ಮಕ್ಕಳಿಗೆ ಪೆÇೀಲಿಯೋ ಲಸಿಕೆ ಅತ್ಯಗತ್ಯ:ಡಾ.ಕುಂಬಾರ

ಸಂಜೆವಾಣಿ ವಾರ್ತೆ,
ವಿಜಯಪುರ ,ಮಾ.4:ಪೆÇೀಲಿಯೋ ಭಯಾನಕ ರೋಗವಾಗಿದ್ದು, 3 ವಿಧದ ವೈರಾಣುಗಳಿಂದ ಹರಡುತ್ತದೆ. ಈ ವೈರಾಣುಗಳು ಕಲುಷಿತ ನೀರಿನ ಮೂಲಕ ದೇಹವನ್ನು ಪ್ರವೇಶಿಸಿ ಮಕ್ಕಳ ಸಣ್ಣ ಕರುಳಿನಲ್ಲಿ ದ್ವಿಗುಣಗೊಂಡು ರಕ್ತದ ಮೂಲಕ ಬೆನ್ನು ಹುರಿಯ ನರಮಂಡಲವನ್ನು ಪ್ರವೇಶಿಸಿ ನರಕೋಶಗಳನ್ನು ನಾಶಮಾಡಿ ಶಾಶ್ವತ ಅಂಗವೈಕಲ್ಯ ಉಂಟುಮಾಡುತ್ತದೆ. ಇದನ್ನು ತಡೆಯಲು ಎರಡು ಹನಿ ಪಲ್ಸ್ ಪೆÇೀಲಿಯೋ ಅತ್ಯಗತ್ಯ ಎಂದು ವೈದ್ಯಾಧಿಕಾರಿ ಡಾ. ಬಸವರಾಜ ಕುಂಬಾರ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೆÇೀಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಪೆÇೀಲಿಯೋ ಲಸಿಕೆಯು ಬಹಳ ಸುರಕ್ಷಿತ. ಲಸಿಕೆಯನ್ನು ಪಡೆಯದ ಮಕ್ಕಳಲ್ಲಿ ಪೆÇೀಲಿಯೋ ವಿರುದ್ಧ ಹೋರಾಡುವ ಪ್ರತಿರೋಧ ಶಕ್ತಿ ಇರುವುದಿಲ್ಲ ಆದ್ದರಿಂದ ಮಕ್ಕಳು ಪೆÇೀಲಿಯೋ ರೋಗಕ್ಕೆ ತುತ್ತಾಗುತ್ತಾರೆ.ಹಾಗಾಗಿ ಪೆÇೀಲಿಯೋ ಲಸಿಕೆ ಅತ್ಯಗತ್ಯ ಎಂದು ಹೇಳಿದರು.
ಡಾ.ಅಮಿತ ಹೊನಕೇರಿ, ವೀಣಾ ಕಾಳೆ, ಎನ್ ಎಂ ವಗ್ಗಿ, ನಂದಿಶ ಕೆನೆದ, ಅಂಗನವಾಡಿ ಕಾರ್ಯಕರ್ತೆಯರಾದ ಸುಶೀಲಾ ಸಮಗೊಂಡ, ವಿಜಯಲಕ್ಷ್ಮೀ ಹಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅನುಶ್ರೀ, ಶ್ರೀನಿಧಿ, ಅಶೋಕ,
ರಾಧಾ,ಮೋಹನ ಸೇರಿದಂತೆ ಅನೇಕ ಮಕ್ಕಳಿಗೆ ಪೆÇೀಲಿಯೋ ಹನಿ ಹಾಕಲಾಯಿತು.