ಮಕ್ಕಳಿಗೆ ಒಣದ್ರಾಕ್ಷಿ ಪ್ರಯೋಜನಗಳು

ಒಣದ್ರಾಕ್ಷಿ ನೈಸರ್ಗಿಕ ಸಿಹಿಕಾರಕಗಳಲ್ಲಿ ಅತ್ಯುತ್ತಮವಾದದ್ದು. ಇದರಲ್ಲಿ ಅನೇಕ ಆರೋಗ್ಯಕರವಾದ ಪ್ರಯೋಜನಗಳಿವೆ ಹಾಗು ಹಲವು ಔಷಧೀಯ ಗುಣಗಳಿರುವುದರಿಂದ ವ್ಯಾಪಕವಾಗಿ ಬಳಸುತ್ತಾರೆ. ಎದೆ ಹಾಲಿನ ಜೊತೆಗೆ ಪೂರಕವಾಗಿ ಘನ ಆಹಾರ ಪ್ರಾರಭಿಸುವಾಗ ಒಣದ್ರಾಕ್ಷಿ ರಸ ಬಹಳ ಉಪಯುಕ್ತ. ಜೀರ್ಣಾಂಗ ಅವ್ಯವಸ್ಥತೆ, ಮಲಬದ್ಧತೆ ಸಮಸ್ಯೆ ಮತ್ತು ಜ್ವರ ಗುಣಪಡಿಸಲು ಸಹಾಯ ಮಾಡುತ್ತದೆ.
ಒಣದ್ರಾಕ್ಷಿಯಲ್ಲಿ ಅಧಿಕ ಕ್ಯಾಲೊರಿಗಳಿರುತ್ತದೆ ಮತ್ತು ಸಕ್ಕರೆಗೆ ಉತ್ತಮ ಪರ್ಯಾಯವಾಗುವುದು. ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉತ್ತಮ ನಾರಿನಾಂಶ ವಿರುವುದರಿಂದ ವಿರೇಚಕವಾಗಿ ಮಲಬದ್ಧತೆಗೆ ಒಳ್ಳೆಯ ಮನೆ ಪರಿಹಾರವಾಗಿ ಉಪಯುಕ್ತ. ಮೆದುಳಿನ ಮತ್ತು ದೇಹದ ಆರೋಗ್ಯಕರ ಬೆಳವಣಿಗೆಗಾಗಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮತ್ತು ಫಾಸ್ಪರಸ್ ಖನಿಜಗಳು ಸಮೃದ್ಧವಾಗಿರುತ್ತದೆ.
ಜ್ವರ ಮತ್ತು ಹೊಟ್ಟೆ ಅಸ್ವಸ್ಥತೆಗಳ ಸಮಯದಲ್ಲಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಟಾನಿಕ್ ತರಹ ಶಮನಗೊಳಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಅನೇಕ ಔಷಧಿಗಳಲ್ಲಿ ಒಣದ್ರಾಕ್ಷಿ ಬಳಸಲಾಗುತ್ತದೆ.
ಹಲ್ಲಿನ ಹುಳುಕು ಮತ್ತು ವಸಡಿನ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಒಣದ್ರಾಕ್ಷಿ ಸಿರಪ್
ಒಣದ್ರಾಕ್ಷಿ – 1/2 ಕಪ್
ನೀರು – 1 1/2 ಕಪ್
ನಿಂಬೆ ರಸ – 1 tsp ಬೇಕಾದರೆ ಉಪಯೋಗಿಸಬಹುದು.
ಚಕ್ಕೆ ಪುಡಿ – ಒಂದು ಚಿಟಕೆ ಬೇಕಾದರೆ ಉಪಯೋಗಿಸಬಹುದು
ಬೆಲ್ಲದ ಪುಡಿ – 1 tbsp ಬೇಕಾದರೆ ಉಪಯೋಗಿಸಬಹುದು
ವಿಧಾನ
ಒಣದ್ರಾಕ್ಷಿಗಳನ್ನು ಚೆನ್ನಾಗಿ ತೊಳೆದು ಬಾಣಲೆಗೆ ಹಾಕಿ. ನಂತರ ಚಕ್ಕೆ ಪುಡಿ ಮತ್ತು ಬೇಕಾಗುವಷ್ಟು ನೀರನ್ನು ಹಾಕಿ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ..
ಬಾಣಲೆಗೆ ದ್ರಾಕ್ಷಿಗಳು ಅಂಟಿಕೊಳ್ಳದಂತೆ ಆಗಾಗ ಮಿಶ್ರಣ ಮಾಡುತ್ತಿರಬೇಕು. ನಂತರ ಬೆಲ್ಲದ ಪುಡಿ ಹಾಕಿ ಕರಗಿದ ತಕ್ಷಣ ಗ್ಯಾಸ್ ಆರಿಸಿ.
ಚೆನ್ನಾಗಿ ಬೆಂದಿರುವ ದ್ರಾಕ್ಷಿ ತಣ್ಣಗಾದ ನಂತರ ಮಿಕ್ಸರ್ ಗೆ ಹಾಕಿ ರುಬ್ಬಿಕೊಂಡು ಪ್ಯೂರಿ ಮಾಡಿಕೊಳ್ಳಬೇಕು. ರುಬ್ಬಿಕೊಂಡ ಒಣದ್ರಾಕ್ಷಿ ರಸದ ಮಿಶ್ರಣವನ್ನು ಅದೇ ಬಾಣಲೆಗೆ ವರ್ಗಾಯಿಸಿ ಗಟ್ಟಿಯಾಗುವ ತನಕ ಕುದಿಸಬೇಕು. ಮಧ್ಯ ಮಧ್ಯ ಚೆನ್ನಾಗಿ ಕೈ ಯಾಡಿಸಿ . ಮಿಶ್ರಣ ಗಾಢವಾದಾಗ ಅದರ ಪ್ರಮಾಣ ಕಡಿಮೆಯಾಗುವುದು.ಕುದಿಸುವುದನ್ನು ನಿಲ್ಲಿಸಿ ತಣ್ಣಗಾಗಲು ಬಿಡಬೇಕು. ತಣ್ಣಗಾದ ಮಿಶ್ರಣಕ್ಕೆ ಬೇಕಾದರೆ ನಿಂಬೆ ರಸ ಹಾಕಿ ಗಾಜಿನ ಬಾಟಲಿಗೆ ವರ್ಗಾಯಿಸಿ.
ಒಣದ್ರಾಕ್ಷಿ ಸಿರಪ್ ತಯಾರಾಗಿದೆ. ಶಿಶು ಆಹಾರಗಳಿಗೆ ಒಳ್ಳೆಯ ನೈಸರ್ಗಿಕ ಸಿಹಿಯನ್ನು ನೀಡುವುದು .ಒಣ ದ್ರಾಕ್ಷಿ ಸಿರಪ್ ಅನ್ನು ಪ್ಯೂರಿ, ಮಸೆದ ಶಿಶು ಆಹಾರಗಳಿಗೆ ಹಾಗು ಗಂಜಿಗೆ ಸೇರಿಸಬಹುದು. ಕೈಗೆ ಕೊಡುವ ಆಹಾರಕ್ಕೆ ಹಚ್ಚಿ ಮಕ್ಕಳಿಗೆ ಕೊಡಬಹುದು.