ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ಕರೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.25:  ಮಕ್ಕಳಿಗೆ ನೈತಿಕ ಮೌಲ್ಯ ಶಿಕ್ಷಣ ನೀಡುವುದರಿಂದ ಸಾಂಸ್ಕೃತಿಕ ಪರಂಪರೆಯು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಜ್ಯೋತಿಷ್ಯ ಪಾಠ ಶಾಲೆಯ ಪ್ರಾಚಾರ್ಯ ಚಂದ್ರಮೌಳಿ ಸ್ವಾಮಿ ಹೇಳಿದರು.
 ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ತಾಲ್ಲೂಕು ವೀರಶೈವ ಜಂಗಮರ ಸಂಘ, ಗುರು ಪಂಚಾಚಾರ್ಯ ವೈದಿಕ ಜ್ಯೋತಿಷ್ಯ ಪಾಠ ಶಾಲೆಯ ಸಹಯೋದೊಂದಿಗೆ 40 ದಿನ ಉಚಿತ ವೈದಿಕ ಸಂಸ್ಕಾರ ಬೇಸಿಗೆ ನಡೆಸಲಾಯಿತು.
 ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು ಹಾಗೂ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಂದ ವೇದ, ಮಂತ್ರ, ಯೋಗ, ನೃತ್ಯಗಳು ಪ್ರದರ್ಶಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
 ಮಾಜಿ ಶಾಸಕ ಚಂದ್ರಯ್ಯಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ವಕೀಲ, ಚನ್ನಬಸವನಗೌಡ, ಆರ್.ಬಸವಲಿಂಗಪ್ಪ, ವೀರಭದ್ರಶರ್ಮ, ಎಚ್.ಎಂ.ಶಿವಮೂರ್ತಿ, ಟಿ.ಎಂ. ಸಿದ್ಧಲಿಂಗಯ್ಯ ಸ್ವಾಮಿ, ಶ್ರೀರಾಮ, ಎಂ. ಬಸವನಗೌಡ, ನಾಮ ಜಗದೀಶ, ಹರೀಶ ಇದ್ದರು.

One attachment • Scanned by Gmail