ಮಕ್ಕಳಿಗೆ ಆಕಾಶ ಬುಟ್ಟಿ ತಯಾರಿಕಾ ಕಾರ್ಯಾಗಾರ

ವಿಜಯಪುರ, ನ.12-ಇಲ್ಲಿಯ ಶಿಕ್ಷಣ ಚೇತನ ಸಂಸ್ಥೆ ಬಳಗದವರು ನಗರದ ಗೋಡಬೋಲೆಮಾಳಾ ಬಡಾವಣೆಯ ಶ್ರೀ ತ್ರಿವಿಕ್ರಮ ದೇವಸ್ಥಾನದಲ್ಲಿ ಈಚೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಮಕ್ಕಳಿಗಾಗಿ ಆಕಾಶ ಬುಟ್ಟಿ ತಯಾರಿಕಾ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.
ಬಡಾವಣೆಯ ಸುತ್ತ ಮುತ್ತಲಿನ ಸುಮಾರು 18-20 ಮಕ್ಕಳು ಇದರಲ್ಲಿ ಭಾಗವಹಿಸಿ ಸ್ವತ: ತಮ್ಮ ಕೈಯಿಂದ ಆಕಾಶ ಬುಟ್ಟಿಯನ್ನು ತಯಾರಿಸಿ, ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಬೆಳಗುವ ನಿಟ್ಟಿನಲ್ಲಿ ತೆಗೆದುಕೊಂಡು ಹೋದರು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸ್ಮಿತಾ ಕೃಷ್ಣಮೂರ್ತಿ ಪಾಟೀಲ್. ಆಕಾಶ ಬುಟ್ಟಿಯ ಮಾದರಿಯೊಂದನ್ನು ತಯಾರಿಸಿ ಮಕ್ಕಳಿಗೆ ಆಕಾಶ ಬುಟ್ಟಿಯನ್ನು ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು.
ಸೃಷ್ಟಿ, ಸಮೃದ್ಧಿ, ದಿಶಾ, ಮಧುಶ್ರೀ, ವಿಜಯಲಕ್ಷ್ಮೀ, ಜ್ಯೋತಿ, ಸಾಕ್ಷಿ, ಪ್ರತಿಭಾ, ಸ್ವರ, ದರ್ಶನ, ಮಧುಕರ, ಸಮರ್ಥ, ಅಕ್ಷಯ, ಕುಶಲ, ಸುಧನ್ವ ಮುಂತಾದ ಮಕ್ಕಳು ಕಾರ್ಯಾಗಾರದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮೂರು ದಿನಗಳ ಕಾಲ, ಹಿರಿಯಜ್ಜಿ ಸೋಲಾಪುರ ನಿವಾಸಿ ಪದ್ಮಾವತಿ ಬಿಜಾಪುರ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುವ ಮೂಲಕ ಅವರಲ್ಲಿ ಕಥೆ ಕುರಿತು ಆಸಕ್ತಿ ವಹಿಸುವಂತೆ ಮಾರ್ಗದರ್ಶನ ನೀಡಿದರು. ಅಜ್ಜಿಯಿಂದ ಕಥೆ ಕೇಳುವ ಹಿಂದಿನ ಪರಿಪಾಠ ಈ ಕಾರ್ಯಕ್ರಮದಲ್ಲಿ ಮುಂದುವರೆಯಿತು.
ಸಂಸ್ಥೆಯ ಸಂಚಾಲಕ ಪ್ರೋ ಅನಂತ ಪಾಟೀಲ್ ಎಲ್ಲ ಮಕ್ಕಳಿಗೆ ಆಕಾಶ ಬುಟ್ಟಿ ತಯಾರಿಸಲು ಅವಶ್ಯಕವಾದ ಸಾಮಗ್ರಿಗಳನ್ನು ಒದಗಿಸಿದರು.