ಮಕ್ಕಳಿಗೆ ಪಾಠದ ಜೊತೆಗೆ ಹಳ್ಳಿಯ ಜೀವನ ಪರಿಚಯ


ಸಂಜೆವಾಣಿ ವಾರ್ತೆ
ಗಂಗಾವತಿ, ಆ.29: ತಂತ್ರಜ್ಞಾನದ ಯುಗಕ್ಕೆ ಅಂಟಿಕೊಂಡಿರುವ ಮಕ್ಕಳು, ಇಂಟರ್‌ನೆಟ್‌, ಫೇಸ್‌ಬುಕ್‌ಗಳಲ್ಲಿ ಮುಳುಗಿ ನಮ್ಮ ಸಂಸ್ಕೃತಿ ಹಾಗೂ ಜೀವನ ಕ್ರಮವನ್ನು ಮರೆಯುತ್ತಿದ್ದಾರೆ ಎಂದು ಅಕ್ಷರ  ಪಬ್ಲಿಕ್ ಸ್ಕೂಲ್ ಮುಖ್ಯೋಪಾದ್ಯಾಯರಾದ ಹಿಮಾರೆಡ್ಡಿ  ಹೇಳಿದರು.
ನಗರದದ  ಅಕ್ಷರ ಪಬ್ಲಿಕ್ ಶಾಲೆ ಮಕ್ಕಳಿಗೆ ಶಿಕ್ಷಣದ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ನಮ್ಮ ಗ್ರಾಮೀಣ ಬದುಕನ್ನು ತಿಳಿಸಿಕೊಡಬೇಕು. ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವ ಯುವಜನಾಂಗಕ್ಕೆ ರೈತರ ನೋವು ನಲಿವುಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನಗಳು ಶಾಲಾ ಹಂತದಲ್ಲೇ ಆಗಬೇಕು. ಹಳ್ಳಿಯಲ್ಲಿ ನಡೆಯುವ ಕೃಷಿ ಕಾರ್ಯಗಳು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸಬೇಕು. ಬರೀ ಮೊಬೈಲ್ ನಲ್ಲಿ ಮಗ್ನರಾಗುವುದನ್ನು ತಡೆಯಬೇಕು ಎಂದರ.
ಈ ವೇಳೆ ಶಾಲೆಯ ನರ್ಸರಿ, ಎಲ್ ಕೆ ಜಿ, ಯು ಕೆ ಜಿ,   ಮಕ್ಕಳಿಗೆ  ಹೊಸಳ್ಳಿ  ಗ್ರಾಮದ ರೈತರೊಬ್ಬರ ಜಮಿನಿನಲ್ಲಿ ಭತ್ತದ ಸಸಿ ನೆಡೆಸುವ ಮೂಲಕ ಪ್ರಾತ್ಯಕ್ಷಿಕೆಯ ನೀಡಲಾಯಿತು.
ಈ ಸಂದರ್ಭದಲ್ಲಿ  ತೇಜಸ್ವಿ, ಶಿಕ್ಷಕರು ಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.