ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

ಅರಕೇರಾ.ನ.೧೯- ಕೋವಿಡ್-೧೯ ವೈರಸ್ ಸೋಂಕು ತಡೆಗಟ್ಟಲು ಹಾಗೂ ನಿಯಂತ್ರಿಸಲು ೮.೯,೧೦ ನೇ ತರಗತಿಯವರಿಗೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿರುವ ಹಿನ್ನೆಯಲ್ಲಿ ಅರಕೇರಾ ಗ್ರಾಮದಲ್ಲಿನ ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅಭ್ಯಾಸಮಾಡುತ್ತಿರುವ ಮಕ್ಕಳಿಗೆ ಬಿಸಿಊಟದ ಆಹಾರ ಧಾನ್ಯಗಳನ್ನು ದೇವದುರ್ಗಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕ ಅಕ್ಷರದಾಸೋಹ ಸಹಾಯಕ ನಿರ್ದೇಶಕರ ಆದೇಶದ ಮೇರೆಗೆ ಮಕ್ಕಳಿಗೆ ಇಂದು ಆಹಾರಧ್ಯಾನಗಳನ್ನು ವಿತರಿಸಿಲಾಯಿತು.
ಪಾಲಕರ ಜೊತೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಕೊಂಡು ಸಮಾಜಿಕ ಅಂತರಕಾಯ್ದುಕೊಂಡು ಆಹಾರಧಾನ್ಯಗಳನ್ನು ಪಡೆದುಕೊಂಡರು ಸಮಾಜಿಕ ಅಂತರಕಾಯ್ದುಕೊಂಡು ಆಹಾರ ಧ್ಯಾನ್ಯಗಳನ್ನು ಪಡೆದುಕೊಂಡರು. ಸಂದರ್ಬದಲ್ಲಿ ಶಾಲಾ ಮುಖ್ಯೋಪಾದಯ್ಯರಾದ ಜಗಧೀಶಪ್ಪ ಬಿ.ಗಣೇಕಲ್ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಡಾ.ಶಿವರಾಜನಾಡಗೌಡ, ಸದಸ್ಯರುಗಳಾದ ಮಲ್ಲಿಕಾರ್ಜುನಸ್ವಾಮಿ ಹಿರೇಮಠ ,ಅಮರೇಶಕುರುಕುಂದಿ, ಮುದುಕಪ್ಪ ಸಹಶಿಕ್ಷರಾದ ರಾಜು ,ಹುಸೇನಬಾಷ ಮೀನಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

ಚಿತ್ರಸುದ್ದಿ ಸಂಖ್ಯೆ ೧೮ ಅರಕೇರಾ ಗ್ರಾಮದಲ್ಲಿನ ಶ್ರೀಸಿದ್ದಯ್ಯ ಹವಲ್ದಾರ ಸ.ಪ್ರೌ.ಶಾಲೆಯಲ್ಲಿ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ