ಮಕ್ಕಳಿಗೆ ನೋಟ್‍ಬುಕ್, ಹಣ್ಣು-ಹಂಪಲು ವಿತರಣೆ

ಬೀದರಃಜೂ.11: ಸೂರ್ಯ ನಮಸ್ಕಾರ ಸಂಘದಿಂದ ವಿದ್ಯಾನಗರದಲ್ಲಿರುವ ಡಾ. ಚನ್ನಬಸವಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಬಡ ಪ್ರತಿಭಾವಂತ ಮಕ್ಕಳಿಗೆ ನೋಟ್‍ಬುಕ್ ಮತ್ತು ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ಜರುಗಿತು.

ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಸಂಚಾಲಕಿ ಸುವರ್ಣಾ ಚಿಮಕೋಡೆಯವರು ಅವರು ಮುಖ್ಯತಿಥಿಗಳಾಗಿ ಮಾತನಾಡುತ್ತ ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದಲ್ಲಿ ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಮುಖಾಂತರ ಆರನೆ ತರಗತಿಗೆ ಪ್ರವೇಶವನ್ನು ಪಡೆದಿರುತ್ತಾರೆ. ಪರಮ ಪೂಜ್ಯರಾದ ಡಾ. ಬಸವಲಿಂಗ ಪಟ್ಟದದೇವರ ಉದ್ದೇಶವೂ ಈ ಶಾಲೆಯಲ್ಲಿ ಕಲಿಯುವ ಮಕ್ಕಳು ಸಮಾಜದಲ್ಲಿ ಉತ್ತಮವಾದ ಸಂಸ್ಕøತಿ-ಸಂಸ್ಕಾರವನ್ನು ಪಡೆದುಕೊಂಡು ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವುದಾಗಿದೆ ಎಂದರು. ‘ಹೆಣ್ಣೊಂದು ಕಲಿತೆರೆ ಶಾಲೆಯೊಂದು ತೆರೆದಂತೆ’ ಎನ್ನುವ ಮಾತಿನಂತೆ ಹೆಣ್ಣು-ಗಂಡು ಭೇದ ಮಾಡದೆ ಸರ್ವರಿಗೂ ಸಮವಾದ ಶಿಕ್ಷಣ ಇಲ್ಲಿ ದೊರಕುತಿದೆ ಎಂದರು.

ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷರಾದ ಕಾಮಶೆಟ್ಟಿ ಚಿಕಬಸೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘವು ಸಮಾಜದ ಕಟ್ಟಕಡೆಯ ಬಡತನದಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ಗುರುತಿಸಿ ಶಿಕ್ಷಣ ಕೊಡಿಸುವುದಾಗಿದೆ. ಅವರ ಭವಿಷ್ಯ ಉಜ್ವಲಗೊಳಿಸಿ ರಾಷ್ಟ್ರನಿರ್ಮಾಣದತ್ತ ಹೆಜ್ಜೆ ಇಡುವುದಾಗಿದೆ. ಕೋವಿಡ್ ಸಂದರ್ಭದಲ್ಲಿ ಜನರು ಭಯಭೀತಿಯಲ್ಲಿರುವ ವಾತಾವರಣದಲ್ಲ್ಲಿ ನಮ್ಮ ಸಂಘವು ಯೋಗ ಮತ್ತು ಸೂರ್ಯ ನಮಸ್ಕಾರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಅನೇಕ ರೀತಿಯ ಸಮಾಜಮುಖಿ ಕಾರ್ಯವನ್ನು ಮಾಡಿದೆ, ನಮ್ಮ ಸಂಘದ ಉದ್ದೇಶ ಯೋಗ ಕಲಿಸುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವುದು ಮತ್ತು ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಸದುದ್ದೇಶವನ್ನು ಹೊಂದಿದೆ ಎಂದರು. ಅಲ್ಲದೆ ಪಶು-ಪಕ್ಷಿಗಳಿಗೆ ನೀರುಣಿಸುವ ಕಾರ್ಯವು ಮಾಡುತ್ತಲಿದೆ ಎಂದು ವಿವರಿಸಿದರು.

ಪ್ರೊ. ಬಸವರಾಜ ಮೂಲಗೆ ಸ್ವಾಗತ ಕೋರಿದರೆ, ಪ್ರೊ. ಊಮಾಕಾಂತ ಮೀಸೆಯವರು ನಿರೂಪಿಸಿದರು. ಕೊನೆಯಲ್ಲಿ ವಿವೇಕ ವಂದಿಸಿದರು. ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಸತ್ಯಪ್ರಕಾಸÀರವರು ಓಂಕಾರ ಮಂತ್ರ್ರ ಪಠಿಸಿದರು. ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಮಕ್ಕಳು ಪ್ರಾರ್ಥನೆ ನಡೆಸಿದರು.

ಸÀಂಘÀದ ಪದಾಧಿಕಾರಿಗಳಾದ ಬಸವರಾಜ ದಾನಿ, ಸಂತೋಷ ಬೆಲ್ದಾಳೆ, ಅನೀಲ ಸೋರಳ್ಳಿಕರ, ಪ್ರದೀಪ ಶಿವರಾಜ, ಅಪ್ಪಾರೆಡ್ಡಿ, ಗುರುನಾಥ ಬಿರಾದಾರ, ಹಿರಿಯರಾದ ಮಲ್ಲಿಕಾರ್ಜುನ, ಪ್ರೊ. ಸಂಗ್ರಾಮ ಎಂಗಳೆ, ಕೀರ್ತಮ್ಮ ವಾರ್ಡನ ಅವರು ಉಪಸ್ಥಿತರಿದ್ದರು.