ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಿ: ಎಸಿ ಗದ್ಯಾಳ

ಇಂಡಿ:ಮಾ.6:ಶ್ರೀಮಂತಿಕೆಯಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಪೋಷಕರು ಮಕ್ಕಳ ಬಗ್ಗೆ ಗಮನಹರಿಸುತ್ತಾ ಅವರ ಭಾವನೆಗೆ ಒತ್ತು ನೀಡುವುದರ ಜತೆಗೆ ಉತ್ತಮ ಸಂಸ್ಕಾರದ ಪಾಠ ಕಲಿಸಬೇಕು ಎಂದು ಉಪವಿಭಾಗಾಧಿಕಾರಿಗಳಾದ ಆಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಾಡಲ್ ಪಬ್ಲಿಕ್ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಶಿಕ್ಷಣ ಅತ್ಯಗತ್ಯ. ಪ್ರತಿಯೊಬ್ಬರೂ ಒಗ್ಗಟ್ಟಾಗಿ ಒಂದಾಗಿ ಮಕ್ಕಳ ಶಿಕ್ಷಣದ ಅಭಿವೃದ್ಧಿಗೋಸ್ಕರ ಶ್ರಮಿಸೋಣ. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ. ಸಮಾಜ ನಮಗಾಗಿ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕಾಗಿ ನಾವು-ನೀವು ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ ಎಂದರು.
ಜಿಒಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಅಲ್ಲಾಬಕ್ಷ ವಾಲಿಕಾರ, ಶಿಕ್ಷಕ ನಾಸೀರ ಇನಾಮದಾರ ಮಾತನಾಡಿದರು.
ಮಕ್ಕಳಿಂದ ಆಕರ್ಷಕ ಮನೋರಂಜನಾ ಕಾರ್ಯಕ್ರಮಗಳು ಜರುಗಿತು. ಕ್ರೀಡೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪದಕಗಳನ್ನು ವಿತರಿಸಲಾಯಿತು
ಮಫ್ತಿ ಅಬ್ದಲ್ ರಹೇಮಾನ ಅರಬ, ಸಂಸ್ಥೆಯ ಅಧ್ಯಕ್ಷರಾದ ಅತೀಕ ಶೇಖ್, ಕಾರ್ಯದರ್ಶಿಯಾದ ಜಾವಿದ ಮುಲ್ಕಾ, ಅಲಹಾಜ್ ನಿಸಾರ ಬಾಗವಾನ, ಪುರಸಭೆ ಸದಸ್ಯರಾದ ಮುಸ್ತಾಕ ಇಂಡಿಕರ, ಅಯ್ಯುಬ ಬಾಗವಾನ, ಶಬ್ಬಿರ ಖಾಜಿ, ಬಿಜಾಪುರ ಮಹಾನಗರ ಪಾಲಿಕೆ ಸದಸ್ಯ ಇರಫಾನ ನಾಡೆವಾಲೆ, ಉರ್ದು ಸಿ.ಆರ್.ಪಿ ಪರವೇಜ್ ಪಟೇಲ್, ಸಮಾಜ ಸೇವಕ ಹಸನ ಮುಜಾವರ, ಮಹಿಬೂಬ ಶೇಖ್, ಫಯಾಜ ಬಾಗವಾನ, ಹಾಫಿಜ ಶಾಕೀರ ಮುಲ್ಲಾ, ದಾದಾಹಯಾತ ನಾಯಿಕೋಡಿ, ಶಿಕ್ಷಕರಾದ ಅಬ್ದುಲಾ ಪಟೇಲ್, ಮುಜೀಬ ಅಫಜಲಪೂ, ನಬಿರಸೂರ ಬಾಗವಾನ ಮತ್ತಿತರಿದ್ದರು.