಯು ಈ ಶೈಕ್ಷಣಿಕ ಸಾಲಿನ ಕೊನೆಯ ಹಂಚಿಕೆಯಾಗಿದ್ದು, ಎಲ್ಲಾ ಮಕ್ಕಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿಯನ್ನು ಕಡ್ಡಾಯವಾಗಿ ಹೊಂದಿ ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಗ್ರಾಮಪಂಚಾಯತ ಸದಸ್ಯರು, ಆಡಗಲ್ಲ ಗ್ರಾಮ ಪಂಚಾಯತ ಉಪಾಧ್ಯಕ್ಷ ಪಾಂಡುರಂಗ ತಳವಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ಕನಕಪ್ಪ ಪರಸಣ್ಣವರ, ಸದಸ್ಯರಾದ ಭೀಮಸಿ ತಳವಾರ, ಮಾಗುಂಡಪ್ಪ ಹುಲಿಕೇರಿ ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು. ಶಾಲೆಯ ಒಟ್ಟು 360 ವಿದ್ಯಾರ್ಥಿಗಳಿಗೆ ಕೋವಿಡ್ ನಿಯಮಗಳಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿಕೊಂಡು ಆಹಾರ ಧಾನ್ಯ ವಿತರಿಸಲಾಯಿತು.