
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.14:- ಬಸವಾದಿ ಶರಣರ ತತ್ವ ಅದರ್ಶಗಳನ್ನು ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕøತಿ ಮತ್ತು ಅಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಿ ಸಮಾಜನವನ್ನು ಜಾಗೃತಿಗೊಳಿಸಿ ಎಂದು ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.
ನಗರದ ಅನುಭವ ಮಂಟಪದಲ್ಲಿ ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಚಾಮರಾಜನಗರ ತಾಲ್ಲೂಕು ಸಂಗಮ ಗೃಹ ನಿರ್ಮಾಣ ಸಹಕಾರ ಸಂಘಗಳ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಉತ್ತಮ ಸಂಸ್ಕøತಿ ಮತ್ತು ಧರ್ಮವನ್ನು ಪಾಲನೆ ಮಾಡುವಂತೆ ಹೇಳಿ ಹೋಗಿದ್ದಾರೆ. ಇಂಥ ಶರಣರ ಪರಂಪರೆಯನ್ನು ಹೊಂದಿರುವ ನಾವೆಲ್ಲರು ಅವರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜವನ್ನು ನಿಮಾಣ ಮಾಡಲು ಮುಂದಾಗಬೇಕಾಗಿದೆ. ನಮ್ಮ ಮಕ್ಕಳು ಹಾಗೂ ಸಮಾಜಕ್ಕೆ ವೀರಶೈವ ಲಿಂಗಾಯತ ಧರ್ಮದ ಪರಂಪರೆ ಮತ್ತು ಮಹತ್ವದ ಬಗ್ಗೆ ತಿಳಿಸುವ ಮೂಲಕ ಅವರನ್ನು ಜಾಗೃತರನ್ನಾಗಿ ಮಾಡಬೇಕು ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಯುವ ಜನಾಂಗ ದಾರಿ ತಪ್ಪುತ್ತಿದ್ದಾರೆ. ಇಂಥವರಿಗೆ ಇಂಥ ಮಕ್ಕಳಿಗೆ ಬುದ್ದವಾದ ಹೇಳುವ ಜೊತೆಗೆ ಅವರನ್ನು ಸರಿದಾರಿಗೆ ತಂದು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಎಲ್ಲರು ಒಗ್ಗಟ್ಟಿನಿಂದ ಇಂಥ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಿಕ ಪ್ರಗತಿ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕವಾಗಿ ಹೆಚ್ಚು ಪ್ರಾಬಲ್ಯವನ್ನು ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಮೂರು ಸಂಘಗಳು ಒಗ್ಗಟ್ಟಿನಿಂದ ಸಾಗುತ್ತಾ ಅಭಿವೃದ್ದಿಯತ್ತ ಸಾಗುತ್ತಿರುವುದು ಹೆಮ್ಮೆ ವಿಚಾರವಾಗಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ಕಳೆದ 25 ವರ್ಷಗಳ ಹಿಂದೆ ಶ್ರೀ ಮಠದÀಲ್ಲಿ ಆರಂಭವಾದ ಮೂರು ಸಂಘಗಳು ಸಹ ಪ್ರಗತಿಯತ್ತ ಸಾಗಿ, ವಚನ ಪರಂಪರೆಯನ್ನು ಜನರಿಗೆ ತಿಳಿಸುವ ಜೊತೆಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಢಿಕರಿಸಿಕೊಂಡು ಸ್ವಂತ ಕಟ್ಟಡವನ್ನು ಹೊಂದಿ ಮಾದರಿಯಾಗಿ ಬೆಳೆಯುತ್ತಿವೆ. ಮುಂದಿನ ವರ್ಷದ ನೌಕರರ ಸಂಘಕ್ಕೆ ಬೆಳ್ಳಿ ಮಹೋತ್ಸವದ ಸಂಭ್ರಮವಾಗಿದೆ. ಇನ್ನು ಹೆಚ್ಚಿನ ಸಮಾಜದ ಬಂಧುಗಳಿಗೆ ಸಂಘ ಆಶ್ರಯವಾಗಲಿ ಎಂದು ಸ್ವಾಮೀಜಿ ಆಶಿಸಿದರು.
ಸಂಘ ಗೌರವ ಅಧ್ಯಕ್ಷ ಆರ್.ಎಂ.ಸ್ವಾಮಿ ಮಾತನಾಡಿ, ಮೂರು ಸಂಘಗಳು ಶಕ್ತಿ ಮೀರಿ ಬೆಳೆಯುವ ಜೊತೆಗೆ ಸಮಾಜಕ್ಕೆ ಆಸ್ತಿಯಾಗಿವೆ. ಈಗಾಗಲೇ ನೌಕರರ ಸಂಘ 25 ವರ್ಷಗಳನ್ನು ಪೊರೈಸಿ ಬೆಳ್ಳಿ ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿವೆ ಆದೇ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಸ್ವಂತ ಕಟ್ಟಡವನ್ನು ಹೊಂದಿ ಜನಪರ ಯೋಜನೆಗಳೊಂದಿಗೆ ಷೇರುದಾರರಿಗೆ ಉತ್ತ ಸೇವೆಯನ್ನು ನೀಡುತ್ತಿದೆ. ಸಂಗಮ ಗೃಹ ನಿರ್ಮಾಣ ಸಂಘವು ಸಹ ನಿವೇಶನ ನೀಡುವ ಜೊತೆಗೆ ಅವರ ಅಭಿವೃದ್ದಿ ಪತ್ತ ಬೆಳೆಯುತ್ತಿದೆ. ಈ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು. ಕೆಲವು ಸಣ್ಣಪುಟ್ಟ ಲೋಪದೋಷಗಳನ್ನು ತಿದ್ದುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ವರ್ಷದಿಂದ ಸಮಾಜದ ಎಲ್ಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಬದ್ದರಾಗಿದ್ದೇವೆ. ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸಂಘ ಸದಸ್ಯರ ಮಕ್ಕಳಿಗೆ ಪುರಸ್ಕಾರ ನೀಡಲಾಗುತ್ತಿದೆ. ಕಳೆದ 18 ತಿಂಗಳಿನಿಂದ ಸಂಘದ ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಆರೋಗ್ಯ ಸೇವೆ, ಮಕ್ಕಳಿಗೆ ತರಬೇತಿ, ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳಿಗೆ ಪ್ರಾಜೆಕ್ಟ್ ಕೊಡುಗೆ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುವ ಜೊತೆಗೆ ಸಂಘಕ್ಕೆ ಉಪಯುಕ್ತ ಸಲಹೆ ಸೂಚನೆ ಮತ್ತು ಮಾರ್ಗದರ್ಶನಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಸಕ್ತ ವರ್ಷದಲ್ಲಿ ನಿವೃತ್ತಿ ಹೊಂದಿದ 40 ಮಂದಿ ನಿವೃತ್ತ ನೌಕರರರು ಹಾಗು ಎಸ್‍ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ 43 ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ನೌಕರರ ಸಂಘದ ಮಾಜಿ ಅಧ್ಯಕ್ಷ ಡಾ. ಪರಮೇಶ್ವರಪ್ಪ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗ ಪ್ರಕಾಶ್, ಉಪಾಧ್ಯಕ್ಷ ಶಿವಣ್ಣ, ನಿಯೋಜಿತ ಅಧ್ಯಕ್ಷ ಗೌರಿಶಂಕರ್ ಉಪಾಧ್ಯಕ್ಷ ಕುಮಾರಸ್ವಾಮಿ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಆರ್. ನಾಗಭೂಷಣ್, ಉಪಾಧ್ಯಕ್ಷ ಜಿ.ಮಹದೇವಸ್ವಾಮಿ, ನಿಯೋಜಿತ ಅಧ್ಯಕ್ಷ ಗುರುಪಾದಸ್ವಾಮಿ, ಉಪಾಧ್ಯಕ್ಷ ಸುಂದರ್, ನೌಕರರ ಸಂಘದ ಉಪಾಧ್ಯಕ್ಷರಾದ ಮಹದೇವಸ್ವಾಮಿ ಐಟಿಐ, ಗಂಗಾಧರ್, ಮಾದಲಾಂಭಿಕೆ, ಕಾರ್ಯದರ್ಶಿ ಆರ್ಕಪ್ಪ, ಆರ್.ಎಸ್. ಲಿಂಗರಾಜು, ಎಲ್. ದೇವಣ್ಣ, ಶಿವಕುಮಾರಸ್ವಾಮಿ, ದಾಕ್ಷಾಯಿಣಿ, ಪ್ರಮೀಳಾ ಉದಗಟ್ಟಿ, ನಾಗಮಣಿ, ಜ್ಯೋತಿ, ನಿರ್ಮಲ, ಶಶಿಕಲಾ, ಕಾರ್ಯನಿರ್ವಾಹಕ ನಂಜುಂಡಸ್ವಾಮಿ, ಮಹೇಂದ್ರ, ಆಕಾಶ್ ಹಾಗೂ ಮೂರು ಸಂಘಗಳ ಸರ್ವ ಸದಸ್ಯರು ಇದ್ದರು.