ಮಕ್ಕಳಿಗೆ ನೈತಿಕ ಶಿಕ್ಷಣ ಹೇಳಿಕೊಡಬೇಕು.

ದಾವಣಗೆರೆ.ಜ.೨೧:  ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ವಾರ್ಷಿಕೋತ್ಸವಗಳು ಸಹಕಾರಿಯಾಗಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅಭಿಪ್ರಾಯಪಟ್ಟರು.ಇಲ್ಲಿನ ಸೋಮೇಶ್ವರ ಶಾಲೆಯಲ್ಲಿ  ನಡೆದ ಸೋಮೇಶ್ವರೋತ್ಸವ–2023 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಲ್ಲಿ ಹಾಡು, ನೃತ್ಯ, ನಾಟಕಗಳಲ್ಲಿ ಆಸಕ್ತಿ ಇರುತ್ತದೆ. ತಂದೆ–ತಾಯಿಗಳು ಅದನ್ನು ಗುರುತಿಸಬೇಕು. ಇಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮಾತ್ರ ಅವಕಾಶಗಳಿವೆ ಎಂಬುದಾಗಿ ವಿದ್ಯಾರ್ಥಿಗಳು ಭಾವಿಸಿದ್ದಾರೆ. ಆದರೆ ವಾಣಿಜ್ಯ, ಕಲೆ ವಿಷಯಗಳಲ್ಲೂ ತುಂಬಾ ಅವಕಾಶಗಳಿವೆ’ ಎಂದು ಹೇಳಿದರು.ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ‘ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ನೈತಿಕ ಶಿಕ್ಷಣ ಹೇಳಿಕೊಡಬೇಕು. ಮಕ್ಕಳಿಗೆ ವಿವೇಕಾನಂದರ ಪುಸ್ತಕಗಳನ್ನು ಓದುವಂತೆ ಸಲಹೆ ನೀಡಿದರು.ತುಮಕೂರಿನ ಸಿದ್ಧರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಾಲೆಯ ಸುರೇಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್‌, ಸುರೇಶ್  ಪತ್ರಕರ್ತ ಮಂಜುನಾಥ ಏಕಬೋಟೆ, ವೈದ್ಯರಾದ ಡಾ.ವಿದ್ಯಾ ವಿ, ಡಾ.ಸಿದ್ದೇಶ್ವರನ್, ಧರ್ಮಸ್ಥಳ ಅನ್ನದಾಸೋಹ ಭವನದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್, ಮುಖ್ಯ ಶಿಕ್ಷಕಿ ಪ್ರಭಾವತಿ ಎಚ್.ಎಂ, ಪತ್ರೇಶ್, ಪ್ರೌಢಶಾಲಾ ಮುಖ್ಯಸ್ಥ ಪ್ರಕಾಶ್ ಕಾರ್ಯಕ್ರಮದಲ್ಲಿ ಇದ್ದರು.