ಮಕ್ಕಳಿಗೆ ಚಾಕಲೇಟ್ ನೀಡಿ ಸ್ವಾಗತಿಸಿದ ಶಾಸಕ ರೇಣುಕಾಚಾರ್ಯ

ನ್ಯಾಮತಿ.ನ.೧೦;  : ಅಂಗನವಾಡಿ ಕೇಂದ್ರಕ್ಕೆ ಬಂದ ಮಕ್ಕಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೂವು, ಚಾಕಲೇಟ್ ನೀಡಿ ಸ್ವಾಗತಿಸಿದ ಘಟನೆ ತಾಲೂಕಿನ ಚೀಲೂರು ಪ್ರಾಥಮಿಕ ಕೇಂದ್ರದಲ್ಲಿ ನಡೆದಿದೆ..ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಎಂಟು ತಿಂಗಳಿನಿAದ ಅಂಗನವಾಡಿ ಕೇಂದ್ರಗಳು ಮುಚ್ಚಿದ್ದು ಇದೀಗ, ಅಂಗನವಾಡಿ ಕೇಂದ್ರಗಳು ಮರು ಆರಂಭವಾಗಿದ್ದು ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನ ಸ್ವಾಗತಿಸಿ ಅವರು ಮಾತನಾಡಿದರು.ಕೊರೊನಾ ಮಹಾಮಾರಿಗೆ ಹೆದರಿ ಅಂಗನವಾಡಿಗಳನ್ನು ಸರ್ಕಾರ ಮುಚ್ಚಿಸಿದ್ದು, ಇದೀಗ ಕೊರನಾ ಅಲೆ ಕಡಿಮೆಯಾಗಿದ್ದು ಅಂಗನವಾಡಿ ಮರು ಆರಂಭ ಮಾಡಲಾಗಿದೆ ಎಂದ ರೇಣುಕಾಚಾರ್ಯ, ಇದೀಗ ಅಂಗನವಾಡಿಗಳಲ್ಲಿ ಮಕ್ಕಳ ಕಲರವ ಆರಂಭಗೊAಡಿದೆ ಎಂದರು.ಕೋವಿಡ್‌ನಿAದ ಮಕ್ಕಳ ಕಲಿಕೆಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮಕ್ಕಳು ಶಿಕ್ಷಣದಿಂದ ದೂರ ಉಳಿಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೇ ಇದೀಗ ಅಂಗನವಾಡಿಗಳು ಪುನರ್ ಆರಂಭಗೊAಡಿದ್ದು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದರು.ಕೊರೊನಾದಿAದಾಗಿ ಮಕ್ಕಳನ್ನು ಅಂಗವಾಡಿಗಳಿಗೆ ಕಳುಹಿಸಲು ಹಿಂದೇಟು ಹಾಕುತಿದ್ದ ಪೋಷಕರು ಇದೀಗ ಮಕ್ಕಳನ್ನ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿ ಕೊಡುತ್ತಿದ್ದು ಶಿಕ್ಷಣಕರು ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಮಕ್ಕಳ ಆರೋಗ್ಯದ ಕಡೆ ಗಮನ ಕೊಡುವಂತೆ ಕಿವಿ ಮಾತು ಹೇಳಿದರು..ಈ ಸಂದರ್ಭ ಸಿಡಿಪಿಓ ಮಹಂತೇಶ್ ಸೇರಿದಂತೆ ಅಂಗನವಾಡಿ ಶಿಕ್ಷಕರು ಸಹಾಯಕಿರಿದ್ದರು.