ಹುಮನಾಬಾದ:ಜೂ.29:ತಾಲ್ಲೂಕಿನ ವಳಖಿಂಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಆದ್ದರಿಂದ ಸರಿಯಾದ ಶಿಕ್ಷಣ ಹಾಗೂ ಮಕ್ಕಳಿಗೆ ಒಳ್ಳೆಯ ಊಟದ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕಾ ಅಧ್ಯಕ್ಷ ಅವಿನಾಶ ಧುಮಾಳೆ ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ತಿಳಿಸಿದ್ದಾರೆ. ಕೆಲವು ಕಡೆ ಬಿಸಿ ಊಟ ಸೇವಿಸಿ ಅಸ್ವಸ್ಥರಾಗುತ್ತಿದ್ದಾರೆ ಆದ್ದರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಬಿಸಿ ಊಟ ಮತ್ತು ಆಟವೂ ಅಷಚ್ಟೇ ಮುಖ್ಯವಾಗಿದೆ, ಶಾಲೆಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಂದು ಮಕ್ಕಳಿಗಹೆ ಶಿಕ್ಷಣ ನೀಡಬೇಕು, ಮಕ್ಕಳಿಹಗೆ ಊಟದ ವ್ಯವಸ್ಥೆ ಕಲ್ಪಿಸಿಕೊಡಬೇಕು ಹಾಗೂ ಆಹಾರದಲ್ಲಿ ಏರು ಪೇರು ಆಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಯಾವುದೇ ತೊಂದರೆ ಆದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಅವಿನಾಶ ಧುಮಾಳೆ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸೋಮು ಡಾಂಗ, ರಾಜು ಮೊಲಗೆ, ಪ್ರವೀಣ ಬಾಜಿ, ರೇವಣಸಿದ್ಧ ಪಾಂಡೆ ಉಪಸ್ಥಿತರಿದ್ದರು.