ಮಕ್ಕಳಿಗೆ ಪೌಷ್ಠಿಕ ಆಹಾರ ಅತ್ಯಗತ್ಯ


ರಾಮದುರ್ಗ,ಜ.7: ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಆರೋಗ್ಯವಂತರನ್ನಾಗಿ ಮಾಡಬೇಕು ಅಂದಾಗ ಮಾತ್ರ ಸದೃಢರಾಗಲು ಸಾಧ್ಯವಿದೆ ಎಂದು ದೈಹಿಕ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ನಂದೀಶ ಹೇಳಿದರು.
ಸಮರ್ಪಣ ವಿದ್ಯಾಪೀಠದಲ್ಲಿ ಆಯೋಜಿಸಿದ್ದ ಮಾತೃಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಕುರುಕಲು ತಿಂಡಿ ನೀಡದೇ ಮೊಳಕೆ ಕಾಳು ಸೇರಿದಂತೆ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರ ನೀಡುವತ್ತ ತಾಯಂದಿರು ಗಮನ ಹರಿಸಬೇಕು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕಿ ಸುನಂದಾ ವಾಲಿ ಮಾತನಾಡಿ ಮನೆಯಲ್ಲಿ ಉತ್ತಮ ಆಹಾರ ಬಿಸಿ ಬಿಸಿಯಾಗಿ ತಯಾರಿಸಿ ಮಕ್ಕಳಿಗೆ ನೀಡಬೇಕು ವಿಶೇಷವಾಗಿ ಸಿರಿಧಾನ್ಯ ಬಳಕೆ ಮಾಡಿದರೆ ಪೌಷ್ಠಿಕತೆ ಹೆಚ್ಚು ದೊರೆಯುತ್ತದೆ, ಹೊಟೇಲ್ ತಿಂಡಿಗಳಿಗಿಂತ ಮನೆಯಲ್ಲಿ ತಯಾರಿಸುವ ಆಹಾರ ಉತ್ತಮವಾದದ್ದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಮರ್ಪಣ ಸಂಸ್ಥೆಯ ಕಾರ್ಯದರ್ಶಿ ಮಾತೃಭೋಜನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದು ಮತ್ತು ತಾಯಂದಿರಿಗೆ ಅಡುಗೆ ಸ್ಪರ್ದೆ ಏರ್ಪಾಡು ಮಾಡುವದಲ್ಲದೆ ಪೌಷ್ಠಿಕ ಆಹಾರದ ಮಹತ್ವ ನೀಡುವದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಶಿಕ್ಷಕವೃಂದದ ಇಂದುಮತಿ ಬುಡ್ಡಾಗೋಳ, ರೇಣುಕಾ ಸಂಶಿ, ಸಾವಿತ್ರಿ ಬನ್ನೂರಮಠ, ಗೀತಾ ಮೇದಾರ, ಪ್ರವೀಣ ಮಾಳಗಿ ಇದ್ದರು. ಶಿಕ್ಷಕ ಮಾರುತಿ ಸ್ವಾಗತಿಸಿದರೆ ಶಿಕ್ಷಕಿ ನೀಲಮ್ಮ ಹಿರೇಮಠ ವಂದಿಸಿದರು.