
ಕೋಲಾರ,ಆ,20-ಮಕ್ಕಳ ಅಪೌಷ್ಠಿಕತೆ ನಿವಾರಣೆ ಜತೆಗೆ ಗೈರುಹಾಜರಿ ತಪ್ಪಿಸುವುದರ ಜತೆಗೆ ಮಕ್ಕಳಲ್ಲಿನ ಹಸಿವು ನೀಗಿಸಿ ಅವರು ಕಲಿಕೆಯತ್ತ ಹೆಚ್ಚಿನ ಗಮನಹರಿಸುವಂತೆ ಮಾಡುವಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮ ಅತಿ ಹೆಚ್ಚು ಮಹತ್ವವಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಅಭಿಪ್ರಾಯಪಟ್ಟರು.
ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಪಂ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ವತಿಯಿಂದ ೨೦೨೩-೨೪ನೇ ಸಾಲಿನ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆಗೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರ ೧ ರಿಂದ ೮ನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ ನೀಡುತ್ತಿದ್ದು, ಪ್ರೌಢಶಾಲೆಯಲ್ಲಿ ಉಳಿದ ೯ ಮತ್ತು ೧೦ನೇ ತರಗತಿ ಮಕ್ಕಳಿಗೂ ಮೊಟ್ಟೆ ನೀಡಬೇಕು ಎಂದ ಬೇಡಿಕೆ ಇತ್ತು. ಆ ಬೇಡಿಕೆಯನ್ನು ಸರ್ಕಾರ ಇಂದು ಈಡೇರಿಸಿದ್ದು, ಪ್ರೌಢಶಾಲೆಯ ೧೦ನೇ ತರಗತಿವರೆಗೂ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ವಾರಕ್ಕೆರಡು ದಿನ ಈ ಸೌಲಭ್ಯ ಸಿಗುತ್ತಿದೆ ಎಂದರು.
ಚಾಲನೆ ನೀಡಿದ ಎಸ್‌ಡಿಎಂಸಿ ಅಧ್ಯಕ್ಷೆ ಹೇಮಲತಾ, ಬಿಸಿಯೂಟದ ಜತೆ ಮೊಟ್ಟೆಯೂ ಸಿಗುತ್ತಿದ್ದು, ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯುವ ಮೂಲಕ ಶಾಲೆಗೆ ಮತ್ತಷ್ಟು ರ್‍ಯಾಂಕ್‌ಗಳು ಬರುವಂತಾಗಲಿ, ಕಲಿಕಾ ಆಸಕ್ತಿ ಹೆಚ್ಚಲಿ ಎಂದು ಹಾರೈಸಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಮಕ್ಕಳಲ್ಲಿ ಅಪೌಷ್ಠಿಕತೆ ನೀಗಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಲಿ ಎಂದು ಹಾರೈಸಿದರು.
ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಉಪಪ್ರಾಂಶುಪಾಲ ವೆಂಕಟೇಶಪ್ಪ, ಮಾತನಾಡಿದರು.ಸಹಾಯಕ ನಿರ್ದೇಶಕ ಎಸ್.ಟಿ.ಸುಬ್ರಮಣಿ, ಸ್ವಾUತಿಸಿದರು..
ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್, ಬಿಸಿಯೂಟ ಯೋಜನೆಯ ಹೇಮಂತ್, ಉಪನ್ಯಾಸಕರಾದ ಗೋಪಿಕೃಷ್ಣನ್, ಅಶ್ವಥ್ಥ್, ರಾಮಚಂದ್ರಪ್ಪ, ಶಿಕ್ಷಕರಾದ ಲೋಕೇಶಪ್ಪ ದಟ್ಟೇರ್, ತೊಟ್ಲಿ ರಮೇಶ್, ಎನ್.ಎಸ್.ಭಾಗ್ಯ, ಪಣಿಮಲ್ಲಾರ್, ಮುಕುಂದ, ಮಂಜುಳಾ,ಕೌಸರ್, ವಿಜಯಕುಮಾರ್, ನಾರಾಯಣಸ್ವಾಮಿ, ವಿಜಯಲಕ್ಷ್ಮಿ, ಸಂತೋಷಕುಮಾರಿ,ವೀಣಾ, ಫೀರ್‌ದೋಸ್‌ಪಾತಿಮಾ,ಅಶಿಕಾ ಸುಲ್ತಾನಾ, ಮಾಧವರಾವ್ ಮತ್ತಿತರರಿದ್ದು, ಶಿಕ್ಷಕ ರಾಜಣ್ಣ ನಿರೂಪಿಸಿ, ದಿವ್ಯ ತಂಡ ಪ್ರಾರ್ಥಿಸಿದರು.