ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಿ

ವಿಜಯಪುರ,ಸೆ೧೭:ವಿಶ್ವಕರ್ಮ ಸಮುದಾಯ ಉತ್ತಮ ಸಂಪ್ರಾದಾಯವನ್ನು ಹೊಂದಿದೆ. ಮಕ್ಕಳಿಗೆ ಕೇವಲ ವಿದ್ಯಾಭ್ಯಾಸ ಕೊಡುವುದು ಅಷ್ಟೇ ಮುಖ್ಯವಲ್ಲ. ಜತೆಗೆ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಗುಣಗಳು, ಸಂಸ್ಕೃತಿಯನ್ನು ಕಲಿಸಬೇಕು ಎಂದು ಶ್ರೀಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿಯ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ಹೇಳಿದರು.
ಇವರು ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿಯ ಆಶ್ರಯದಲ್ಲಿ ಶ್ರೀಮದ್ ಭಗವದ್ಗೀತಾ ಪಾರಾಯಣ, ಶ್ರೀ ಕೈವಾರ ಯೋಗಿ ನಾರಾಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವ ಅಮೃತ ರಸಧಾರೆಯ ೨೦೭ ನೇ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ ೧೫೮ ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಭರತ ಖಂಡದಲ್ಲಿ ಜನಿಸಿದ ವೀರ ಬ್ರಹ್ಮೇಂದ್ರ ಸ್ವಾಮೀಜಿ ನಾರೇಯೆಣ ತಾತಯ್ಯ ಇವರೆಲ್ಲರೂ ಜಗತ್ತಿನ ಅಂಕುತೊಂಕುಗಳನ್ನು ತಿದ್ದಲು ಕೀರ್ತನೆಗಳ ಮೂಲಕ ಪ್ರಚಾರ ನಡೆಸಿ ಮುಂದೆ ನಡೆಯುವ ಭವಿಷ್ಯತ್ಕಾಲದ ಘಟನೆಗಳನ್ನು ತಿಳಿಯಪಡಿಸುತ್ತಿದ್ದರು. ದೇಶಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ. ಈ ಸಮಾಜ ಅತ್ಯಂತ ಶ್ರಮಿಕ ಹಾಗೂ ಸಂಸ್ಕಾರ ಇರುವ ವರ್ಗವಾಗಿದೆ. ಹಿಂದುಳಿದಿರುವ ಇವರು ಸರ್ಕಾರದ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರಬೇಕು. ಕೌಶಲ್ಯ ತರಬೇತಿ ಪಡೆಯುಲು ಮುದ್ರಾ ಬ್ಯಾಂಕ್‌ನಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕಿ ದೀಪ ರಮೇಶ್ ಮಾತನಾಡಿ, ಬ್ರಹ್ಮದೇವನ ಪುತ್ರ ಪುರಾಣದಲ್ಲಿ ಉಲ್ಲೇಖವಾಗಿದ್ದು. ಇವರಿಗೆ ಐದು ಜನ ಪುತ್ರರಿದ್ದಾರೆ. ಮನು ,ಮಾಯಾ, ತ್ವಷ್ಟ, ಶಿಲ್ಪಿ, ದೈವ ಈ ಐದು ಜನ ವಿವಿಧ ಶೈಲಿಯ ವಾಸ್ತುಶಿಲ್ಪ ಕರಕುಶಲತೆಗಳನ್ನು ಚೆನ್ನಾಗಿ ಅರಿತಿದ್ದರು. ಮನು ಕಬ್ಬಿನ ಕೆಲಸ ಮಾಯಾ ಮರದ ಕೆಲಸ ತ್ವಷ್ಟ ಕಂಚು ಮತ್ತು ತಾಮ್ರದ ಕೆಲಸ ಶಿಲ್ಪಿ ಇಟ್ಟಿಗೆ ಕೆಲಸ ದೈವ ಚಿನ್ನ ಬೆಳ್ಳಿ ಕೆಲಸ ಅರಮನೆ ಮಹಲು ಆಯುಧಗಳನ್ನು ಸೇರಿದಂತೆ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದ್ದಾನೆ. ವಿಶ್ವಕರ್ಮನು ಇಂದ್ರಪುರಿ, ಹಸ್ತಿನಾಪುರ ವರ್ಗ, ಲಂಕಾ ಪಟ್ಟಣಗಳನ್ನು ನಿರ್ಮಿಸಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಹೊಸ ಅನ್ವೇಷಣೆಗೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬೈರಕ್ ರಾಷ್ಟ್ರಪ್ರಶಸ್ತಿ ಪಡೆದ ಸತ್ಸಂಗ ಖಜಾಂಚಿ ಗುಂಡಣ್ಣರವರ ಪುತ್ರರಾದ ಹೇಮಂತ್ ಕುಮಾg ರವರನ್ನು, ವಿಶ್ವಕರ್ಮ ಜನಾಂಗದ ಮುಖಂಡರಾದ ನಾಗಭೂಷಣ್, ಶ್ರೀಧರ್‌ರವರುಗಳನ್ನು, ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಸಮಿತಿಯ ಉಪಾಧ್ಯಕ್ಷ ಪಿ.ನಾರಾಯಣಪ್ಪ, ಧಾರ್ಮಿಕ ಚಿಂತಕಾ ವಿ.ಎನ್. ವೆಂಕಟೇಶ್, ನಾಗಯ್ಯ, ಮುರುಳಿಧರ ಭಟ್ಟಾಚಾರ್ಯ, ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ನೇತೃತ್ವದಲ್ಲಿ ನರಸಿಂಹಪ್ಪ, ಟಿ.ಮಹಾತ್ಮಅಂಜನೇಯ, ಸೀತಾಲಕ್ಷ್ಮಿ, ಕೀರ್ತನ ಸಂಗೀತವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ೧೦ ಜನ ಬಡವರಿಗೆ ಕಂಬಳಿ ಗಳು ವಿತರಣೆ – ಮುತ್ತೈದೆಯರಿಗೆ ಸೀರೆ ಕುಪ್ಪಸ ಗಳನ್ನು ವಿತರಣೆ ಮಾಡಲಾಯಿತು. ಭಕ್ತಿಸೇವೆಯನ್ನು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಮತ್ತು ಗಾಯತ್ರಿ ಕ್ಷೇಮಾಭಿವೃದ್ಧಿ ಮಹಿಳಾ ಸಂಘ ವಿಜಯಪುರ ನೆರವೇರಿಸಿದರು.