ಮಕ್ಕಳಿಗೆ ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಿ : ಕಲ್ಯಾಣರಾವ ಶೀಲವಂತ

ಕಲಬುರಗಿ,ನ.1: ನಮ್ಮ ನಾಡು ಕನ್ನಡ ನಾಡು ಇಡೀ ದೇಶದಲ್ಲಿ ಹೆಸರು ವಾಸಿ, ಕರ್ನಾಟಕ ವೆಂದರೆ ರೋಮಾಂಜನ, ಇಲ್ಲಿನ ಪ್ರಕೃತಿ ಸೌಂದರ್ಯ ರಮಣೀಯ, ಇಡೀ ದೇಶದಲ್ಲಿ ಹೆಚ್ಚು ಜಲಪಾತಗಳನ್ನು ಹೊಂದಿರುವ ನಮ್ಮ ನಾಡು ಅತಿ ಶ್ರೇಷ್ಠ ನಾಡು ಎಂದು ಗುರೂಜಿ ಡಿಗ್ರಿ ಕಾಲೇಜಿನ ಅಧ್ಯಕ್ಷರಾದ ಕಲ್ಯಾಣರಾವ ಶೀಲವಂತ ತಿಳಿಸಿದರು.
ಶ್ರೀ ಚನ್ನಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಉತ್ತರ ವಲಯ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದ ನಂತರ ಮಾತನಾಡಿದ ಅವರು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದರಿಂದ ವಿಷಯ ಮನವರಿಕೆಯಾಗಲು ಸಾಧ್ಯ. ಶಿಕ್ಷಕರು ಮಕ್ಕಳಲ್ಲಿ ಹೆಚ್ಚು ಹೆಚ್ಚು ಓದಿನ ಬಗ್ಗೆ ತಿಳಿ ಹೇಳಬೇಕು ಜೊತೆಗೆ ಸಂಸ್ಕಾರವನ್ನು ಬೆಳೆಸಬೇಕು ಎಂದು ಹೇಳಿದರು.
ಮಕ್ಕಳಿಗೆ ಬರೀ ಪಾಠ ಮಾಡದೆ ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಸಂಸ್ಕøತಿಯ ಬಗ್ಗೆಯೂ ತಿಳಿಸಿ ಹೇಳಬೇಕು. ಕನ್ನಡವನ್ನು ಅಸಡ್ಡೆಯಿಂದ ಕಾಣದೇ ಕನ್ನಡ ಭಾಷೆಯಲ್ಲಿಯೇ ಐಐಎಸ್, ಐಪಿಎಸ್ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗೇರಿರುವುದುನ್ನು ಉದಾಹರಣೆ ಸಹಿತ ವಿವರಿಸಿದರು.
ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯ ಅಧ್ಯಕ್ಷರಾದ ಪ್ರಭುಲಿಂಗ ಮುಲಗೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನೇತೃತ್ವವನ್ನು ಸಿದ್ರಾಮಪ್ಪ ಉಕಲಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವರಾಜ ಸೂಗೂರ, ಧೂಳಪ್ಪಾ ಹಾದಿಮನಿ, ಶ್ರೀಶೈಲ ಹೊದಲೂರ, ಪರಮೇಶ್ವರ ಮುನ್ನಳ್ಳಿ, ಆಗಮಿಸಿದ್ದರು.
ವೇದಿಕೆ ಮೇಲೆ ಗೌರವ ಅಧ್ಯಕ್ಷರಾದ ಶಿವಯೋಗೆಪ್ಪಾ ಬಿರಾದಾರ, ಗೌರವ ಕಾರ್ಯದರ್ಶಿಗಳಾದ ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಕೋಶಾಧ್ಯಕ್ಷರಾದ ಶ್ರೀಕಾಂತ ಪಾಟೀಲ ದಿಕ್ಸಂಗಾ, ಸಂಚಾಲಕರಾದ ನವಾಬ್ ಖಾನ ಉಪಸ್ಥಿತರಿದ್ದರು.
ಚನ್ನಮಲ್ಲೇಶ್ವರ ಪ್ರೌಢ ಶಾಲಾ ಮುಖ್ಯ ಗುರುಗಳಾದ ಶ್ವೇತಾ ಮುತ್ತಾ ಸೇರಿದಂತೆ ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,