ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ

ಬೀದರ್:ನ.20: ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನೂ ಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಸಲಹೆ ಮಾಡಿದರು.

ನಗರದ ಕುಂಬಾರವಾಡದ ಬ್ಯಾಂಕ್ ಕಾಲೊನಿಯ ಬ್ರಹ್ಮವಿದ್ಯಾ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ದೇಶದ ಭವಿಷ್ಯವಾಗಿದ್ದಾರೆ. ಹೀಗಾಗಿ ಅವರನ್ನು ಆದರ್ಶ ಪ್ರಜೆಗಳಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ಮಕ್ಕಳ ವಿಕಾಸದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಾಬುರಾವ್ ಗೊಂಡ ಹೇಳಿದರು.

ಗಂಗೋತ್ರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಿದ್ರಾಮಯ್ಯ ಹಿರೇಮಠ, ಕಾಂಗ್ರೆಸ್ ಮುಖಂಡ ಧನರಾಜ ಹಂಗರಗಿ, ಸಂಸ್ಥೆಯ ಕಾರ್ಯದರ್ಶಿ ಸನ್ಮುಖಯ್ಯ ಹಿರೇಮಠ ಮಾತನಾಡಿದರು.

ಸಂಸ್ಥೆಯ ಖಜಾಂಚಿ ಸತೀಶ ಚೌಧರಿ, ಶಿಕ್ಷಕಿಯರಾದ ರಂಜನಾ ದಂಡೆ, ಅಶ್ವಿನಿ ಧನಶ್ರೀ, ಸೌಜನ್ಯ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ರಂಗಮ್ಮ ಗಡ್ಡೆ ಸ್ವಾಗತಿಸಿದರು. ಅಶ್ವಿನಿ ಧನಶ್ರೀ ನಿರೂಪಿಸಿದರು. ರಾಜಶ್ರೀ ಹುಗ್ಗೆ ವಂದಿಸಿದರು.

ಮಕ್ಕಳಿಂದ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಭಿಕರ ಮನ ರಂಜಿಸಿದವು.