ಮಕ್ಕಳಿಗೆ ಒತ್ತಡ ಹೇರದೆ ಅವರಿಗೆ ಆತ್ಮಸ್ಥೆರ್ಯ ನೀಡಲುಪಾಲಕರು ಮುಂದೆ ಬರಬೇಕು:ಬಸವರಾಜ್ ಎಸ್.ಚೇಗರೆಡ್ಡಿ

ಬೀದರ ಸೆ.14: ಸಂವಿಧಾನ ಕಲಂ 309 ಆತ್ಮಹತ್ಯೆ ಅಡಿಯಲ್ಲಿ ಬರುತ್ತದೆ ಪ್ರಕೃತಿ ನಮಗೊಂದು ಜೀವಾ ನೀಡಿದೆ ಈ ಜೀವನವನ್ನು ಕಾದು ಕೊಳ್ಳುವುದು ನಮ್ಮ ಕರ್ತವ್ಯ ವಿದ್ಯಾರ್ಥಿಗಳ ಜೀವನದಲ್ಲಿ ಆಗುವ ಒತ್ತಡಗಳು ನಿಭಾಯಿಸಲು ತುಂಬಾ ಅವಶ್ಯಕ ಉಪನ್ಯಾಸಕರು ಹಾಗೂ ಪಾಲಕರು ಮಕ್ಕಳಿಗೆ ಒತ್ತಡ ಹೆರದೆ ಅವರಿಗೆ ಆತ್ಮಸ್ಥೆರ್ಯ ನೀಡಲು ಮುಂದೆ ಬರಬೇಕೆಂದು ಗೌರವನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ್ ಎಸ್.ಚೇಗರೆಡ್ಡಿ ಕರೆ ನೀಡಿದರು.

ಅವರು ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಬೀದರ ಹಾಗೂ ರಾಷ್ಟ್ರೀಯ ಸೇವಾಯೋಜನೆಯ ಘಟಕ 1 ಮತ್ತು 2 ಸರಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಕ್ರಿಯಾತ್ಮಕ ಕೆಲಸಗಳ ಮೂಲಕ ಭರವಸೆ ಮೂಡಿಸೋಣ ಎಂಬ ಘೋಷಣೆ ಮುಂಖಾತರ ವಿಶ್ವ ಆತ್ಮಹತ್ಯ ತಡೆಗಟ್ಟುವ ದಿನಾಚರಣೆ 2022 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ.ಕನಕಟ್ಟೆ ಅವರು ಮಾತನಾಡಿ ವಿಶ್ವ ಆತ್ಮಹತ್ಯ ತಡೆಗಟ್ಟುವ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುತ್ತಿದೆವೆ. ಆದರೆ ವಿಶ್ವದಲ್ಲಿ ಪ್ರತಿ ಸಾವುಗಳಲ್ಲಿ 1.4 ಆತ್ಮ ಹತ್ಯೆ ಪ್ರಕರಣ ಹೆಚ್ಚಾಗುತ್ತಿವೆ ಭಾರತ ದೇಶವು 15 ಸ್ಥಾನ ಈ ಪ್ರಕರಣದಲ್ಲಿ ಪಡೆದಿದೆ ಇದರಲ್ಲಿ 15 ರಿಂದ 24 ವಯಸ್ಸಿಗೆ ಸಂಬಂಧಪಟ್ಟ ಪ್ರಕರಣಗಳಾಗಿವೆ. ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳು ಬಂದರೆ ಅದನ್ನು ಎದರಿಸುವ ಧೈರ್ಯವನ್ನು ಹೊಂದಿರಬೇಕು ಎಂದು ಹೇಳಿದರು.

ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರ ಡಾ.ರತಿಕಾಂತ ಸ್ವಾಮಿ ಅವರು ಮಾತನಾಡಿ ಪಾಲಕರು ಮತ್ತು ಪೋಷಕರು ತಮ್ಮ ಕನಸುಗಳನ್ನು ಮಕ್ಕಳ ಮೆಲೆ ಒತ್ತಡ ಹೆರದೆ ಮಕ್ಕಳ ಆಯ್ಕೆಗೆ ಸ್ಪಂದಿಸಬೆಕು ಜೀವನದಲ್ಲಿ ಆತ್ಮಹತ್ಯೆ ಒಂದೇ ಪರಿಹಾರವಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಋಣಾತ್ಮಕ ಭಾವನೆಗಳು ಬಿಟ್ಟು ಧನಾತ್ಮಕ ವಿಚಾರಗಳನ್ನು ಇಟ್ಟುಕ್ಕೊಂಡು ವಿದ್ಯಾಭ್ಯಾಸದ ಕಡೆಗೆ ಒತ್ತು ಕೊಡಬೇಕು ಆಗ ವಿದ್ಯಾರ್ಥಿಗಳ ಜೀವನ ಸಾಧಿಸಲು ಸಾಧ್ಯವೆಂದು ಹೇಳಿದರು.

ಬೀದರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ ಎಮ್. ಪಾಟೀಲ ಮಾತನಾಡಿ ಸಮುದಾಯದಲ್ಲಿ ಪ್ರತಿವರ್ಷವು ಸೆಪ್ಟೆಂಬರ 10 ರಿಂದ ಒಂದು ವಾರ ವಿಶ್ವ ಆತ್ಮಹತ್ಯ ತಡೆಗಟ್ಟುವ ದಿನಾಚರಣೆಯನ್ನು ಜನಸಾಮಾನ್ಯರಿಗೆ ಮನೋ ವೈದ್ಯಕೀಯ ಶಿಕ್ಷಣದ ಮೂಲಕ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದರು.

ಮನೋ ವೈದ್ಯರಾದ ಡಾ. ಅಭಿಜೀತ ಎಸ್ ಪಾಟೀಲ್ ಅವರು ಮಾತನಾಡಿ ಆಧುನಿಕ ಯುಗದಲ್ಲಿ ಯುವಜನತೆ ಅತಿಯಾಗಿ ಮೊಬೈಲ್, ಇಂಟರನೆಟನಿಂದ ಅನೇಕ ವಿದ್ಯಾರ್ಥಿಗಳು ದುಷ್ಚಟಗಳಿಗೆ ಒಳಗಾಗುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವನವನ್ನೆ ನಾಶಮಾಡಿಕೊಳ್ಳುತ್ತಿದ್ದಾರೆ. ಕುಟುಬಂದಲ್ಲಿ ಯಾರಾದರು ಆತ್ಮಹತ್ಯಗೆ ಒಳಗಾಗುತ್ತಿದ್ದರೆ ಅದು ಮುಂದಿನ ಪೀಳಿಗೆಯ ಅಂದರೆ ಕುಟುಂಬದ ಯುವ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆÉ. ಇದಕೆ ಸರಿಯಾದ ಮಾಹಿತಿ ಕೊರತೆಯಿಂದ ಯುವಜನತೆ ಆತ್ಮಹತ್ಯಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಸರಿಯಾದ ಮಾಹಿತಿ, ಸಲಹೆ, ಆಪ್ತ ಸಮಾಲೋಚನೆ, ಚಿಕಿತ್ಸೆ, ನೀಡಿದರೆ ಆತ್ಮಹತ್ಯೆ ತಡೆಗಟ್ಟಲು ಸರಿಯಾದ ಅರಿವು ಮೂಡಿಸುವುದರಿಂದ ಯುವಜನತೆಗಳನ್ನು ಆತ್ಮಹತ್ಯಗೆ ಬಲಿಯಾಗುವದನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಅರಿವು ಮೂಡಿಸುವ ಭಿತಿಪತ್ರಗಳು ಬಿಡುಗಡೆಗೊಳಿಸಲಾಯಿತು.

ನೌಬಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಡಾ.ಅಮಲ್ ಶರಿಫ್ ಮನೋ ವೈದ್ಯರು, ಪ್ರೊ. ಬಸವರಾಜ ರಾಜೋಳೆ ಎನ್.ಎಸ್.ಎಸ್. ಸಂಯೊಜನಾಧಿಕಾರಿಗಳು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ. ಅಥಿತಿಗಳಾಗಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ವೀರಶಟ್ಟಿ ಚನಶೆಟ್ಟಿ, ಗಂಗಾಧರ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೋರಖನಾಥ, ಜ್ಯೋತಿ ಬರ್ಮಾ,ರೇಣುಕಾ ತಾಂದಳೆ, ಬ್ರಮಾರಂಬಾದೇವಿ, ದೀಲಿಪಕುಮಾರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದರು. ಸುಮಾರು 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದ ಡಾ.ಶೀಲಾ ಎನ್ ಎಸ್ ಎನ್.ಎಸ್.ಎಸ್. ಸಂಯೊಜನಾಧಿಕಾರಿಗಳು(ಎಸ್.ಎಫ್.ಯು) ಸ.ಪ್ರ.ದ. ಕಾಲೇಜು ಬೀದರ ಅವರು ನಿರೋಪಿಸಿದರು. ಡಾ.ಮಲ್ಲಿಕಾರ್ಜುನ ಗುಡ್ಡೆ ಮನೋಶಾಸ್ತ್ರಜ್ಞರು ಸ್ವಾಗತಿಸಿದರು, ಆಪ್ತ ಸಮಾಲೋಚಕ ಶಿಮಪ್ಪಾ ಬಿ ಸರಕುರೆ ವಂದಿಸಿದರು.