ಮಕ್ಕಳಿಗೆ ಪೌಷ್ಠಿಕ ಆಹಾರನೀಡಲು ಸಲಹೆ

ನಾಯಕನಹಟ್ಟಿ.ಸೆ.೧೬:  ಮಕ್ಕಳಿಗೆ ಉತ್ತಮವಾದ ಪೌಷ್ಠಿಕ ಆಹಾರನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಮೇಲ್ವಿಚಾರಕರಾದ ಸೌಮ್ಯ ಉತ್ಕರ್ಷಣಕಾರಿ ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಿದರು.
 ನಾಯಕನಹಟ್ಟಿ ಪಟ್ಟಣದ ಮೈರಾಡ ಕಛೇರಿಯಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಚಳ್ಳಕೆರೆ ಇವರ ಸಂಯುಕ್ತ ಆಶ್ರಯಾದಲ್ಲಿ  ನಡೆದ ಪೋಷಣ ಅಭಿಯಾನ ಯೋಜನ ರಾಷ್ಟಿçÃಯ ಪೋಷಣೆ ಮಾಸಚಾರಣೆ ಮತ್ತು ಯೋಗ ದಿನಾಚರಣೆ ಬಗ್ಗೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೌಷ್ಠಿಕ ಆಹಾರದ ಬಗ್ಗೆ ಮತ್ತು ರಾಷ್ಟಿçÃಯ ಪೋಷಣ ಅಭಿಯಾನದ ಉದ್ದೇಶದ ಬಗ್ಗೆ ಮಾತನಾಡಿದರು.ಪಟ್ಟಣ ಪಂಚಾಯಿತಿ ಸದಸ್ಯರಾದ ಬಸಣ್ಣ ಮಾತನಾಡಿ ಹಗಲು ರಾತ್ರಿಯನ್ನದೇ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.ಪಟ್ಟಣ ಪಂಚಾಯಿತಿಯ ಹಿರಿಯ ಆರೋಗ್ಯ ನಿರ್ವಾಹಕರು ರೋಗ ಬರುವುದಕ್ಕೆ ಮುಂಚೆ ವ್ಯಕ್ಸಿನ್ ಹಾಕಿಸಿಕೊಳ್ಳಬೇಕು ಅಪೌಷ್ಠಿಕ ಮಕ್ಕಳ ಆರೋಗ್ಯ ಅಪೌಷ್ಠಿಕ ಆಹಾರದ ಬಗ್ಗೆ ಕಾಳಜಿ ವಾಹಿಸಬೇಕು ಹಸಿರು ತರಕಾರಿ ಮತ್ತು ಪೌಷ್ಠಿಕಂಶವುಳ್ಳ ಹಾಗೂ ಹಣ್ಣಿನ ಮರಗಳನ್ನು ತಮ್ಮ ಮನೆಯ ಆವರಣದಲ್ಲಿ ಬೇಳೆಸುವುದು ಇದರಿಂದ ನಿತ್ಯ ತಾಜ್ಯ ಸೋಪ್ಪು ಮತ್ತು ತರಕಾರಿ ಸಿಗಲಿದೇ ಹಣ್ಣ ತರಕಾರಿ ಮತ್ತು ಸೋಪು ಸೇವನೆಯಿಂದ ಹೆಚ್ಚು ಮಿಟಮಿನ್ ಅಂಶ ದೊರೆಯಲಿದೆ ಇದರಿಂದ ಅಪೌಷ್ಠಿಕತೆ ಹೊಗಲಾಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು. ನೆಲಗೇತನಹಟ್ಟಿ ಪ್ರಥಾಮಿಕ ಆರೋಗ್ಯ ಕೇಂದ್ರ ನಿರೀಕ್ಷರಾದ ಶೇಷಾದ್ರಿ ಮಾತನಾಡಿ ಪ್ರತಿ ಯೊಬ್ಬರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು 2 ಘಂಟೆ ವಿಶ್ರಾಂತಿ ತೆಗೆದುಕೊಳ್ಳಬೇಕು ಅಂಗನವಾಡಿ ಕಾರ್ಯಕರ್ತರು ನಿಮ್ಮ ಸಂಬಂಧಿಕರಿಗೆ ವ್ಯಾಕ್ಸಿನ್ ಹಾಕಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪಸ್ಥಿತರಾದ ಪೋಲಿಸ್ ಇಲಾಖೆಯ ಎ.ಎಸ್.ಐ ಗುರುಮೂರ್ತಿ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಬಸಣ್ಣ ಯೋಗ ಶಿಕ್ಷಕರಾದ ಉಮಾಪತಿ, ಪಟ್ಟಣ ಪಂಚಾಯಿತಿ ಸಿಬ್ಬಂದಿಯಾದ ಟಿ.ಟಿ.ತಿಪ್ಪೇಸ್ವಾಮಿ, , ರುದ್ರಮುನಿ ಇದ್ದರು.