
ಇಂಡಿ:ಮಾ.13: ತಾಲೂಕಿನ ಅರ್ಜುಣಗಿ ಕೆಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ರಾಘವೇಂದ್ರ ಕುಲಕರ್ಣಿ ಅವರು,ಸ್ವರ್ಧಾತ್ಮಕ ಜಗತ್ತಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಲು ಮುಂದಾಗಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಬೇಕು ಮನೆಯಲ್ಲಿ ಪಾಲಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ಉತ್ತಮ ಸಂಸ್ಕಾರ.ಜ್ಞಾನ ನೀಡಿದರೆ ಒಬ್ಬ ವಿದ್ಯಾರ್ಥಿಯು ದೇಶದ ಉತ್ತಮ ಪ್ರಜೆಯಾಗಲು ಸಾಧ್ಯವಿದೆ. ಸರಕಾರಿ ಶಾಲೆಗಳು ದೊಡ್ಡ ಮಟ್ಟದಲ್ಲಿ ಬೆಳೆಸಬೇಕಾದರೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ವೇ ಮೂ ಗುರುಶಾಂತಯ್ಯ ಹಿರೇಮಠ ಮಾತನಾಡಿದರು.ಸಾನಿದ್ಯವನ್ನು ಶ್ರೀ ಶಿವಯ್ಯ ಸ್ವಾಮಿ ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷ ಧ್ಯಾಮನಗೌಡ ಬಿರಾದಾರ ವಹಿಸಿಕೊಂಡಿದ್ದರು. ಉದ್ಘಾಟನೆಯನ್ನು ಗಣೇಶ ಸುಪನೂರ ಮಾಡಿದರು.
ಈ ಸಂದರ್ಭದಲ್ಲಿ ಪಂಚಪ್ಪ ಹಂಜಗಿ.ಲಾಲಭಾಷಾ ಚಬನೂರ.ಮಹಾಂತೇಶ ತಾವರಖೇಡ.ನಿಂಗಪ್ಪ ಪೂಜಾರಿ.ಕಾಶಿಮ ಕೊಮಡಿ.ರಾಜೇಸಾಬ ಯತ್ನಾಳ.ಶ್ರೀಶೈಲ ಹಂಚನಾಳ.ಮಹ್ಮದಸಾಬ ಮುಲ್ಲಾ.ಬಾಬುಗೌಡ ಬಿರಾದಾರ.ಭಾಗಪ್ಪ ಪರೀಟ.ಭೀರಪ್ಪ ಕರಗಾರ. ಮಹಾದೇವಪ್ಪ ಪಡಗಾನೂರ. ನಂದಪ್ಪ ಪೂಜಾರಿ. ಜಹಾಂಗಿರ ಮುಲ್ಲಾ.ಶರಣಪ್ಪ ಹೊಸೂರ. ಸಿದ್ರಾಮ ಹೊಸೂರ ಡಾ?ಸುರೇಶ ಬಿಜಾಪೂರ.
ಡಾ?ಲಕ್ಕಪ್ಪ ಪೂಜಾರಿ.ಕುತ್ಭುದ್ದಿನ್ ನಾಗಾವಿ.ರವಿ ಕಾಂಬಳೆ.ಶಿವಯೋಗಿ ಹೊಸಮನಿ.ನಾಮದೇವ ಸೂಪನೂರ.ಹಸನಸಾಬ ಕೊಮಡಿ.ಮಹ್ಮದ ಶೇಖ.ಮೈಹಿಬೂಬ ಮುಲ್ಲಾ.ಮಶ್ಯಾಕ ಮುಲ್ಲಾ.ಪರಮಗೌಡ ಬಿರಾದಾರ. ಮುಖ್ಯ ಶಿಕ್ಷಕ ಆರ್ ಆರ್ ಠಾಕೂರ ಶಿಕ್ಷಕರಾದ ಎ ಆರ್ ಲಾಳಸಂಗಿ,ಜೆ ಪಿ ಚವಡಿಹಾಳ,ಈರಣ್ಣ ಜಮಾದಾರ ಸೇರಿದಂತೆ ಗ್ರಾ ಪಂ ಸದಸ್ಯರು.ಎಸ್ ಡಿ ಎಮ್ ಸಿ ಸರ್ವ ಸದಸ್ಯರು, ಅನೇಕ ಅತಿಥಿಗಳು ಉಪಸ್ಥಿತರಿದ್ದರು.ಶಿಕ್ಷಕರಾದ ಗಂಗಾಧರ ತಾವರಖೇಡ ಹಾಗೂ ಭೀಮನಗೌಡ ಬಿರಾದಾರ. ನಿರೂಪಿಸಿ ವಂದಿಸಿದರು.