ಮಕ್ಕಳಿಗೆ ಕಲಿತಾ ಕಿಟ್ ವಿತರಣೆ

ದೇವದುರ್ಗ.ಮಾ.೩೧-ತಾಲೂಕಿನ ಮುಷ್ಟೂರು ಗ್ರಾಮದ ಮೂರು ಅಂಗನವಾಡಿ ಕೇಂದ್ರಗಳ ಮಕ್ಕಳು ಹಾಗೂ ಕಾರ್ಯಕರ್ತೆಯರಿಗೆ ಕ್ಯಾಪೋಕೋ ಸಂಸ್ಥೆ, ಕ್ರೈ ಸಂಸ್ಥೆ ಸಹಯೋಗದಲ್ಲಿ ಕಲಿಕಾ ಕಿಟ್ ಶನಿವಾರ ವಿತರಣೆ ಮಾಡಲಾಯಿತು.
ಶ್ರುತಿ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್.ಗಣೇಕಲ್ ಮಾತನಾಡಿ, ಮಾತನಾಡಿ, ಕರೊನಾ ಹಿನ್ನೆಲೆ ಅಂಗನವಾಡಿ ಮಕ್ಕಳಿಗೆ ಸಮರ್ಪಕವಾಗಿ ಆಹಾರ, ಶಿಕ್ಷಣ ಹಾಗೂ ಕಲಿಕೋಪಕರಣಗಳಿಂದ ವಂಚಿತರಾಗಿದ್ದಾರೆ. ಮಕ್ಕಳ ಸಮಸ್ಯೆ ಅರಿತು ಬೆಂಗಳೂರಿನ ಸಂಸ್ಥೆಗಳು ಕಲಿಕಾ ಸಾಮಗ್ರಿ ವಿತರಣೆ ಮಾಡಿದ್ದಾರೆ. ಇದನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಕಲಿಕಾಭ್ಯಾಸ ಮಾಡಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ರೇಣುಕಾ ರಂಗಪ್ಪ, ಡಿಂಗ್ರಿ ನರಸಪ್ಪ, ಕಾರ್ಯಕರ್ತೆಯರಾದ ಚನ್ನಬಸಮ್ಮ ಪಾಟೀಲ್, ನಾಗೇಶ ಭೋವಿ, ಚನ್ನಬಸಮ್ಮ ನಾಯಕ, ಬಿ.ವೀರಮ್ಮ ಅಗಳಕೇರಾ, ಎಚ್.ಆಂಜಿನೇಯ, ರೇಣುಕಾ, ಪಾರ್ವತೆಮ್ಮ ಇದ್ದರು.