ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ನೀಡಬೇಕು

ಸಂಜೆವಾಣಿ ವಾರ್ತೆದಾವಣಗೆರೆ. ಜ.೨; ತಾಲೂಕು ಎಲೆಬೇತೂರು ಗ್ರಾಮದ ಸೇಂಟ್ ಮದರ್ ತೆರೇಸಾ ಕಾನ್ವೆಂಟ್ ಶಾಲೆಯ 23 ಮತ್ತು 24ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಶ್ರೀ ಆಂಜನೇಯ ದೇವಸ್ಥಾನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಂಬಾಭವಾನಿ ಮಹಿಳಾ ವಿದ್ಯಾಸಂಸ್ಥೆ ಕಂಬತ್ತಳ್ಳಿ ಅಧ್ಯಕ್ಷರಾದ. ಶ್ರೀಮತಿ ವಿ.ಎನ್  ದೇಸ್ಕರ್ ವಹಿಸಿದ್ದರು. ಪ್ರಾಸ್ತವಿಕ ನುಡಿಗಳನ್ನು ಶಾಲೆಯ ಕಾರ್ಯದರ್ಶಿ ಮಂಜುಳಾ ಟಿ ದೇಸ್ಕರ ಮಾತನಾಡುತ್ತಾ ಗ್ರಾಮದಲ್ಲಿ 23 ವರ್ಷಗಳಿಂದ ಶಾಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇದಕ್ಕೆಲ್ಲ ಗ್ರಾಮಸ್ಥರ ಸಹಕಾರ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ ಕರಿಬಸಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿ ಸೇಂಟ್ ಮದರ್ ತೆರೇಸಾ ಕಾನ್ವೆಂಟ್ ಶಾಲೆಯಲ್ಲಿಉತ್ತಮ ಶಿಕ್ಷಕರು ಇರುವುದರಿಂದ  ಉನ್ನತ ಶಿಕ್ಷಣ ನೀಡಿ  ವಿದ್ಯಾರ್ಥಿಗಳನ್ನು ಉತ್ತೀರ್ಣರಾಗಿ ಮುಂದಿನ ತರಗತಿಗಳಿಗೆ ಹೋಗಲು ಕಾರಣರಾಗಿದ್ದಾರೆ ಎಂದು ಶಾಲೆ ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಷಡಕ್ಷರಪ್ಪ ಎಂ ಬೇತೂರು ಮಾತನಾಡಿ ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದ ಮೌಲ್ಯಧಾರಿತ ಶಿಕ್ಷಣವನ್ನು ಪಡೆಯಲು ಹಿಂದೆ ಬಿದ್ದಿದ್ದಾರೆ ಆದ್ದರಿಂದ ಮಕ್ಕಳ ಜೀವನ ಸುಂದರವಾಗಿ ಇರಬೇಕಾದರೆ ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ವನ್ನು ಪೋಷಕರು ನೀಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸುತ್ತಾ ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆ ಆಗುತ್ತದೆ,ಸಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ, ಬಂಗಾರಕ್ಕೆ ಸಂಸ್ಕಾರ ನೀಡಿದಾಗ ಒಡೆವೆಯಾಗುತ್ತದೆ, ಮಗುವಿಗೆ ಸಂಸ್ಕಾರ ನೀಡಿದಾಗ ಉತ್ತಮ ಮಗುವಾಗಿ ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆ ಆಗುತ್ತಾನೆ ಎಂದರು. ಪರೀಕ್ಷೆ ಸಮಯ ಇನ್ನೂ ಸಮೀಪಿಸುತ್ತಿದೆ ಆದ್ದರಿಂದ ಮಕ್ಕಳು ಮೊಬೈಲ್ ಮತ್ತು ಟಿವಿಗಳಿಂದ ದೂರವಿರುವಂತೆ ತಿಳಿಸಿ ಹಾಗೂ ಪೋಷಕರು ಗಮನಹರಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಪನಳ್ಳಿ ಶ್ರೀಮತಿ ಶಾಂತಮ್ಮ ಬಸವನಗೌಡಪ್ಪ ಮಾಜಿ ಕಾಡ ಸಮಿತಿ ಸದಸ್ಯರಾದ ಎಚ್ ಬಸವರಾಜಪ್ಪ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿರುಪಾಕ್ಷಪ್ಪ ಶಾಲೆಯ ಅಭಿವೃದ್ಧಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಆಗಮಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ ಶಿವಕುಮಾರ್ ,ಜಕ್ಕವರ ಚಂದ್ರಪ್ಪ , ಶ್ರೀಮತಿ ಜಯಮ್ಮ ಮಠದ ಬಸವರಾಜಯ್ಯ,ಶ್ರೀಮತಿ ಲತಾ ಮರಳುಸಿದ್ದಾಚಾರ್ ಶ್ರೀಮತಿ ಶಾಂತಮ್ಮ ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೋಷಕರ ಕ್ರೀಡಾಕೂಟದಲ್ಲಿ ಜಯಗಳಿಸಿದ ಹಾಗೂ  ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆಬಹುಮಾನ ವೇದಿಕೆಯ ಮೇಲಿದ್ದ ಅತಿಥಿಗಳಿಂದ ವಿತರಣೆ ಮಾಡಲಾಯಿತು. ಪ್ರಾರ್ಥನೆಯನ್ನು ಶಾಲಾ ಶಿಕ್ಷಕರಿಂದ ಸ್ವಾಗತ ನಿವೃತ್ತ ಪ್ರಿನ್ಸಿಪಾಲರು ಆರ್.ಎ. ದೇಸ್ಕರ್ ವಂದನಾರ್ಪಣೆಯನ್ನು ಶಾಲೆಯ ಕಾರ್ಯದರ್ಶಿ ಮಂಜುಳಾ. ಡಿ.ದೇಸ್ಕರ್  ನಿರೂಪಣೆಯನ್ನು ಧನುಜ. ವಿ. ನೆರವೇರಿಸಿದರು. ಕೊನೆಯಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.