ಮಕ್ಕಳಿಗೆ ಪುಸ್ತಕ ವಿತರಿಸಿದ ಪಾಲಿಕೆ ಸದಸ್ಯ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.17:  ನಗರದ 22ನೇ ವಾರ್ಡಿನ  ಮಹಾನಗರ ಪಾಲಿಕೆ ಸದಸ್ಯ ಹನುಮಂತ.ಕೆ ಅವರು ತಮ್ಮ  ಜನ್ಮದಿನದ ಅಂಗವಾಗಿ ಇಂದು ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು.
ಅಲ್ಲದೆ ನಗರದ ಮದರ್ ಥೆರೆಸ ಬುದ್ಧಿಮಾಂದ್ಯ ಮಕ್ಕಳ ಆಶ್ರಮದಲ್ಲಿ ಬೆಳಿಗ್ಗೆ  ಉಪಹಾರವನ್ನು ವಿತರಿಸಲಾಯಿತು.
ಬಳಿಕ  ಶ್ರೀ ಶಿವ ಸೂರ್ಯ ವೃಧ್ಧಾಶ್ರಮದಲ್ಲಿ ವೃಧ್ಧರಿಗೆ ಉಪಹಾರವನ್ನು ವಿತರಿಸಿ ಕೇಕ್ ಕಟ್ ಮಾಡಲಾಯಿತು.
ಈ ಸಂದರ್ಭದಲ್ಲಿ ವಾರ್ಡಿನ  ಪಕ್ಷದ ಮುಖಂಡರುಗಳಾದ ಎರ್ರಿಸ್ವಾಮಿ.ರಾಮಾಂಜಿನಿ. ದುರ್ಗೆಶ್, ರಾಘವೇಂದ್ರ. ಷಣ್ಮುಖ.ಮಣಿ.ದೇವರಾಜ್ ಹಾಗೂ  ಮುಂತಾದವರು ಪಾಲ್ಗೊಂಡಿದ್ದರು
 ರಕ್ತಧಾನ ಶಿಬಿರ :
ಕಪ್ಪಗಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ನಲ್ಲಿ ರಕ್ತಧಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.‌ 101 ಜನ ರಕ್ತದಾನ ಮಾಡಿದರು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ  ಬಿಜೆಪಿಬನಗರ ಅಧ್ಯಕ್ಷ ಕೆ.ಬಿ ವೆಂಕಟೇಶ್ . ವೀರಶೇಖರ ರೆಡ್ಡಿ. ಶ್ರೀನಿವಾಸ್ ಮೋತ್ಕರ್. ಸಿ.ಇಬ್ರಾಹಿಂ  ಬಾಬು, ಕೆ.ಎಸ್. ಅಶೋಕ್. ಕೋನಂಕಿ ತಿಲಕ್. ಸುರೇಂದ್ರ. ಮಲ್ಲನ ಗೌಡ. ವೆಂಕಟರಮಣ. ಪ್ರಧಾನ ಕಾರ್ಯದರ್ಶಿ ಕೆ.ರಾಮಾಂಜಿನಿ ಮೊದಲಾದವರು ಇದ್ದರು.