ಮಕ್ಕಳಿಗೆ ಉತ್ತಮ ಸಂಸ್ಕಾರ. ದೇಶಭಕ್ತಿ ಕಲಿಸಿ : ಸವದಿ

ಅಥಣಿ :ಫೆ.5: ಭಾರತೀಯ ಯೋಧರು ನಮ್ಮ ಹೆಮ್ಮೆ, ನಮ್ಮ ಆಸ್ತಿ. ಎಂತಹ ಕಠಿಣ ಸಂದರ್ಭದಲ್ಲೂ ದೇಶವನ್ನು ಕಾಯುವ ವೀರರು. ಸಾವೇ ಎದುರಿಗಿದ್ದರೂ ವೀರಾವೇಶದಿಂದ ಹೋರಾಡುವ ಛಲಗಾರರು ನಮ್ಮ ವೀರರು. ಹೀಗೆ ದೇಶ ಕಾಯುವಾಗಲೇ ಅದೆಷ್ಟೋ ವೀರರು ಹುತಾತ್ಮರಾಗಿದ್ದಾರೆ. ಇವರ ತ್ಯಾಗ, ದೇಶಪ್ರೇಮವನ್ನು ಎಷ್ಟು ಹೊಗಳಿದರೂ ಅದು ಕಡಿಮೆಯೇ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 15 ನೇ ವಾರ್ಷಿಕೋತ್ಸವ ನಿಮಿತ್ಯ ಆಯೋಜನೆ ಮಾಡಲಾಗಿದ್ದ ಸೈನಿಕರಿಗೊದು ಸಲಾಂ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇನ್ನೂ ಇಪ್ಪತ್ತು ವರ್ಷದ ನಂತರ ಇಡೀ ವಿಶ್ವವನ್ನು ಭಾರತ ದೇಶ ನಿಯಂತ್ರಿಸುವ ವ್ಯವಸ್ಥೆ ನಿರ್ಮಾಣವಾಗುತ್ತೆ, ಇಂದಿನ ಮಕ್ಕಳಿಗೆ ಸಂಸ್ಕಾರ ಮತ್ತು ದೇಶಭಕ್ತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ .ಮಕ್ಕಳನ್ನ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಪೆÇೀಷಕರಿಗೆ ಕಿವಿ ಮಾತು ಹೇಳಿದರು.
ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದ್ದುತ್ತಿರುವ ದೇಶವಾಗುತ್ತಿದೆ. ನಮ್ಮ ದೇಶದಲ್ಲಿರುವಂತಹ ಬುದ್ಧಿವಂತರು ಧೈರ್ಯಶಾಲಿಗಳು ಬೇರೆ ಯಾವುದೇ ದೇಶದಲ್ಲಿಲ್ಲ. ಮುಂದೊಂದು ದಿನ ಭಾರತ ಜನರು ವಿದೇಶಗಳಲ್ಲಿ ಅಧಿಕಾರ ನಡೆಸುವಂತರಾಗುತ್ತಾರೆ. ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರ ನೀಡಿದರೆ ಸಾಲದು ಅದರ ಜೊತೆಗೆ ಮಾನವೀಯ ಮೌಲ್ಯಗಳನ್ನ ಉತ್ತಮ ಸಂಸ್ಕಾರವನ್ನು ನೀಡಿದಾಗ ಮಾತ್ರ ದೇಶಪ್ರೇಮ, ದೇಶಭಕ್ತಿ ಬರಲು ಸಾಧ್ಯವಾಗುತ್ತದೆ. ಸೈನಿಕರಿಗೊಂದು ಸಲಾಂ ಕಾರ್ಯಕ್ರಮ ಏರ್ಪಡಿಸಿದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ವೇಳೆ ಚಿಂತಕರಾದ ವಿರೇಶ ಪಾಟೀಲ ಗಡಿ ಕಾಯುವ ಸೈನಿಕರ ಬಗ್ಗೆ ಹೃದಯ ಸ್ಪರ್ಶಿ ಮಾತನಾಡಿ , ಇಂದು ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರವುದರಿಂದ ನಾವು ದೇಶದಲ್ಲಿ ಶಾಂತಿ ಹಾಗೂ ನೆಮ್ಮದಿಯಿಂದ ಇದ್ದೇವೆ, ಈ ಹಿಂದೆ ಶತ್ರು ರಾಷ್ಟ್ರಗಳು ನಮ್ಮ ಮೇಲೆ
ಅತಿಕ್ರಮಣ ಮಾಡಿದಾಗ ಭಾರತೀಯ ಯೋಧರು ನೀಡಿದ ಪ್ರತ್ಯುತ್ತರ ವರ್ಣಿಸಲು ಸಾಧ್ಯವಿಲ್ಲ. ಆ ಸಮಯದಲ್ಲಿ ನಮ್ಮ ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ತ್ಯಾಗಮಾಡಿ ತಾಯ್ನಾಡನ್ನು ರಕ್ಷಣೆ ಮಾಡಿದ್ದಾರೆ. ಇಂದು ವಿಶ್ವದ ಎಲ್ಲ ದೇಶಗಳ ಸೈನಿಕರಿಗಿಂತ ನಮ್ಮ ಭಾರತದ ಸೇನೆ ಬಲಿಷ್ಠವಾಗಿದೆ. ಯಾವದೇ ಸಂದರ್ಭದಲ್ಲಿ ಎಂತಹ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸೇನೆ ಸದಾ ಸಿದ್ಧವಾಗಿರುತ್ತದೆ, ಕೊರೆವ ಚಳಿಯಲ್ಲಿಯೂ ಸಿಯಾಚಿನ್ ಪ್ರದೇಶದಲ್ಲಿ ನಮ್ಮ ಸೈನಿಕರು ಪಾಕಿಸ್ತಾನದ ಸೈನಿಕರ ವಿರುದ್ಧ ಹೋರಾಡಿದ್ದನ್ನು ನೆನೆದರೆ ತನ್ನಿಂದ ತಾನೇ ಕೈಗಳು ಸೆಲ್ಯೂಟ್ ಮಾಡುತ್ತವೆ. ಅಂತಹ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹೆಮ್ಮೆಯಾಗುತ್ತದೆ’
ಈ ಹಿಂದೆ ನಡೆದ ಕಾರ್ಗಿಲ್ ಯುದ್ಧದ ಘಟನೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಪ್ರಾಸ್ತಾವಿಕವಾಗಿ ಸೈನಿಕರಿಗೊಂದು ಸಲಾಂ ಎಂಬ ವಿಶೇಷ ಕಾರ್ಯದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ , ಅಥಿತಿಗಳಾಗಿ ಘಟಿವಾಳಪ್ಪ ಗುಡ್ಡಾಪುರ, ಸಂಸ್ಥೆಯ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಮಂತ ಸೋನಕರ, ಶ್ರೀದೇವಿ ದರಬಾರೆ, ಟಿ ಎ, ಮೋಗೆರ, ಶ್ರೀನಿವಾಸ ಪಟ್ಟಣ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಸೈನಿಕರು, ಮಾಜಿ ಸೈನಿಕರು, ಪಾಲ್ಗೊಂಡಿದ್ದರು. ಹಲವು ಉಪಸ್ಥಿತರಿದ್ದರು.