ಮಕ್ಕಳಿಗೆ ಉಚಿತ ಬ್ಯಾಗ್ ಗಳ ವಿತರಣೆ

ಹರಿಹರ.ಸೆ.೮; ತಾಲೂಕಿನ ಮಳಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆಕ್ವೀನ್  ಕಂಪನಿಯ ವತಿಯಿಂದ ಉಚಿತವಾಗಿ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು. ಇಂತಹ ಶಾಲೆಗಳಿಂದನೇ ಅಭ್ಯಾಸ ಮಾಡಿ ಜೀವನ ಕಟ್ಟಿಕೊಂಡ ಪ್ರತಿಯೊಬ್ಬರೂ ತಾವು ಕಲಿತ ಶಾಲೆಗೆ   ಮೂಲಭೂತ ಶೈಕ್ಷಣಿಕ ಸೌಕರ್ಯಗಳನ್ನು ಕೊಡುಗೆ ನೀಡುವಂತಾಗಬೇಕು ಆಗಾದಾಗ ಮಾತ್ರ ಉತ್ತಮ ಪ್ರಜೆಗಳನ್ನು ಕಾಣಬಹುದು ಇಲ್ಲಿಯ ವಿದ್ಯಾರ್ಥಿಗಳ ಬ್ಯಾಗ್ ಪಡೆದಾಗ ಅವರಲ್ಲಾದ ಸಂಭ್ರಮ ನೋಡಲು ಖುಷಿ ತಂದಿತು ಎಂದು ಕಂಪನಿಯ ಮುಖ್ಯಸ್ಥ ಬಸಯ್ಯ ಹಿರೇಮಠ ತಿಳಿಸಿದರು.  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶರಣ ಕುಮಾರ್ ಹೆಗಡೆ ಮಾತನಾಡಿ   ಈಗಾಗಲೇ ಆ ಕ್ವೀನ್ಪ   ಕಂಪನಿಯವರು  ಕುಂಬಳೂರು,ದೂಳೆಹೊಳೆ ಶಾಲಾ ವಿದ್ಯಾರ್ಥಿಗಳಿಗೆ 400ಬ್ಯಾಗ್ ವಿತರಣೆ ಮಾಡಿದ್ದರ .ಕಳೆದವರ್ಷ 11 ಶಾಲೆಗಳಿಗೆ 1000 ಬ್ಯಾಗ್ ವಿತರಿಸಿದ್ದರು ಮತ್ತು ಕೊವಿಡ್ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗೆ 2.5 ಲಕ್ಷದಷ್ಟು ಚಿಕಿತ್ಸಾ ಸಲಕರಣೆಗಳನ್ನು ಒದಗಿಸಿ ತಮ್ಮ ಸಮಾಜ ಸೇವೆ ಒದಗಿಸಿದಂತ ಕಂಪನಿಯ ಅಧ್ಯಕ್ಷರಾದ ಎಸ್ಪಿ ರವಿ, ಯದುನಾಥ ಶ್ರೀನಿವಾಸಮೂರ್ತಿ , ವಿಜಯ್   ಇವರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು  ಸಲ್ಲಿಸಿದರು . ಕಾರ್ಯಕ್ರಮದಲ್ಲಿ   ಸಂಸ್ಥೆಯ ನಿರ್ದೇಶಕ ತರುಣ್ ಕುಮಾರ್, ಮಂಜುನಾಥಯ್ಯ,ಉಮೇಶಪ್ಪ, ಲೀಲಾವತಿ,ಲಕ್ಷ್ಮಣ ಎಇ, ಮಲ್ಲಿಕಾರ್ಜುನ ಅಂಗಡಿ, ಶಿವಾನಂದ್ ಕೆ ಟಿ, ನಾಗೇಂದ್ರಪ್ಪ ವಿ, ಕುಬೇರಪ್ಪ ಸಿಪಿ ಮುಂತಾದವರು ಉಪಸ್ಥಿತರಿದ್ದರು.

Attachments area