ಮಕ್ಕಳಿಗೆ ಕ್ರಿಕೆಟ್ ಕಿಟ್ ವಿತರಣೆ

ಸಿರವಾರ,ಮೇ.೦೧- ಜೆಡಿಎಸ್ ಪಕ್ಷದ ಯುವ ಮುಖಂಡ ಹಾಗೂ ಮಾಜಿ ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪ.ಪಂ ಮಾಜಿ ಸದಸ್ಯರಾದ ಇಮಾಮ್ ವಿಎನ್‌ಸಿ ಅವರು ಇಂದು ತಮ್ಮ ವಾರ್ಡ್‌ನ ಮಕ್ಕಳಿಗೆ ಕ್ರಿಕೆಟ್ ಕಿಟ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು ದುಶ್ಚಟಗಳಿಗೆ ಮತ್ತು ಬೇಕಾ ಬಿಟ್ಟಿಯಾಗಿ ಸುತ್ತಾಡುತ್ತಾರೆ ಇದರಿಂದಾಗಿ ಮಕ್ಕಳು ಕಲಿತ ವಿಧ್ಯೆ ಮರೆತಂತಾಗುತ್ತದೆ ಮತ್ತು ಎಲ್ಲಂದರಲ್ಲಿ ಸುತ್ತುವುದು ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಆದ್ದರಿಂದ ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನದಾಗ ಭಾಗಿಯಾವುದುರ ಮೂಲಕ ಅವರ ಬುದ್ಧಿ ಶಕ್ತಿ ಬೆಳೆಯುವಂತಾಗುತ್ತದೆ ಆದ್ದರಿಂದ ಇಂದು ನಮ್ಮ ವಾರ್ಡ್‌ನ ಮಕ್ಕಳಿಗೆ ಕ್ರಿಕೇಟ್ ಕಿಟ್ ವಿತರಣೆ ಮಾಡಲಾಗಿದೆ, ವಿದ್ಯೇಯೊಂದಿಗೆ ಕ್ರೀಡೆ ಇರಬೇಕು ಎನ್ನುವ ಹಿರಿಯರ ಮಾತಿನಂತೆ ಪ್ರತಿ ವರ್ಷದಂತೆ ನನ್ನ ವೈಯಕ್ತಿಕವಾಗಿ ನಮ್ಮ ವಾರ್ಡ್‌ನ ಮಕ್ಕಳಿಗೆ ಕ್ರಿಕೇಟ್ ಕಿಟ್ ವಿತರಣೆ ಮಾಡಿದ್ದೇನೆ ವಿನಹ ಮತ್ತಾವ ದುರುದ್ಧೇಶವಿಲ್ಲ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಾರ್ಡ್‌ನ ಯುವಕರು ರಫಿ, ನಜೀರ್, ಶಬ್ಬೀರ, ಖಲಂದರ, ಚನ್ನಬಸವ, ಅಶೋಕ, ರಾಜಾ ಗಲಗ್, ಮಂಜು, ಜಗ್ಗಪ್ಪ, ಮಹ್ಮದ್ ಸ್ಟಾರ್ ಟೈಲರ್ ಹಾಗೂ ನಿವಾಸಿಗಳು ಇದ್ದರು.