ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ : ರಮೇಶ್ ರಾಜಾಪೂರ

ಕಲಬುರಗಿ,ನ.25: ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ನ್ಯಾಯ ಮತ್ತು ಒಳ್ಳೆಯ ನಡತೆಯನ್ನು ಕಲಿಸಿಕೊಡುವ ಜವಾಬ್ದಾರಿ ಶಿಕ್ಷಕರ ಮತ್ತು ಪೆÇೀಷಕರ ವಾಗಿರುತ್ತದೆ ಎಂದು ನಂದೂರ ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ರಾಜಾಪೂರ ಅವರು ಹೇಳಿದರು.

ಕಲಬುರಗಿ ತಾಲೂಕಿನ ನಂದೂರ (ಕೆ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ಜ್ಯೋತಿ ಬೆಳಗಿಸಿ ಅವರು ಮಾತನಾಡಿ ಬಾಲ್ಯದಲ್ಲಿ ಮಕ್ಕಳು ತಮ್ಮ ಹಕ್ಕುಗಳ ಕುರಿತಾದ ಜ್ಞಾನದಿಂದ ವಂಚಿತರಾದರೆ, ಭವಿಷ್ಯದಲ್ಲಿ ಅವರಿಗೆ ಲಭಿಸಬಹುದಾದ ಪ್ರಯೋಜನಗಳಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ, ಮನೆಯಲ್ಲಿರುವ ಹಿರಿಯರು ಮತ್ತು ಸಮಾಜದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ತಮ್ಮ ಪಾಲಿನ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸಬೇಕಿದೆ. ಆ ಮೂಲಕ ಮಕ್ಕಳ ವರ್ತಮಾನ ಮತ್ತು ಭವಿಷ್ಯ ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು.

ನಂತರ ನಂದೂರ ಕೆ ಗ್ರಾಮ ಮುಖಂಡರಾದ ನಾಗೇಂದ್ರ ಕಲ್ಲಾ ಅವರು ಮಾತನಾಡಿ, ಮನೆಯಲ್ಲಿ ವಿದ್ಯಾ ಕಡಿಮೆ ಆದರೂ ಪರವಾಗಿಲ್ಲ ವಿನಯ ಮಾತ್ರ ಕಡ್ಡಾಯವಾಗಿ ಮನೆಯಲ್ಲಿ ಕೆಲಸವಾಗಬೇಕು ಎಂದು ಪೆÇೀಷಕರಿಗೆ ಕಿವಿಮಾತು ಹೇಳಿದರು.

ಒಂದು ವರ್ಷದಿಂದ 18 ವರ್ಷದ ಮಕ್ಕಳು ಯಾವುದೇ ತಪ್ಪು ಮಾಡಿದರೆ ತಂದೆ ತಾಯಿ ಮತ್ತು ಶಿಕ್ಷಕರು ಅವರ ತಪ್ಪನ್ನು ತಿದ್ದಬೇಕೆಂದು ಹೇಳಿದರು.

ಪ್ರಾಥಮಿಕ ಅಥವಾ ಪ್ರೌಢ ಶಾಲೆಯಲ್ಲಿ ಯಾವುದೇ ವಿಷಯದ ಮೇಲೆ ತಮ್ಮ ಮಕ್ಕಳ ಬಗ್ಗೆ ಸಭೆ ಇದ್ದರೆ ಆ ಸಭೆಗೆ ಪಾಲಕರು ದಯವಿಟ್ಟು ಹಾಜರಾಗಬೇಕೆಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಎಮ್.ಜಾನೆ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗುತ್ತದೆ. ಆ ಮೂಲಕ ಅವರ ಭವಿಷ್ಯ ಹಾಳು ಮಾಡಲಾಗುತ್ತಿದೆ. ಪೆÇೀಷಕರು ತೆಗೆದುಕೊಳ್ಳುವ ಇಂತಹ ತಪ್ಪು ನಿರ್ಧಾರಗಳಿಂದಾಗಿ ಮಕ್ಕಳು ತಮ್ಮ ಪಾಲಿನ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿμÁದಿಸಿದರು.
ತಂದೆ ತಾಯಿ ತಮ್ಮ ಮಕ್ಕಳಿಗೆ ಯಾವ ರೀತಿ ವಿದ್ಯಾಭ್ಯಾಸವನ್ನು ಕುಡಿಯುತ್ತಾರೋ ಆ ರೀತಿ ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಂದೂರ ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗಣ್ಣ ದೊಡ್ಮನಿ, ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮಹಾನಂದಾ, ಕಾರ್ಯದರ್ಶಿ ಕಲ್ಯಾಣಿ ಎರಿ, ಎಚ್ ಡಿ ಎಮ್ ಸಿ ದಸರಥ ಮಾಗಾಂವ, ಮಹಿಳಾ ಸಂಘದ ಪದಾಧಿಕಾರಿಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಪೆÇೀಷಕರು ಮತ್ತು ಮಕ್ಕಳು ಸಭೆಯಲ್ಲಿ ಪಾಲ್ಗೊಂಡಿದ್ದರು.