ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ :ಜೇಮಸಿಂಗ ಮಹಾರಾಜ್

ಕಲಬುರಗಿ:ಜು.03: ಸಮಾಜ ಕತ್ತಲಿಂದ ಬೆಳಕಿಗೆ ಬರಬೇಕಾದರೆ ಶಿಕ್ಷಣ ಬಹಳ ಮುಖ್ಯವಾಗಿದೆ ಅದಕ್ಕೆ ಎಲ್ಲಾ ಪೆÇೀಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಶ್ರೀ ಸದ್ಗುರು ಜೇಮಸಿಂಗ ಮಹಾರಾಜ್ ಅವರು ಕಿವಿಮಾತು ಹೇಳಿದರು.

ನಗರದ ಬಂಜಾರ ಭವನದಲ್ಲಿ ಗುರು ಪೂರ್ಣಿಮಾ ಪ್ರಯುಕ್ತ ಡಾ. ರಾಮರಾವ್ ತತ್ ಚಮಹಾರಾಜ್ ಜಯಂತೋತ್ಸವ ಕಾರ್ಯಕ್ರಮವನ್ನು ಪೂಜೆ ಮಾಡಿ ಆಚರಿಸಿ ಅವರು ಮಾತನಾಡಿ ನಾವು ಒಂದು ಉತ್ತಮ ಮಟ್ಟಕ್ಕೆ ಬರಬೇಕಾದರೆ ಗೋವಾ, ಗುಟ್ಕಾ ಮತ್ತು ಮಧ್ಯಪಾನದಿಂದ ದೂರವಿರಬೇಕೆಂದು ಹೇಳಿದರು.
ಗುರು ಎಂದರೆ ಗು ಅಂದರೆ ಕತ್ತಲು ರು ಅಂದ್ರೆ ಬೆಳಕು ಗು ಮತ್ತು ರು ಕೂಡಿ ಗುರು ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು.

ತಂದೆ-ತಾಯಿ ಜನ್ಮ ನೀಡಿರುವ ಮಕ್ಕಳಿಗೆ ವಿದ್ಯಾಭ್ಯಾಸ ಬುದ್ಧಿ, ಶಿಕ್ಷಣ, ನಡುವಳಿಕೆ ಮತ್ತು ಮಾರ್ಗದರ್ಶನವನ್ನು ತೋರಿಸುವ ಕಾರ್ಯವನ್ನು ಗುರುಗಳು ಮಾಡುತ್ತಾರೆ ಎಂದು ತಿಳಿಸಿದರು.

ಏನಾದರೂ ಆಗು ಮೊದಲು ಮಾನವನಾಗು ಮಾನವನಾದರೆ ಆಚಾರ ರೂಪ ಮಾನವನಾಗು ಹೊರೆತು ಆಕಾರ ರೂಪ ಮಾನವ ಆಗಬಾರದು ಎಂದು ಹೇಳಿದರು.
ಬಂಜಾರ ಸಮಾಜಕ್ಕೆ ಬೆಳಕಿಗೆ ತರುವುದಾಗಿ ಡಾ. ರಾಮರಾವ್ ಮಹಾರಾಜ್ ಮತ್ತು ಶ್ರೀ ಸಂತ ಸೇವಾಲಾಲ್ ಮಹಾರಾಜ್ ಅವರು ದಿನನಿತ್ಯ ಪ್ರತಿಯೊಂದು ತಾಂಡಗಳಿಗೆ ಹೋಗಿ ಜಾಗೃತಿ ಮತ್ತು ಆಶೀರ್ವಾದ ಮಾಡಿ ಕತ್ತಲಿಂದ ಬೆಳಕಿಗೆ ತರುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ಸಂತ ಸೇವಾಲಾಲ್ ಮಹಾರಾಜರ ಜನ ಜಾಗೃತಿ ಹಾಗೂ ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಶ್ಯಾಮರಾವ ಪವಾರ, ಬಿಬಿ ನಾಯಕ, ರವಿ ರಾಠೋಡ, ಛತ್ರು ರಾಠೋಡ, ಸುನಿಲ ಚವ್ಹಾಣ, ವಿನೋದ ಜಾಧವ್, ಬಾಬು ಜಾಧವ್, ಲಕ್ಷ್ಮಣ ರಾಠೋಡ, ಗೋಪಿ ರಾಠೋಡ, ಖೇಮಸಿಂಗ ಪವಾರ, ಮಾರುತಿ ಪವಾರ , ವಿನೋದ ಜಾಧವ್ ಹಾಗೂ ಸಮಾಜದ ಹಿರಿಯರು ಯುವಕರು ಮತ್ತು ಮುಖಂಡರು ಉಪಸ್ಥಿತರಿದ್ದರು.