
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.02: ತಾಲ್ಲೂಕಿನ ಅರಸೀಕೆರೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ದಿನಾಂಕ:-01.09.2023 ರ ಶುಕ್ರವಾರ ದಂದು ಶನಿವಾರ ದ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸದರಾದ ವೈ. ದೇವೇಂದ್ರಪ್ಪ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ- ನಾನು ಇದೇ ಶಾಲೆಯಲ್ಲಿ ಓದಿದ್ದೇನೆ, ಈಗ ಈ ಶಾಲೆಗೆ 100 ವರ್ಷ ತುಂಬಿದೆ, ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ.
ಈ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ದೇಶದ ಒಳ್ಳೆಯ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.
ಸಂಸದರ ಅನುದಾನದಲ್ಲಿ 5 ನೇ ತರಗತಿಯಿಂದ 10 ನೇ ತರಗತಿ ಮಕ್ಕಳಿಗೆ ಹಾಸ್ಟೆಲ್ ಮುಂಜೂರು ಮಾಡಲಾಗಿದೆ, ಈ ಶಾಲೆಗೆ ನಾಲ್ಕು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.
ಹೊಸದಾಗಿ ಹೈಟೆಕ್ ಶೌಚಾಲಯ, ಅಡುಗೆ ಕೋಣೆ ಮುಂಜೂರಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ.ಅಧ್ಯಕ್ಷ ಡಿ. ಹನುಮಂತಪ್ಪ, ಉಪಾಧ್ಯಕ್ಷೆ ಅನಿತಾ,ಸದಸ್ಯರಾದ ವೈ.ರಂಗಪ್ಪ,ಮುಖಂಡರಾದ ಅಬ್ದುಲ್ ಸಾಹೇಬ್, ಶಾಲಾ ಪ್ರಭಾರಿ ಮುಖ್ಯ ಗುರುಗಳಾದ ಹಾಲಪ್ಪ, ಸಹ ಶಿಕ್ಷಕರಾದ ಬಂದಮ್ಮ,ಮಾಲತೇಶ್ ಪಾಟೀಲ್,ಕೆಂಪಪ್ಪ,ರೇಣುಕಾ, ಚೇತನ, ಗಿರಿಜಾ,ತಾಸೀನಾ ಬೇಗಂ ಹಾಗೂ ಸೌಜನ್ಯ ಹಾಜರಿದ್ದರು.