ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ

ಕೋಲಾರ,ಜ.೭:ಸಮಾಜ ಸೇವಕರು ಹಾಗೂ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಗೌಡರು ಶಾಲೆಯಲ್ಲಿ ಪ್ರತಿನಿತ್ಯ ಮಕ್ಕಳಿಗೆ ಉಷ್ಣಾಂಶವನ್ನು ಪರೀಕ್ಷಿಸುವ ಥರ್ಮಲ್ ಸ್ಕ್ಯಾನರ್ ಮತ್ತು ಎಲ್ಲಾ ಮಕ್ಕಳಿಗೆ ಉಚಿತ ಮಾಸ್ಕ್ ಗಳನ್ನ ವಿತರಣೆ ಮಾಡಿದರು.
ಕೋಲಾರ ತಾಲೂಕಿನ ನರಸಾಪುರ ಹೋಬಳಿ ದಿನ್ನೆಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎನ್.ರಾಜೇಶ್ ರವರ ಮೂಲಕ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮಣಗೌಡ ಮಾತನಾಡಿ, ಮುಂದಿನ ವಾರ ಇದೇ ಶಾಲೆಗೆ ಕೋವಿಡ್-೧೯ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಶ್ವತವಾದ ಸ್ಟ್ಯಾಂಡಿಂಗ್ ಸ್ಯಾನಿಟೈಜ್ ಮಿಷನ್ ಕೊಡುಗೆಯಾಗಿ ನೀಡುವುದಾಗಿ ಭರವಸೆ ನೀಡಿದರು.
ಇವರ ಕೊಡುಗಡೆಯನ್ನ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್.ರಾಜೇಶ್, ಸದಸ್ಯೆ ಲತಾ ಎನ್.ನಾಗೇಶ್, ಮುಖ್ಯ ಶಿಕ್ಷಕರಾದ ಕೆ.ಟಿ ನಾಗರಾಜ, ಸಹ ಶಿಕ್ಷಕರಾದ ಎಂ.ಕೊಳ್ಳೆಪ್ಪ, ಯಲ್ಲಪ್ಪ, ಮಲ್ಲಿಕಾಬೇಗಂ, ಅಂಗನವಾಡಿ ಶಿಕ್ಷಕರಾದ ಕೆ.ರಾಧ, ಅಡುಗೆ ಸಿಬ್ಬಂದಿಯವರಾದ ಕೆ.ಪಿ.ಪುಷ್ಪ, ಪ್ರೇಮಾ, ರತ್ನಮ್ಮ ಇನ್ನಿತರರು ಉಪಸ್ಥಿತರಿದ್ದರು.