ಮಕ್ಕಳಿಗೆ ಓದು, ಬರಹದ ಪ್ರಾಮುಖ್ಯತೆ ತಿಳಿಸಿ ; ಶಾಸಕ ಸಿದ್ದು ಪಾಟೀಲ್

ಸಂಜೆ ವಾಣಿ ವಾರ್ತೆ
ಹುಮನಾಬಾದ್:ಮೇ.21:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಓದುವ ಹಾಗೂ ಬರೆಯುವ ಕುರಿತು ತಿಳಿಸುವ ಪ್ರಯತ್ನ ಪಾಲಕ ಪೆÇೀಷಕರು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು.
ಪಟ್ಟಣದ ಆಕ್ಸಿಜನ್ ನವೋದಯ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಹಾಗೂ ಪ್ರಾಥಮಿಕ ಶಾಲೆಗೆ ನೇಮಕಾತಿ ಪಡೆದ ನೂತನ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕವಾಗಿ ಮುಂದು ವರೆಯುತ್ತಿರುವ ಈ ಕಾಲದಲ್ಲಿ ಮಕ್ಕಳ ಕೈಗೆ ಮೊಬೈಲ್ ನೀಡಬಾರದು, ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಸಮಾಜ ಸುಧಾರಕರ, ಸ್ವಾತಂತ್ರ್ಯ ಹೋರಾಟಗಾರ ಜೀವನ ಚರಿತ್ರೆ ಕಥೆ ರೂಪದಲ್ಲಿ ತಿಳಿಹೇಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುರೇಶ ನವಣೆ, ನಾಗಶಟ್ಟಿ ಕುಲಕರ್ಣಿ, ಅಮಿತ ಚಿಂಚೋಳಿಕರ್, ವಿಜಯಕುಮಾರ ಹೊಸಮನಿ, ಪಂಡಿತ ಬಾಳುರೆ, ಪರಮೇಶ್ವರ ನೈಕೋಡೆ, ಅಖೇಲ್ ಪಟೇಲ್, ಜ್ಯೋತಿ ನವಣೆ, ಸತ್ಯಮ್ಮ, ಭಾಗ್ಯಶ್ರೀ, ಕಾವ್ಯ, ಗಾಬ್ರಿಯಲ್, ಮೌನೇಶ ಪಂಚಾಳ, ಸಂತೋಷ ಸುಧಾರಾಣಿ, ಸಚೀನ್, ಪ್ರಶಾಂತ ಸೇರಿಕಾರ ಸೇರಿ ಅನೇಕರಿದ್ದರು.